ಹಾವೇರಿ: ಲೇಡಿ ಕಂಡಕ್ಟರ್, ಡ್ರೈವರ್ಗಳಿಂದ ವಿದ್ಯಾರ್ಥಿ ಮೇಲೆ ಹಲ್ಲೆ; ಬಸ್ ತಡೆದು ABVP ನೇತೃತ್ವದಲ್ಲಿ ಪ್ರತಿಭಟನೆ
ಶಕ್ತಿ ಯೋಜನೆ ಎಫೆಕ್ಟ್ ಹಿನ್ನಲೆ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆ ಎದುರಾಗಿದ್ದು, ಫುಟ್ ಬೋರ್ಡ್ ಮೇಲೆ ನಿಂತು ನೇತಾಡುತ್ತಾ ಶಾಲಾ ಕಾಲೇಜಿಗೆ ತೆರಳುವಂತಹ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ಲೇಡಿ ಕಂಡಕ್ಟರ್ ಹಾಗೂ ವಿದ್ಯಾರ್ಥಿ ನಡುವೆ ಗಲಾಟೆ ಆಗಿ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಇಂದು(ಬುಧವಾರ) ಹಾವೇರಿ(Haveri) ಬಸ್ ನಿಲ್ದಾಣದ ಎದುರು ಎಬಿವಿಪಿ (ABVP) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹಾವೇರಿ, ಜು.10: ಶಕ್ತಿ ಯೋಜನೆ ಎಫೆಕ್ಟ್ನಿಂದ ವಿದ್ಯಾರ್ಥಿಗಳು(Students) ಪರದಾಟ ನಡೆಸುತ್ತಿದ್ದು, ಫುಟ್ ಬೋರ್ಡ್ ಮೇಲೆ ನಿಂತು ನೇತಾಡುತ್ತಾ ಶಾಲಾ ಕಾಲೇಜಿಗೆ ತೆರಳುವಂತಹ ಪರಿಸ್ಥಿತಿ ಇದೆ. ಹೀಗೆ ಬಸ್ನಲ್ಲಿ ನಿಂತುಕೊಳ್ಳುವ ವಿಚಾರದಲ್ಲಿ ಜಗಳವೊಂದು ನಡೆದಿದ್ದು, ಲೇಡಿ ಕಂಡಕ್ಟರ್ ಹಾಗೂ ಡ್ರೈವರ್ಗಳು ಸೇರಿಕೊಂಡು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಇಂದು(ಬುಧವಾರ) ಹಾವೇರಿ(Haveri) ಬಸ್ ನಿಲ್ದಾಣದ ಎದುರು ನೂರಾರು ವಿಧ್ಯಾರ್ಥಿಗಳು ಸೇರಿಕೊಂಡು ಬಸ್ ತಡೆದು ಎಬಿವಿಪಿ (ABVP) ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಗಾಂಧಿಪುರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಮನೋಜ್ ಚಳ್ಳಾಳ ಎಂಬುವವನ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಬಸ್ ರಶ್ ಇದ್ದ ಹಿನ್ನಲೆ ವಿದ್ಯಾರ್ಥಿ ಮನೋಜ್ ಪುಟ್ ಬೋರ್ಡ್ ಮೇಲೆ ನಿಂತಿದ್ದ. ಈ ಹಿನ್ನಲೆ ಬಸ್ ಒಳಗೆ ಬರುವಂತೆ ಮಹಿಳಾ ಕಂಡಕ್ಟರ್ ಸೂಚಿಸಿದ್ದಾರೆ. ಅದಕ್ಕೆ ‘ಬಸ್ ರಶ್ ಇದೆ ಒಳಗೆ ಹೇಗೆ ಬರಲಿ ಎಂದು ವಿದ್ಯಾರ್ಥಿ ವಾದಿಸಿದ್ದನಂತೆ. ಈ ಹಿನ್ನಲೆ ಮಹಿಳಾ ಕಂಡಕ್ಟರ್ ವಿದ್ಯಾರ್ಥಿ ಕೊರಳ ಪಟ್ಟಿ ಹಿಡಿದು ಹಲ್ಲೆ ಮಾಡಿದ್ದು, ಬಳಿಕ ಹಾವೇರಿ ಬಸ್ ನಿಲ್ದಾಣದ ವಿಶ್ರಾಂತಿ ಕೊಠಡಿ ಒಳಗೆ ಕರೆದು ಕೂಡ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಇದೀಗ ಲೇಡಿ ಕಂಡಕ್ಟರ್ ಹಾಗೂ ವಿದ್ಯಾರ್ಥಿ ಜಗಳ ಹಾವೇರಿ ನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ