AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆರಳು ಚೀಪಿ ಸಂಭ್ರಮ... ಕೆಎಲ್ ರಾಹುಲ್ ಸೆಲೆಬ್ರೇಷನ್ ಹಿಂದಿದೆ ನಿರ್ದಿಷ್ಟ ಕಾರಣ

ಬೆರಳು ಚೀಪಿ ಸಂಭ್ರಮ… ಕೆಎಲ್ ರಾಹುಲ್ ಸೆಲೆಬ್ರೇಷನ್ ಹಿಂದಿದೆ ನಿರ್ದಿಷ್ಟ ಕಾರಣ

ಝಾಹಿರ್ ಯೂಸುಫ್
|

Updated on: Oct 04, 2025 | 7:23 AM

Share

India vs West Indies: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 162 ರನ್​ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತವಾಗಿ ಮೊದಲ ಇನಿಂಗ್ಸ್ ಆಡುತ್ತಿರುವ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (100), ಧ್ರುವ್ ಜುರೆಲ್ (125) ಹಾಗೂ ರವೀಂದ್ರ ಜಡೇಜಾ (104) ಶತಕ ಬಾರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 448 ರನ್​ ಕಲೆಹಾಕಿದೆ.

ಬರೋಬ್ಬರಿ 3211 ದಿನಗಳ ಬಳಿಕ ಕೆಎಲ್ ರಾಹುಲ್ ತವರಿನಲ್ಲಿ ಶತಕ ಸಿಡಿಸಿದ್ದಾರೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರಾಹುಲ್ 197 ಎಸೆತಗಳಲ್ಲಿ 12 ಫೋರ್​ಗಳೊಂದಿಗೆ 100 ರನ್ ಬಾರಿಸಿದರು. ಇತ್ತ ಶತಕ ಪೂರೈಸುತ್ತಿದ್ದಂತೆ ಕೆಎಲ್ ರಾಹುಲ್ ಬೆರಳು ಚೀಪುತ್ತಾ ಸಂಭ್ರಮಿಸಿದ್ದರು. ಇಂತಹದೊಂದು ವಿಶೇಷ ಸಂಭ್ರಮಕ್ಕೆ ಕಾರಣ ಅವರ ಮಗಳು.

ಕೆಎಲ್ ರಾಹುಲ್ ಅವರಿಗೆ 7 ತಿಂಗಳ ಮಗಳಿದ್ದಾಳೆ. ಇದೀಗ 9 ವರ್ಷಗಳ ಬಳಿಕ ಭಾರತದ ಪಿಚ್​​ನಲ್ಲಿ ಬಾರಿಸಿದ ಮೊದಲ ಟೆಸ್ಟ್ ಶತಕವನ್ನು ಮಗಳಿಗೆ ಅರ್ಪಿಸಿದ್ದಾರೆ. ಅದನ್ನು ಸೂಚಿಸುವ ಸಲುವಾಗಿ ಕೆಎಲ್​ಆರ್​ ಮಗು ಬೆರಳು ಚೀಪುತ್ತಾ ಸಂಭ್ರಮಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಕೆಎಲ್ ರಾಹುಲ್ ಅಭಿಮಾನಿಗಳಿಂದ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 162 ರನ್​ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತವಾಗಿ ಮೊದಲ ಇನಿಂಗ್ಸ್ ಆಡುತ್ತಿರುವ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (100), ಧ್ರುವ್ ಜುರೆಲ್ (125) ಹಾಗೂ ರವೀಂದ್ರ ಜಡೇಜಾ (104) ಶತಕ ಬಾರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 448 ರನ್​ ಕಲೆಹಾಕಿದೆ.