Dengue Vaccine Approved in India: ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!

Updated on: Jul 21, 2026 | 2:41 PM

ಭಾರತದಲ್ಲಿ ಮಾರಕ ಡೆಂಗೀ ಜ್ವರಕ್ಕೆ ಮೊದಲ ಅಧಿಕೃತ ನಿರ್ದಿಷ್ಟ ಲಸಿಕೆ ಕ್ಯುಡೆಂಗಾ ಮಾರಾಟಕ್ಕೆ ಅನುಮೋದನೆ ದೊರೆತಿದೆ. ಜಪಾನ್‌ನ ಟಕೇಡಾ ಬಯೋ ಫಾರ್ಮಾಟಿಕಲ್ಸ್ ಅಭಿವೃದ್ಧಿಪಡಿಸಿರುವ ಈ ಲಸಿಕೆಗೆ ಡಿಸಿಜಿಐ (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್) ಸಮ್ಮತಿ ಸೂಚಿಸಿದೆ. 4 ರಿಂದ 60 ವರ್ಷ ವಯೋಮಾನದವರಿಗೆ ಈ ಲಸಿಕೆ ನೀಡಬಹುದಾಗಿದೆ.

ಬೆಂಗಳೂರು, ಜುಲೈ 21: ಭಾರತದಲ್ಲಿ ಮಾರಕ ಡೆಂಗೀ ಜ್ವರಕ್ಕೆ ಮೊದಲ ಅಧಿಕೃತ ನಿರ್ದಿಷ್ಟ ಲಸಿಕೆ ಕ್ಯುಡೆಂಗಾ ಮಾರಾಟಕ್ಕೆ ಅನುಮೋದನೆ ದೊರೆತಿದೆ. ಜಪಾನ್‌ನ ಟಕೇಡಾ ಬಯೋ ಫಾರ್ಮಾಟಿಕಲ್ಸ್ ಅಭಿವೃದ್ಧಿಪಡಿಸಿರುವ ಈ ಲಸಿಕೆಗೆ ಡಿಸಿಜಿಐ (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್) ಸಮ್ಮತಿ ಸೂಚಿಸಿದೆ. 4 ರಿಂದ 60 ವರ್ಷ ವಯೋಮಾನದವರಿಗೆ ಈ ಲಸಿಕೆ ನೀಡಬಹುದಾಗಿದೆ.

ಕ್ಯುಡೆಂಗಾ ಲಸಿಕೆಯು ಡೆಂಗಿಯ ನಾಲ್ಕೂ ವಿಧದ ವೈರಸ್‌ಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ. ಎರಡು ಡೋಸ್‌ಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತದೆ. ಮೊದಲ ಡೋಸ್ ಪಡೆದ ಮೂರು ತಿಂಗಳ ನಂತರ ಎರಡನೇ ಡೋಸ್ ನೀಡಲಾಗುತ್ತದೆ. ಇದು ಸೋಂಕು ಪೀಡಿತರು ಅಥವಾ ಸೋಂಕು ರಹಿತರಾದರೂ ಪಡೆಯಬಹುದು. ಈ ಲಸಿಕೆ ಸುಮಾರು ನಾಲ್ಕರಿಂದ ಐದು ವರ್ಷಗಳ ಕಾಲ ರಕ್ಷಣೆ ಮತ್ತು ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ ಎಂದು ಕ್ಲಿನಿಕಲ್ ಪ್ರಯೋಗಗಳು ತೋರಿಸಿವೆ.

ಈ ಕ್ಯುಡೆಂಗಾ ಲಸಿಕೆಯ ಉತ್ಪಾದನೆಗಾಗಿ ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರಸ್ತುತ 43 ದೇಶಗಳಲ್ಲಿ ಅನುಮೋದನೆ ಪಡೆದಿರುವ ಈ ಲಸಿಕೆ, ಸೊಳ್ಳೆ ಕಾಟ ಹೆಚ್ಚಿರುವ ಮಳೆಗಾಲದ ಸಂದರ್ಭದಲ್ಲಿ ಭಾರತಕ್ಕೆ ದೊರೆತಿರುವುದು ನೆಮ್ಮದಿಯ ಸಂಗತಿಯಾಗಿದೆ. ಬೂಸ್ಟರ್ ಡೋಸ್‌ಗಳ ಬಗ್ಗೆ ಸಂಶೋಧನೆಗಳು ಪ್ರಗತಿಯಲ್ಲಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 21, 2026 02:40 PM
Loading...
Unable to load recommendations.
Follow Us
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More