AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಫಾಲೋ ಆನ್ ಹೇರಿದ ಟೀಮ್ ಇಂಡಿಯಾ

IND vs WI: ಫಾಲೋ ಆನ್ ಹೇರಿದ ಟೀಮ್ ಇಂಡಿಯಾ

ಝಾಹಿರ್ ಯೂಸುಫ್
|

Updated on: Oct 12, 2025 | 1:17 PM

Share

India vs West Indies, 2nd Test: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತದ ಪರ ಯಶಸ್ವಿ ಜೈಸ್ವಾಲ್ (175) ಹಾಗೂ ಶುಭ್​ಮನ್ ಗಿಲ್ (129) ಭರ್ಜರಿ ಶತಕ ಸಿಡಿಸಿದ್ದರು. ಈ ಶತಕಗಳ ನೆರವಿನೊಂದಿಗೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 5 ವಿಕೆಟ್ ನಷ್ಟಕ್ಕೆ 518 ರನ್ ಕಲೆಹಾಕಿತು.

ವೆಸ್ಟ್ ಇಂಡೀಸ್​ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಫಾಲೋಆನ್ ಹೇರಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 518 ರನ್​ಗಳಿಸಿ ಡಿಕ್ಲೇರ್ ಘೋಷಿಸತ್ತು, ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ವೆಸ್ಟ್ ಇಂಡೀಸ್ ಬ್ಯಾಟರ್​ಗಳು ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ ಪೆವಿಲಿಯನ್ ಪರೇಡ್ ನಡೆಸಿದ್ದಾರೆ.

ಪರಿಣಾಮ ವೆಸ್ಟ್ ಇಂಡೀಸ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ ಕೇವಲ 248 ರನ್​ಗಳಿಸಿ ಆಲೌಟ್ ಆಗಿದೆ. ಇತ್ತ 270 ರನ್​ಗಳ ಮುನ್ನಡೆ ಪಡೆದಿದ್ದ ಟೀಮ್ ಇಂಡಿಯಾ ಇದೀಗ ಫಾಲೋ ಆನ್ ಹೇರುವ ಮೂಲಕ ವೆಸ್ಟ್ ಇಂಡೀಸ್​ ತಂಡವನ್ನು ಮತ್ತೆ ಬ್ಯಾಟಿಂಗ್​ಗೆ ಆಹ್ವಾನಿಸಿದೆ.

ಅದರಂತೆ ವೆಸ್ಟ್ ಇಂಡೀಸ್ ತಂಡವು 270 ರನ್​ಗಳಿಸುವ ಮುನ್ನ ಆಲೌಟ್ ಆದರೆ, ಟೀಮ್ ಇಂಡಿಯಾ ಇನಿಂಗ್ಸ್​ ಹಾಗೂ ರನ್​ಗಳ ಜಯ ಸಾಧಿಸಬಹುದು.  ಹೀಗಾಗಿ ಈ ಪಂದ್ಯವು ನಾಲ್ಕನೇ ದಿನದಾಟದಲ್ಲೇ ಮುಗಿಯುವ ಸಾಧ್ಯತೆ ಹೆಚ್ಚಿದೆ.

ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ ಪರ ಶುಭ್​ಮನ್ ಗಿಲ್ (129) ಹಾಗೂ ಯಶಸ್ವಿ ಜೈಸ್ವಾಲ್ (175) ಶತಕ ಬಾರಿಸಿದರೆ, ಬೌಲಿಂಗ್​ನಲ್ಲಿ ಕುಲ್ದೀಪ್ ಯಾದವ್ 82 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ.