ಹಾವೇರಿ, (ಮೇ 11): ದೇಶಸೇವೆ ಬಂತು ಅಂದ್ರೆ ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ಹೋರಾಟ ಮಾಡೋದಕ್ಕೆ ಸಿದ್ಧರಾಗುತ್ತಾರೆ. ದೇಶ ಸೇವೆಗೋಸ್ಕರ ಕುಟುಂಬ, ಸ್ನೇಹಿತರನ್ನು ಕೂಡ ಬಿಟ್ಟು ಹೊರಡೋಕೆ ರೆಡಿ ಆಗ್ತಾರೆ. ನಮ್ಮ ದೇಶದ ಹೆಮ್ಮೆಯೇ ಸೈನಿಕರು. ಇದಕ್ಕೆ ಸಾಕ್ಷಿ ಎಂಬಂತೆ ರಜೆಗೆಂದು ಊರಿಗೆ ಬಂದಿದ್ದ ಹಾವೇರಿ ಯೋಧರು ವದೇಶಸೇವೆಗಾಗಿ ಮರಳಿದ್ದಾರೆ. ಪಾಕಿಸ್ತಾನ ಹಾಗೂ ಭಾರತ ನಡುವೆ ಉದ್ವಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಕೂಡಲೇ ಕರ್ತವ್ಯ ಹಾಜರಾಗುವಂತೆ ರಕ್ಷಣಾ ಇಲಾಖೆ ಸೂಚನೆ ನೀಡಿದೆ. ಇದರ ಬೆನ್ನಲ್ಲೆ ರಜೆಗೆಂದು ಬಂದ ಎರಡನೇ ದಿನದಲ್ಲಿ ಹಾವೇರಿಯ ಯೋಧರ ವಾಪಸ್ ಕರ್ತವ್ಯಕ್ಕೆ ಹಾಜರಾಗಲು ಹೊರಟ್ಟಿದ್ದು, ಅವರನ್ನು ಕುಟುಂಬಸ್ಥರು ಸೇರಿದಂತೆ ಸ್ಥಳೀಯರು ಬಿಳ್ಕೊಟ್ಟರು.