ಹಿಂದೆಂದೂ ಕಂಡು ಕೇಳರಿಯದ ರಾಜಕೀಯ ಘಟನೆಯೊಂದು ಈ ವರ್ಷ ದೇಶದಲ್ಲಿ ಸಂಭವಿಸಲಿದೆ: ಕೋಡಿಮಠದ ಶ್ರೀಗಳು

ಹಿಂದೆಂದೂ ಕಂಡು ಕೇಳರಿಯದ ರಾಜಕೀಯ ಘಟನೆಯೊಂದು ಈ ವರ್ಷ ದೇಶದಲ್ಲಿ ಸಂಭವಿಸಲಿದೆ: ಕೋಡಿಮಠದ ಶ್ರೀಗಳು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 05, 2022 | 5:33 PM

ಸಾವು-ನೋವು, ಕೊಲೆಗಳು ನಡೆಯಲಿವೆ ಮತ್ತು ವಿದ್ಯುತ್ ನಿಂದ ಹೆಚ್ಚಿನ ಅಪಾಯಗಳು ಸಂಭವಿಸಲಿವೆ. ಸುಂದರವಾದ ಹೆಣ್ಣುಮಕ್ಕಳ ಅಂಗಾಗಗಳನ್ನು ಕೆತ್ತು ತಿನ್ನಲಾಗುತ್ತದೆ ಎಂದು ಶ್ರೀಗಳು ಒಗಟಿನ ರೂಪದಲ್ಲಿ ಹೇಳುತ್ತಾರೆ.

ಅರಸೀಕೆರೆ ಕೋಡಿಮಠದ ಶ್ರೀಗಳು (Kodimutt Swamiji) ಯಾರಿಗೆ ಗೊತ್ತಿಲ್ಲ. ಕೋಡಿಮಠದ ಶ್ರೀಗಳೆಂದೇ ಪ್ರಖ್ಯಾತರಾಗಿರುವ ಅವರ ಪೂರ್ತಿ ಹೆಸರು ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು (Dr Shivanand Shivayogi Rajendra Swamiji). ಅವರು ನುಡಿವ ಭವಿಷ್ಯ ಹಲವಾರು ಬಾರಿ ನಿಜವಾಗಿರುವ ಕಾರಣ ಜನ ಅದರಲ್ಲೂ ವಿಶೇಷವಾಗಿ ಅಧಿಕಾರದಲ್ಲಿರುವವರು, ಅಂದರೆ ಸಚಿವರು, ಶಾಸಕರು (legislators) ತಲ್ಲಣಗೊಳ್ಳುತ್ತಾರೆ. ಶ್ರೀಗಳು ಪ್ರತಿವರ್ಷ ಭವಿಷ್ಯ ನುಡಿಯುತ್ತಾರೆ. ಈ ವರ್ಷಕ್ಕಾಗಿ ಅವರು ಹೇಳಿರುವ ಭವಿಷ್ಯವು ಕಭಿ ಖುಷಿ ಕಭಿ ಗಮ್ ಥರ ಇದೆ. ಅಂದರೆ ಕೆಲವು ಆಯಾಮಗಳು ಚೆನ್ನಾಗಿವೆ ಉಳಿದವು ಚೆನ್ನಾಗಿಲ್ಲ. ಈ ಸಲದ ಮಳೆ ಕೆಂಡಮಂಡಲ ಅಂತ ಶ್ರೀಗಳು ಹೇಳುತ್ತಾರೆ. ಮುಂಗಾರು ಚೆನ್ನಾಗಿರುತ್ತದೆ ಆದರೆ ಹಿಂಗಾರು ಕೊಂಚ ದುರ್ಬಲಗೊಳ್ಳುತ್ತದೆ ಎಂದು ಅವರು ಹೇಳುತ್ತಾರೆ.

ಎಂದಿನಂತೆ ಈ ವರ್ಷವೂ ಅಶಾಂತಿ, ಮತೀಯ ಗಲಭೆ, ಗಲಾಟೆ ಮತ್ತು ದೊಂಬಿಗಳು ಜರುಗಲಿವೆ ಎಂದು ಸ್ವಾಮೀಜಿ ಹೇಳುತ್ತಾರೆ. ಸಾವು-ನೋವು, ಕೊಲೆಗಳು ನಡೆಯಲಿವೆ ಮತ್ತು ವಿದ್ಯುತ್ ನಿಂದ ಹೆಚ್ಚಿನ ಅಪಾಯಗಳು ಸಂಭವಿಸಲಿವೆ. ಸುಂದರವಾದ ಹೆಣ್ಣುಮಕ್ಕಳ ಅಂಗಾಗಗಳನ್ನು ಕೆತ್ತು ತಿನ್ನಲಾಗುತ್ತದೆ ಎಂದು ಶ್ರೀಗಳು ಒಗಟಿನ ರೂಪದಲ್ಲಿ ಹೇಳುತ್ತಾರೆ.

ಅದರರ್ಥ ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರಗಳು ನಡೆಯಲಿವೆ. ದೇಶದಲ್ಲಿ ರಾಜಕೀಯ ತಲ್ಲಣ ನಡೆಯುತ್ತದೆ ಮತ್ತು ಯಾವತ್ತೂ ಕಂಡು ಕೇಳರಿಯದ ಆಘಾತಕಾರಿ ಘಟನೆಯೊಂದು ಭಾರತದಲ್ಲಿ ನಡೆಯಲಿದೆ ಎಂದು ಶ್ರೀಗಳು ಹೇಳಿದ್ದಾರೆ.

ಸಾವು ನೋವುಗಳು ಜಾಸ್ತಿಯಾಗುತ್ತವೆ, ಗುಡುಗು ಸಿಡಿಲು ವಿಪರೀತ, ಬೆಂಕಿ ಅಪಘಾತಗಳು ನಡೆಯುತ್ತವೆ ಎಂದು ಹೇಳುವ ಸ್ವಾಮೀಜಿ ಅವರು ರಾಜ್ಯದ ರಾಜಕೀಯ ವಲಯದಲ್ಲಿ ಗುಂಪುಗಾರಿಕೆಗಳು ತಲೆದೋರಲಿವೆ ಎನ್ನುತ್ತಾರೆ. ಬಯಲು ಪ್ರದೇಶ ಮಲೆನಾಡು ಆಗುತ್ತದೆ ಮತ್ತು ಮಲೆನಾಡು ಬಯಲು ಪ್ರದೇಶವಾಗಿ ಮಾರ್ಪಾಟು ಹೊಂದುತ್ತದೆ ಎಂದು ಶ್ರೀಗಳು ಹೇಳುತ್ತಾರೆ.

ಕೋಡಿಮಠದ ಶ್ರೀಗಳು ತಾಳೆಗರಿ ಆಧಾರದಲ್ಲಿ ಭವಿಷ್ಯ ನುಡಿಯುತ್ತಾರೆ.

ಇದನ್ನೂ ಓದಿ:   ಕಾರ್ತಿಕ ಮುಗಿಯುವವರೆಗೂ ಮಳೆ ನಿಲ್ಲೋದಿಲ್ಲ ಎಂದು ಭವಿಷ್ಯ ನುಡಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ