IND vs PAK: ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದ ಭಾರತದ ಸಂಭ್ರಮ ಹೇಗಿತ್ತು ನೋಡಿ
India Wins T20 Asia Cup 2025: ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ 2025ರ ಟಿ20 ಏಷ್ಯಾಕಪ್ ಗೆದ್ದಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ, ತಿಲಕ್ ವರ್ಮಾ ಮತ್ತು ಕುಲ್ದೀಪ್ ಯಾದವ್ ಅವರ ವೀರಾವೇಶದ ಪ್ರದರ್ಶನದಿಂದ ಭಾರತ ಕಪ್ ಎತ್ತಿ ಹಿಡಿದಿದೆ. ಈ ಭವ್ಯ ಗೆಲುವು ಭಾರತೀಯ ಅಭಿಮಾನಿಗಳಿಗೆ ಮತ್ತೊಮ್ಮೆ ಸಂಭ್ರಮ ತಂದಿದೆ. 2023ರ ಏಕದಿನ ಏಷ್ಯಾಕಪ್ ನಂತರ ಇದು ಭಾರತಕ್ಕೆ ಮತ್ತೊಂದು ದೊಡ್ಡ ಸಾಧನೆ.
ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಏಷ್ಯಾಕಪ್ ಗೆದ್ದುಕೊಂಡಿದೆ. 2023 ರಲ್ಲಿ ನಡೆದಿದ್ದ ಏಕದಿನ ಮಾದರಿಯ ಏಷ್ಯಾಕಪ್ ಅನ್ನು ಮುಡಿಗೇರಿಸಿಕೊಂಡಿದ್ದ ಟೀಂ ಇಂಡಿಯಾ ಇದೀಗ 2025 ರಲ್ಲಿ ನಡೆದ ಟಿ20 ಮಾದರಿಯ ಏಷ್ಯಾಕಪ್ ಅನ್ನು ತನ್ನದಾಗಿಸಿಕೊಂಡಿದೆ. ತಂಡದ ಪರ ಗೆಲುವಿನ ಇನ್ನಿಂಗ್ಸ್ ಆಡಿದ ತಿಲಕ್ ವರ್ಮಾ ಅದ್ಭುತ ಪ್ರದರ್ಶನ ನೀಡಿ ಕೊನೆಯವರೆಗೂ ನಿಂತು ತಂಡವನ್ನು ಅಭೂತಪೂರ್ವ ಗೆಲುವಿನತ್ತ ಮುನ್ನಡೆಸಿದರು. ಕೊನೆಯ ಓವರ್ನ 4ನೇ ಎಸೆತದಲ್ಲಿ ರಿಂಕು ಸಿಂಗ್ ಗೆಲುವಿನ ಬೌಂಡರಿ ಹೊಡೆದು ತಂಡವನ್ನು ಜಯದ ಅಲೆಯಲ್ಲಿ ತೇಲುವಂತೆ ಮಾಡಿದರು. ರಿಂಕು ಬೌಂಡರಿ ಬಾರಿಸಿದ ಕೂಡಲೇ ಭಾರತೀಯ ಡ್ರೆಸ್ಸಿಂಗ್ ರೂಮ್ ಮತ್ತು ಮೈದಾನದಲ್ಲಿದ್ದ ಪ್ರೇಕ್ಷಕರು ಹುಚ್ಚೆದ್ದು ಕುಣಿದರು. ಮುಖ್ಯ ಕೋಚ್ ಗೌತಮ್ ಗಂಭೀರ್ಗೂ ತಮ್ಮ ಉತ್ಸಾಹವನ್ನು ತಡೆಯಲಾಗಲಿಲ್ಲ. ಹೋರಾಟದ ಇನ್ನಿಂಗ್ಸ್ ಆಡಿದ ತಿಲಕ್ ಸಂತೋಷದಿಂದ ತಮ್ಮ ಬ್ಯಾಟ್ ಬೀಸಿದರೆ, ಇತ್ತ ಸೋತ ಪಾಕಿಸ್ತಾನಿ ಆಟಗಾರರು ಮತ್ತೊಮ್ಮೆ ತಲೆ ತಗ್ಗಿಸಿ ನಿಂತರು.

