ಚನ್ನಪಟ್ಟಣ ಕ್ಷೇತ್ರಕ್ಕೆ ತಾನೇ ಪಕ್ಷದ ಅಭ್ಯರ್ಥಿ ಎಂದು ಪುನರುಚ್ಛರಿಸಿದ ಡಿಸಿಎಂ ಡಿಕೆ ಶಿವಕುಮಾರ್!

|

Updated on: Aug 30, 2024 | 1:04 PM

ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಸಿಪಿ ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರಿ ಚನ್ನಪಟ್ಟಣದ ಅಭ್ಯರ್ಥಿಯಾಗಲಿದ್ದಾರೆ ಎಂಬ ವದಂತಿಯನ್ನು ಅಲ್ಲಗಳೆದ ಶಿವಕುಮಾರ್, ಯೋಗೇಶ್ವರ್ ತನ್ನನ್ನು ಸಂಪರ್ಕಿಸಿಲ್ಲ ಮತ್ತು ದೋಸ್ತಿ ಮಾಡಿಕೊಂಡಿರುವ ಬಿಜೆಪಿ-ಜೆಡಿಎಸ್ ಪಕ್ಷಗಳ ಬಗ್ಗೆ ಮಾತಾಡೋದು ತನಗೆ ಬೇಕಿಲ್ಲ ಎಂದರು.

ಬೆಂಗಳೂರು: ಚನ್ನಪಟ್ಟಣಕ್ಕಾಗಿ ನಡೆಯಲಿರುವ ವಿಧಾನಸಭಾ ಉಪ ಚುನಾವಣೆಯಲ್ಲಿ ತಾನೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತೊಮ್ಮೆ ಹೇಳಿದರು. ಬಿ ಫಾರ್ಮ್ ಕೊಡೋನು ನಾನೇ, ಅದರ ಮೇಲೆ ಸಹಿ ಮಾಡೋನು ನಾನೇ ಮತ್ತು ಸ್ಪರ್ಧೆಗಿಳಿಯುವವನು ಸಹ ನಾನೇ, ಇದನ್ನು ಆನ್ ರೆಕಾರ್ಡ್ ಹೇಳುತ್ತಿದ್ದೇನೆ ಎಂದು ಶಿವಕುಮಾರ್ ಉಡಾಫೆಯ ಧ್ವನಿಯಲ್ಲಿ ಹೇಳದೆ ಖಚಿತವಾದ ಧಾಟಿಯಲ್ಲಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಆಸ್ತಿ ಸುಮ್ಮನೆ ಬಂದಿದ್ದಲ್ಲ, ಕಷ್ಟಪಟ್ಟು ಸಂಪಾದಿಸಿದ್ದೇನೆ, ಅದೆಷ್ಟಿದೆ ಅಂತ ನಂಗಷ್ಟೇ ಗೊತ್ತು: ಶಿವಕುಮಾರ್