ಸ್ಕ್ವಾಷ್ ವಿಶ್ವಕಪ್ ಗೆದ್ದ ಭಾರತ
Squash World Cup 2025: ಭಾರತ ತಂಡವು ಇದೇ ಮೊದಲ ಬಾರಿಗೆ ಸ್ಕ್ವಾಷ್ ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಕ್ಕೂ ಮುನ್ನ 2023 ರಲ್ಲಿ ಕಂಚಿನ ಪದಕ ಗೆದ್ದಿದ್ದು ಭಾರತ ತಂಡದ ಶ್ರೇಷ್ಠ ಸಾಧನೆಯಾಗಿತ್ತು. ಈ ಬಾರಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಜೋಶ್ನಾ ಚಿನ್ನಪ್ಪ, ಅಭಯ್ ಸಿಂಗ್ ಹಾಗೂ ಅನಾಹತ್ ಸಿಂಗ್ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಕ್ವಾಷ್ ವಿಶ್ವಕಪ್ನಲ್ಲಿ ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಚೆನ್ನೈನ ಎಕ್ಸ್‌ಪ್ರೆಸ್ ಅವೆನ್ಯೂ ಮಾಲ್ನ ಕೋರ್ಟ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕಿತ ಹಾಂಗ್ ಕಾಂಗ್ ತಂಡವನ್ನು 3-0 ಅಂತರದಿಂದ ಸೋಲಿಸಿ ಭಾರತ ತಂಡವು ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿದೆ.
ಸ್ಕ್ವಾಷ್ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಏಷ್ಯಾದ ಎರಡು ದೇಶಗಳು ಫೈನಲ್‌ನಲ್ಲಿ ಸ್ಪರ್ಧಿಸಿದ್ದು ಇದೇ ಮೊದಲು. ಹೀಗಾಗಿಯೇ ಉಭಯ ತಂಡಗಳಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಲಾಗಿತ್ತು. ಈ ನಿರೀಕ್ಷೆಯನ್ನು ಭಾರತೀಯ ತಾರೆಗಳು ಹುಸಿಗೊಳಿಸಿರಲಿಲ್ಲ.
ಮೊದಲ ಸುತ್ತಿನಲ್ಲಿ ಕಣಕ್ಕಿಳಿದ ಜೋಶ್ನಾ ಚಿನಪ್ಪ 7-3, 2-7, 7-5, 7-1 ಅಂತರದಿಂದ ಹಾಂಗ್ ಕಾಂಗ್ನ ಕಾ ಯಿ ಲೀಗೆ ಸೋಲುಣಿಸಿದರು. ಇನ್ನು ದ್ವಿತೀಯ ಸುತ್ತಿನಲ್ಲಿ ಅಭಯ್ ಸಿಂಗ್ ಹಾಂಗ್ ಕಾಂಗ್ನ ಅಲೆಕ್ಸ್ ಲಾವ್ 7-1, 7-4, 7-4 ಅವರನ್ನು ನೇರ ಸೆಟ್ಗಳಿಂದ ಮಣಿಸಿದರು. ಹಾಗೆಯೇ ಅಂತಿಮ ಸುತ್ತಿನಲ್ಲಿ ಟೊಮ್ಯಾಟೊ ಹೊ ವಿರುದ್ಧ 7-2, 7-2, 7-5 ಸೆಟ್ಗಳಿಂದ ಗೆಲ್ಲುವಲ್ಲಿ ಅನಾಹತ್ ಸಿಂಗ್ ಯಶಸ್ವಿಯಾದರು.
ಈ ಮೂಲಕ ಭಾರತ ತಂಡವು ಇದೇ ಮೊದಲ ಬಾರಿಗೆ ಸ್ಕ್ವಾಷ್ ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಕ್ಕೂ ಮುನ್ನ 2023 ರಲ್ಲಿ ಕಂಚಿನ ಪದಕ ಗೆದ್ದಿದ್ದು ಭಾರತ ತಂಡದ ಶ್ರೇಷ್ಠ ಸಾಧನೆಯಾಗಿತ್ತು. ಈ ಬಾರಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಜೋಶ್ನಾ ಚಿನ್ನಪ್ಪ, ಅಭಯ್ ಸಿಂಗ್ ಹಾಗೂ ಅನಾಹತ್ ಸಿಂಗ್ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

