ಲಿಂಗಸೂಗೂರಿನ ಪರಿಶಿಷ್ಟ ಪಂಗಡ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳೇ ಅಡುಗೆ ಮಾಡಿಕೊಂಡು ಉಣ್ಣಬೇಕಾದ ದಯನೀಯ ಸ್ಥಿತಿ!
ಆದರೆ ಈ ಹಾಸ್ಟೆಲ್ ನಲ್ಲಿ ಅಡುಗೆ ಸಹಾಯಕರು (ಕುಕ್) ಇಲ್ಲದ ಕಾರಣ ಓದು, ಟ್ಯೂಷನ್ ಗೆ ಅಂತ ಮೀಸಲಿಡಬೇಕಿದ್ದ ಸಮಯವನ್ನು ವಿದ್ಯಾರ್ಥಿಗಳು ಆಹಾರ ಬೇಯಿಸಿಕೊಳ್ಳುವುದರಲ್ಲಿ ವ್ಯಯಿಸುತ್ತಿದ್ದಾರೆ.
ಲಿಂಗಸೂಗೂರು (Lingasugur) ಪಟ್ಟಣದ ಪರಿಶಿಷ್ಟ ಪಂಗಡ ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳ ಪಾಡು ನೋಡಿ ಮಾರಾಯ್ರೇ. ಪಿಯುಸಿ ವ್ಯಾಸಂಗ ಮಾಡುತ್ತಿರುವ ಯುವಕರು ವಿದ್ಯಾರ್ಜನೆಗೆಂದು ತಮ್ಮ ಊರುಗಳನ್ನು ಬಿಟ್ಟು ಬಂದು ಹಾಸ್ಟೆಲ್ ಸೇರಿರುತ್ತಾರೆ. ಆದರೆ ಈ ಹಾಸ್ಟೆಲ್ ನಲ್ಲಿ ಅಡುಗೆ ಸಹಾಯಕರು (ಕುಕ್) (cook) ಇಲ್ಲದ ಕಾರಣ ಓದು, ಟ್ಯೂಷನ್ ಗೆ (tuition) ಅಂತ ಮೀಸಲಿಡಬೇಕಿದ್ದ ಸಮಯವನ್ನು ವಿದ್ಯಾರ್ಥಿಗಳು ಆಹಾರ ಬೇಯಿಸಿಕೊಳ್ಳುವುದರಲ್ಲಿ ವ್ಯಯಿಸುತ್ತಿದ್ದಾರೆ. ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಲ್ಯಾಣ ಇಲಾಖೆಯ ಮಂತ್ರಿಗಳು ಮತ್ತು ಅಧಿಕಾರಿಗಳು ಕೂಡಲೇ ಮಕ್ಕಳ ಸಹಾಯಕ್ಕೆ ಧಾವಿಸಿ ಸೂಕ್ತ ವ್ಯವಸ್ಥೆ ಮಾಡಬೇಕು.