VIDEO: ರಣರೋಚಕ ಪಂದ್ಯ ರನೌಟ್ನೊಂದಿಗೆ ಅಂತ್ಯ
Madhya Pradesh vs Jharkhand: ಸುಶಾಂತ್ ಮಿಶ್ರಾ ಎಸೆದ 20ನೇ ಓವರ್ನ ಮೊದಲ ಎಸೆತದಲ್ಲೇ ಪಾಟಿದಾರ್ ಫೋರ್ ಬಾರಿಸಿದ್ದರು. ಎರಡನೇ ಎಸೆತವು ವೈಡ್. ಮರು ಎಸೆತದಲ್ಲಿ ರಜತ್ ಪಾಟಿದಾರ್ ವಿಕೆಟ್ ಪಡೆಯುವಲ್ಲಿ ಸುಶಾಂತ್ ಯಶಸ್ವಿಯಾದರು. ಇನ್ನು ಮೂರನೇ ಎಸೆತದಲ್ಲಿ ಅನಿಕೇತ್ ವರ್ಮಾ 2 ರನ್ ಕಲೆಹಾಕಿದರು. ನಾಲ್ಕನೇ ಎಸೆತ ನೋ ಬಾಲ್. ಮರು ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ. ಐದನೇ ಎಸೆತದಲ್ಲಿ ಕೇವಲ 1 ರನ್ ಮಾತ್ರ ಬಿಟ್ಟುಕೊಟ್ಟರು. ಕೊನೆಯ ಎಸೆತದಲ್ಲಿ ಅನಿಕೇತ್ ವರ್ಮಾ ರನೌಟ್ ಆದರು. ಈ ಮೂಲಕ ಜಾರ್ಖಂಡ್ ತಂಡವು 1 ರನ್ಗಳ ರೋಚಕ ಜಯ ಸಾಧಿಸಿತು.
ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಇಶಾನ್ ಕಿಶನ್ ನೇತೃತ್ವದ ಜಾರ್ಖಂಡ್ ತಂಡದ ಗೆಲುವಿನ ನಾಗಾಲೋಟ ಮುಂದುವರೆದಿದೆ. ಅದು ಕೂಡ ಬೌಲಿಂಗ್ ಮತ್ತು ಬ್ಯಾಟಿಂಗ್ ಮೂಲಕ ಎಂಬುದು ವಿಶೇಷ. ಕಳೆದ ಪಂದ್ಯದಲ್ಲಿ 236 ರನ್ಗಳನ್ನು ಚೇಸ್ ಮಾಡಿ ಇತಿಹಾಸ ನಿರ್ಮಿಸಿದ್ದ ಜಾರ್ಖಂಡ್ ಇದೀಗ ಮಧ್ಯಪ್ರದೇಶ್ ವಿರುದ್ಧ ರೋಚಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುಣೆಯ ಎಂಎಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ ಪರ ಇಶಾನ್ ಕಿಶನ್ 30 ಎಸೆತಗಳಲ್ಲಿ 63 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಜಾರ್ಖಂಡ್ ತಂಡವು 20 ಓವರ್ಗಳಲ್ಲಿ 181 ರನ್ ಕಲೆಹಾಕಿತು.
182 ರನ್ಗಳ ಗುರಿ ಬೆನ್ನತ್ತಿದ ಮಧ್ಯಪ್ರದೇಶ್ ತಂಡವು 19 ಓವರ್ಗಳ ಮುಕ್ತಾಯದ ವೇಳೆಗೆ ಕೇವಲ 2 ವಿಕೆಟ್ ಕಳೆದುಕೊಂಡು 169 ರನ್ ಕಲೆಹಾಕಿದ್ದರು. ಅದರಂತೆ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ ಕೇವಲ 13 ರನ್ಗಳು ಬೇಕಿದ್ದವು.
ಇತ್ತ ಕ್ರೀಸ್ನಲ್ಲಿ ರಜತ್ ಪಾಟಿದಾರ್ ಹಾಗೂ ಹರ್ಪ್ರೀತ್ ಸಿಂಗ್ ಭಾಟಿಯಾ ಇದ್ದಿದ್ದರಿಂದ ಮಧ್ಯಪ್ರದೇಶ್ ತಂಡದ ಗೆಲುವನ್ನು ನಿರೀಕ್ಷಿಸಲಾಗಿತ್ತು. ಆದರೆ ಅಂತಿಮ ಓವರ್ ಎಸೆದ ಸುಶಾಂತ್ ಮಿಶ್ರಾ ಎಲ್ಲರ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿದರು.
ಸುಶಾಂತ್ ಮಿಶ್ರಾ ಎಸೆದ 20ನೇ ಓವರ್ನ ಮೊದಲ ಎಸೆತದಲ್ಲೇ ಪಾಟಿದಾರ್ ಫೋರ್ ಬಾರಿಸಿದ್ದರು. ಎರಡನೇ ಎಸೆತವು ವೈಡ್. ಮರು ಎಸೆತದಲ್ಲಿ ರಜತ್ ಪಾಟಿದಾರ್ ವಿಕೆಟ್ ಪಡೆಯುವಲ್ಲಿ ಸುಶಾಂತ್ ಯಶಸ್ವಿಯಾದರು. ಇನ್ನು ಮೂರನೇ ಎಸೆತದಲ್ಲಿ ಅನಿಕೇತ್ ವರ್ಮಾ 2 ರನ್ ಕಲೆಹಾಕಿದರು. ನಾಲ್ಕನೇ ಎಸೆತ ನೋ ಬಾಲ್. ಮರು ಎಸೆತದಲ್ಲಿ ಯಾವುದೇ ರನ್ ನೀಡಿಲ್ಲ. ಐದನೇ ಎಸೆತದಲ್ಲಿ ಕೇವಲ 1 ರನ್ ಮಾತ್ರ ಬಿಟ್ಟುಕೊಟ್ಟರು. ಕೊನೆಯ ಎಸೆತದಲ್ಲಿ ಅನಿಕೇತ್ ವರ್ಮಾ ರನೌಟ್ ಆದರು. ಈ ಮೂಲಕ ಜಾರ್ಖಂಡ್ ತಂಡವು 1 ರನ್ಗಳ ರೋಚಕ ಜಯ ಸಾಧಿಸಿತು.

