AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಶಾನ್ ಕಿಶನ್ ವಿಶ್ವ ದಾಖಲೆಯ ಡಬಲ್ ಸೆಂಚುರಿಗೆ 3 ವರ್ಷ

ಇಶಾನ್ ಕಿಶನ್ ವಿಶ್ವ ದಾಖಲೆಯ ಡಬಲ್ ಸೆಂಚುರಿಗೆ 3 ವರ್ಷ

ಝಾಹಿರ್ ಯೂಸುಫ್
|

Updated on:Dec 10, 2025 | 12:26 PM

Share

ಅದು ಡಿಸೆಂಬರ್ 10, 2022...ಬಾಂಗ್ಲಾದೇಶದ ಚಟ್ಟೋಗ್ರಾಮ್ ಸ್ಟೇಡಿಯಂನಲ್ಲಿ ಪಾಕೆಟ್ ಡೈನಾಮೊ ಖ್ಯಾತಿಯ ಇಶಾನ್ ಕಿಶನ್ (Ishan Kishan) ಸಿಡಿದಿದ್ದರು. ಈ ಸಿಡಿಲಬ್ಬರಕ್ಕೆ ಇಶಾನ್ ಬ್ಯಾಟ್​​ನಿಂದ ಮೂಡಿಬಂದ ಸ್ಕೋರ್ ಬರೋಬ್ಬರಿ 210 ರನ್​ಗಳು. ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದಲ್ಲಿ 131 ಎಸೆತಗಳನ್ನು ಎದುರಿಸಿದ್ದ ಇಶಾನ್ ಕಿಶನ್ 10 ಭರ್ಜರಿ ಸಿಕ್ಸ್ ಹಾಗೂ 24 ಫೋರ್​ಗಳೊಂದಿಗೆ ದ್ವಿಶತಕ ಸಿಡಿಸಿ ಮಿಂಚಿದ್ದರು. ಈ ಡಬಲ್ ಸೆಂಚುರಿಯೊಂದಿಗೆ ಕಿಶನ್ ಹಲವು ವಿಶ್ವ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದರು. ಅವುಗಳಲ್ಲಿ ಒಂದು ವಿಶೇಷ ವಿಶ್ವದಾಖಲೆ ಕೂಡ ಸೇರಿತ್ತು.

ಅದು ಡಿಸೆಂಬರ್ 10, 2022…ಬಾಂಗ್ಲಾದೇಶದ ಚಟ್ಟೋಗ್ರಾಮ್ ಸ್ಟೇಡಿಯಂನಲ್ಲಿ ಪಾಕೆಟ್ ಡೈನಾಮೊ ಖ್ಯಾತಿಯ ಇಶಾನ್ ಕಿಶನ್ (Ishan Kishan) ಸಿಡಿದಿದ್ದರು. ಈ ಸಿಡಿಲಬ್ಬರಕ್ಕೆ ಇಶಾನ್ ಬ್ಯಾಟ್​​ನಿಂದ ಮೂಡಿಬಂದ ಸ್ಕೋರ್ ಬರೋಬ್ಬರಿ 210 ರನ್​ಗಳು. ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದಲ್ಲಿ 131 ಎಸೆತಗಳನ್ನು ಎದುರಿಸಿದ್ದ ಇಶಾನ್ ಕಿಶನ್ 10 ಭರ್ಜರಿ ಸಿಕ್ಸ್ ಹಾಗೂ 24 ಫೋರ್​ಗಳೊಂದಿಗೆ ದ್ವಿಶತಕ ಸಿಡಿಸಿ ಮಿಂಚಿದ್ದರು. ಈ ಡಬಲ್ ಸೆಂಚುರಿಯೊಂದಿಗೆ ಕಿಶನ್ ಹಲವು ವಿಶ್ವ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದರು. ಅವುಗಳಲ್ಲಿ ಒಂದು ವಿಶೇಷ ವಿಶ್ವದಾಖಲೆ ಕೂಡ ಸೇರಿತ್ತು.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೆ 11 ದ್ವಿಶತಕಗಳು ಮೂಡಿಬಂದಿವೆ. ಇವುಗಳಲ್ಲಿ ಮೊದಲ ಡಬಲ್ ಸೆಂಚುರಿ ಸಚಿನ್ ತೆಂಡೂಲ್ಕರ್ ಬ್ಯಾಟ್​ನಿಂದ ಮೂಡಿಬಂದರೆ, ಕೊನೆಯ ದ್ವಿಶತಕ ಸಿಡಿಸಿರುವುದು ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್​ವೆಲ್.

ಆದರೆ ಇಶಾನ್ ಕಿಶನ್ ಸಿಡಿಸಿದ ದ್ವಿಶತಕದ ವಿಶೇಷತೆ ಏನೆಂದರೆ… ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ಬ್ಯಾಟ್ಸ್​ಮನ್​ಗಳೆಲ್ಲರೂ, ಅದಕ್ಕೂ ಮೊದಲು ಶತಕ ಬಾರಿಸಿದ್ದರು. ಆದರೆ ಇಶಾನ್ ಕಿಶನ್ ಮಾತ್ರ ಚೊಚ್ಚಲ ಶತಕದೊಂದಿಗೆ ದ್ವಿಶತಕವನ್ನೂ ಸಹ ಪೂರೈಸಿದ್ದರು.

ಅಂದರೆ ಚೊಚ್ಚಲ ಶತಕವನ್ನು ದ್ವಿಶತಕವನ್ನಾಗಿಸಿದ ವಿಶ್ವದ ಮೊದಲ ಬ್ಯಾಟ್ಸ್​ಮನ್ ಎಂಬ ವಿಶ್ವ ದಾಖಲೆಯನ್ನು ಇಶಾನ್ ಕಿಶನ್ ನಿರ್ಮಿಸಿದ್ದರು.  ಅಷ್ಟೇ ಅಲ್ಲದೆ 85 ಎಸೆತಗಳಲ್ಲಿ ಚೊಚ್ಚಲ ಶತಕ ಬಾರಿಸಿದ್ದ ಇಶಾನ್ ಕೇವಲ 126 ಎಸೆತಗಳಲ್ಲಿ 200 ರನ್​ಗಳ ಗಡಿದಾಟಿದ್ದರು. ಈ ಮೂಲಕ ಅತೀ ವೇಗವಾಗಿ ದ್ವಿಶತಕ ಬಾರಿಸಿದ ಬ್ಯಾಟ್ಸ್​ಮನ್ ಎಂಬ ವಿಶ್ವ ದಾಖಲೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದರು.

ಇದರ ಜೊತೆಗೆ ಚೊಚ್ಚಲ ದ್ವಿಶತಕ ಬಾರಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟ್ಸ್​ಮನ್ ಎಂಬ ವಿಶ್ವ ದಾಖಲೆ ಕೂಡ ಕಿಶನ್ ಪಾಲಾಗಿತ್ತು. 24ನೇ ವಯಸ್ಸಿನಲ್ಲೇ ಚೊಚ್ಚಲ ಶತಕದೊಂದಿಗೆ ದ್ವಿಶತಕ ಪೂರೈಸಿ ಇಶಾನ್ ಕಿಶನ್ ಈ ದಾಖಲೆ ನಿರ್ಮಿಸಿದ್ದರು. ಆದರೆ ಇದಾದ ಬಳಿಕ 23 ವರ್ಷದ ಶುಭ್​ಮನ್ ಗಿಲ್ ಈ ದಾಖಲೆಯನ್ನು ಮುರಿದಿದ್ದರು.

ಒಟ್ಟಿನಲ್ಲಿ ಪಾಕೆಟ್ ಡೈನಾಮೊ ಖ್ಯಾತಿಯ ಇಶಾನ್ ಕಿಶನ್ ಬ್ಯಾಟ್​ನಿಂದ ಸಿಡಿದ ಸ್ಪೋಟಕ ದ್ವಿಶತಕದ ದಾಖಲೆಗೆ ಇಂದಿಗೆ ಮೂರು ವರ್ಷಗಳಾಗಿವೆ. ಇದೇ ಖುಷಿಯಲ್ಲಿ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಇಶಾನ್ ಕಿಶನ್ ಅಬ್ಬರಿಸಲಿದ್ದಾರಾ ಕಾದು ನೋಡಬೇಕಿದೆ.

 

Published on: Dec 10, 2025 12:25 PM