Asia cup 2025: ಭಾರತವನ್ನು ಸೋಲಿನಿಂದ ಪಾರು ಮಾಡಿದ ಹಾರ್ದಿಕ್ ಪಾಂಡ್ಯ ಹಿಡಿದ ಕ್ಯಾಚ್; ವಿಡಿಯೋ
Hardik Pandya's Stunning Catch: ಏಷ್ಯಾಕಪ್ ಗುಂಪು ಹಂತದ ಪಂದ್ಯದಲ್ಲಿ ಒಮಾನ್ ವಿರುದ್ಧ ಭಾರತ ತಂಡ 21 ರನ್‌ಗಳಿಂದ ಜಯಗಳಿಸಿತು. 43 ವರ್ಷದ ಆಮಿರ್ ಕಲೀಮ್ ಅವರ ಅದ್ಭುತ ಇನ್ನಿಂಗ್ಸ್‌ನಿಂದ ಒಮಾನ್ ಗೆಲುವಿನ ಅಂಚಿಗೆ ಬಂದಿತ್ತು. ಆದರೆ ಹಾರ್ದಿಕ್ ಪಾಂಡ್ಯ ಅವರು ಕಲೀಮ್ ಅವರ ಕ್ಯಾಚನ್ನು ಹಿಡಿಯುವ ಮೂಲಕ ಪಂದ್ಯದ ದಿಕ್ಕನ್ನು ಬದಲಿಸಿದರು.
2025 ರ ಏಷ್ಯಾಕಪ್‌ನ ಗ್ರೂಪ್ ಎ ಪಂದ್ಯದಲ್ಲಿ ಒಮಾನ್ ತಂಡವನ್ನು 21 ರನ್‌ಗಳಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ ಗುಂಪು ಹಂತವನ್ನು ಮುಗಿಸಿದೆ . ಆದಾಗ್ಯೂ, ಈ ಗೆಲುವು ಟೀಂ ಇಂಡಿಯಾಕ್ಕೆ ಸುಲಭವಾಗಿರಲಿಲ್ಲ. ಏಕೆಂದರೆ 43 ವರ್ಷದ ಒಮಾನ್ ಬ್ಯಾಟ್ಸ್‌ಮನ್ ಆಮಿರ್ ಕಲೀಮ್ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆದರೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹಿಡಿದ ಆಮಿರ್ ಕಲೀಮ್ ಅವರ ಅದ್ಭುತ ಕ್ಯಾಚ್ ಪಂದ್ಯವನ್ನು ಭಾರತದ ಖಾತೆಗೆ ಹಾಕಿತು. ಹಾರ್ದಿಕ್ ಪಾಂಡ್ಯ ಹಿಡಿದ ಕ್ಯಾಚ್‌ನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಒಮಾನ್ಗೆ ಗೆಲ್ಲಲು 189 ರನ್ಗಳ ಗುರಿಯನ್ನು ನೀಡಲಾಗಿತ್ತು. ಒಂದು ಹಂತದಲ್ಲಿ, ಕಲೀಮ್ ಅವರ ಸ್ಫೋಟಕ ಬ್ಯಾಟಿಂಗ್ ಒಮಾನ್ ತಂಡಕ್ಕೆ ಗೆಲುವಿನ ಭರವಸೆಯನ್ನು ನೀಡಿತು. ಆದರೆ ಹಾರ್ದಿಕ್ ಪಾಂಡ್ಯ ಆ ಭರವಸೆಯನ್ನು ಚೂರುಚೂರು ಮಾಡಿದರು. ಕಲೀಮ್ ಅವರು 46 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್ಗಳನ್ನು ಒಳಗೊಂಡಂತೆ 64 ರನ್ ಗಳಿಸಿದರು. ಅಂತಿಮ ಕ್ಷಣಗಳಲ್ಲಿ, ಓಮನ್ ಗೆಲ್ಲಲು 14 ಎಸೆತಗಳಲ್ಲಿ 40 ರನ್ಗಳ ಅಗತ್ಯವಿತ್ತು. ಇತ್ತ ಕಲೀಮ್ ಬೌಂಡರಿ ಹಾಗೂ ಸಿಕ್ಸರ್ಗಳನ್ನು ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದರು. ಆದರೆ18 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ಹಾರ್ದಿಕ್ ಪಾಂಡ್ಯ ಅವರ ಚುರುಕುತನ ಪಂದ್ಯದ ದಿಕ್ಕನ್ನು ಬದಲಿಸಿತು.
18 ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಆಮಿರ್ ಕಲೀಮ್ ಹರ್ಷಿತ್ ರಾಣಾ ಅವರ ನಿಧಾನಗತಿಯ ಎಸೆತವನ್ನು ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಬೌಂಡರಿ ಬಳಿ ನಿಂತಿದ್ದ ಹಾರ್ದಿಕ್ ಪಾಂಡ್ಯ ಒಂದು ಕೈಯಿಂದ ಅದ್ಭುತ ಕ್ಯಾಚ್ ಹಿಡಿದು ತಂಡವನ್ನು ಸೋಲಿನಿಂದ ಪಾರು ಮಾಡಿದರು. ಹಾರ್ದಿಕ್ ಪಾಂಡ್ಯ ಹಿಡಿದ ಕ್ಯಾಚ್ ಪಂದ್ಯದಲ್ಲಿ ಮಹತ್ವದ ತಿರುವು ನೀಡಿತು. ಅಂತಿಮವಾಗಿ ಟೀಂ ಇಂಡಿಯಾ 21 ರನ್‌ಗಳಿಂದ ಜಯಗಳಿಸುವ ಮೂಲಕ ಸೂಪರ್ 4 ಸುತ್ತಿಗೆ ಎಂಟ್ರಿಕೊಟ್ಟಿತು.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

