ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಆಸ್ಪತ್ರೆಯ ಕಿಟಕಿ, ಗಾಜು ಪುಡಿ ಪುಡಿ
ವೈದ್ಯನೊಬ್ಬ ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ಘಟನೆ ವಿಜಯಪುರ ಜಿಲ್ಲೆಯ ಚಡಚಣ(chadchan) ತಾಲೂಕಿನ ಶಿರನಾಳ ಆಯುಷ್ ಆರೋಗ್ಯ ಮಂದಿರದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರಂಪಾಟ ಮಾಡಿದ ವೈದ್ಯ ನಾರಾಯಣ ರಾಠೋಡ, ನಶೆಯಲ್ಲಿ ಆಸ್ಪತ್ರೆಯ ಪೀಠೋಪಕರಣಗಳನ್ನು ಪುಡಿ ಮಾಡಿದ್ದಾನೆ.
ವಿಜಯಪುರ, ಸೆ.10: ವೈದ್ಯನೊಬ್ಬ ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ಘಟನೆ ವಿಜಯಪುರ ಜಿಲ್ಲೆಯ ಚಡಚಣ(chadchan) ತಾಲೂಕಿನ ಶಿರನಾಳ ಆಯುಷ್ ಆರೋಗ್ಯ ಮಂದಿರದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರಂಪಾಟ ಮಾಡಿದ ಶಿರನಾಳ ಗ್ರಾಮದ ಆಯುಷ್ ಆರೋಗ್ಯ ಮಂದಿರದ ವೈದ್ಯ ನಾರಾಯಣ ರಾಠೋಡ, ಹೆಲ್ತ್ ಇನ್ಸ್ಪೆಕ್ಟರ್ ಆಫೀಸರ್ ಹುದ್ದೆಯಲ್ಲಿದ್ದಾರೆ. ಕುಡಿದ ನಶೆಯಲ್ಲಿ ಆಸ್ಪತ್ರೆಯ ಪೀಠೋಪಕರಣಗಳನ್ನು ಪುಡಿ ಮಾಡಿರುವ ವೈದ್ಯ ನಾರಾಯಣ ರಾಠೋಡ,
ಮತ್ತಿನಲ್ಲಿ ಆಸ್ಪತ್ರೆಯಲ್ಲಿ ಬಿದ್ದು ಹೊರಳಾಡಿದ್ದಾನೆ. ಈ ಹಿಂದೆ ಇದೇ ರೀತಿ ಮಧ್ಯ ಸೇವಿಸಿದ ಆರೋಪದ ಮೇಲೆ ಅಮಾನತ್ತಾಗಿದ್ದ. ಇದೀಗ ಮತ್ತೆ ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ಇತ, ಮಹಿಳಾ ರೋಗಿಗಳು ಬಂದರೆ ಅವಾಚ್ಯವಾಗಿ ನಿಂದನೆ ಮಾಡೋ ಆರೋಪ ಕೇಳಿಬಂದಿದ್ದು, ವೈದ್ಯನನ್ನು ಅಮಾನತ್ತು ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Tue, 10 September 24