IND vs BAN: ರಿಷಭ್ ಪಂತ್ ಬಾಹುಬಲಕ್ಕೆ 10 ಮೀ. ದೂರ ಹೋಗಿ ಬಿದ್ದ ಬ್ಯಾಟ್; ವಿಡಿಯೋ

Updated on: Jul 05, 2025 | 7:48 PM

Rishabh Pant Drops Bat: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಇದೇ ವೇಳೆ ಜೋಶ್ ಟಂಗ್ ಅವರ ಬೌಲಿಂಗ್‌ನಲ್ಲಿ ಪಂತ್ ಬಿಗ್ ಶಾಟ್ ಹೊಡೆಯಲು ಪ್ರಯತ್ನಿಸಿದರು. ಆದರೆ ಅದರಲ್ಲಿ ಅವರು ಯಶಸ್ವಿಯಾಗಲಿಲ್ಲ. ಚೆಂಡು ವಿಕೆಟ್ ಕೀಪರ್ ಕೈಸೇರಿದರೆ, ಇತ್ತ ಪಂತ್ ಅವರ ಕೈಯಲ್ಲಿದ್ದ ಬ್ಯಾಟ್ ಗಾಳಿಯಲ್ಲಿ ಹಾರಿಹೋಗಿ ಸುಮಾರು 10 ಮೀಟರ್​ಗೂ ಅಧಿಕ ದೂರಕ್ಕೆ ಹೋಗಿ ಬಿತ್ತು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ರೋಮಾಂಚಕಾರಿ ಹಂತ ತಲುಪಿದೆ. ಈ ಪಂದ್ಯದಲ್ಲಿ ಭಾರತ ತಂಡ ಮೇಲುಗೈ ಸಾಧಿಸಿದ್ದು ಭಾರಿ ಮುನ್ನಡೆ ಸಾಧಿಸಿದೆ. ನಾಲ್ಕನೇ ದಿನದಾಟವನ್ನು ಆರಂಭಿಸಿದ ಕೆಎಲ್ ರಾಹುಲ್ ಮತ್ತು ಕರುಣ್ ನಾಯರ್ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಆದಾಗ್ಯೂ ರಾಹುಲ್ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಆದರೆ ಈ ಎರಡು ವಿಕೆಟ್ ಪತನದ ನಂತರ ಜೊತೆಯಾದ ಶುಭ್​ಮನ್ ಗಿಲ್ ಮತ್ತು ರಿಷಭ್ ಪಂತ್ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಇದೇ ವೇಳೆ ರಿಷಭ್ ಪಂತ್, ಸಿಕ್ಸರ್ ಬಾರಿಸುವ ಯತ್ನದಲ್ಲಿ ತಮ್ಮ ಬ್ಯಾಟ್​ ಅನ್ನು ಕೈಬಿಟ್ಟ ಪ್ರಸಂಗವೂ ನಡೆಯಿತು.

ಗಾಳಿಯಲ್ಲಿ ಹಾರಿ ಹೋದ ಬ್ಯಾಟ್

ರಿಷಭ್ ಪಂತ್ ಬಿಗ್ ಶಾಟ್ ಹೊಡೆಯುವಾಗ ತಮ್ಮ ಬ್ಯಾಟ್ ಅನ್ನು ಕೈಬಿಡುವ ಅಭ್ಯಾಸವನ್ನು ಹೊಂದಿದ್ದಾರೆ. ಅವರು ಆಗಾಗ್ಗೆ ಈ ತಪ್ಪನ್ನು ಮಾಡುತ್ತಲೇ ಇರುತ್ತಾರೆ. ಇದು ಇಂಗ್ಲೆಂಡ್ ಪ್ರವಾಸದಲ್ಲೂ ಸಾಕಷ್ಟು ಬಾರಿ ನಡೆದಿದ್ದು, ಇದೀಗ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಇದೇ ರೀತಿಯ ಘಟನೆ ಸಂಭವಿಸಿದೆ. ವಾಸ್ತವವಾಗಿ ಜೋಶ್ ಟಂಗ್ ಅವರ ಬೌಲಿಂಗ್‌ನಲ್ಲಿ ಪಂತ್ ಬಿಗ್ ಶಾಟ್ ಹೊಡೆಯಲು ಪ್ರಯತ್ನಿಸಿದರು. ಆದರೆ ಅದರಲ್ಲಿ ಅವರು ಯಶಸ್ವಿಯಾಗಲಿಲ್ಲ. ಚೆಂಡು ವಿಕೆಟ್ ಕೀಪರ್ ಕೈಸೇರಿದರೆ, ಇತ್ತ ಪಂತ್ ಅವರ ಕೈಯಲ್ಲಿದ್ದ ಬ್ಯಾಟ್ ಗಾಳಿಯಲ್ಲಿ ಹಾರಿಹೋಗಿ ಸುಮಾರು 10 ಮೀಟರ್​ಗೂ ಅಧಿಕ ದೂರಕ್ಕೆ ಹೋಗಿ ಬಿತ್ತು. ಇದನ್ನು ನೋಡಿದ, ವೀಕ್ಷಕರು, ಮೈದಾನದಲ್ಲಿದ್ದ ಪ್ರೇಕ್ಷಕರು ಮತ್ತು ಆಟಗಾರರು ಕೂಡ ಜೋರಾಗಿ ನಗಲು ಪ್ರಾರಂಭಿಸಿದರು.

Published on: Jul 05, 2025 07:41 PM