ಆಪರೇಷನ್​ ಸಿಂಧೂರ್: ದುಃಖದಲ್ಲಿದ್ದರೂ ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ

Updated By: ವಿವೇಕ ಬಿರಾದಾರ

Updated on: May 07, 2025 | 2:51 PM

ಪಹೆಲ್ಗಾಮ್​ನ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ಮಾಡಿದೆ. ಮೃತ ಮಂಜುನಾಥ್​ ತಾಯಿ ಸುಮತಿಯವರು ಸೇನೆಯ ಕ್ರಮಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಈ ದಾಳಿಗೆ ಪದರುಗುಟ್ಟಿದೆ. ಭಾರತೀಯ ಸೇನೆಯ ಧೈರ್ಯ ಮತ್ತು ಪ್ರತಿಕ್ರಿಯೆ ಜಗತ್ತಿಗೆ ಸಂದೇಶ ರವಾನಿಸಿದೆ.

ಶಿವಮೊಗ್ಗ, ಮೇ 07: ಪಹೆಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಗೆ (Pahelgam Terrorist attack) ಪ್ರತಿಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನ ನೆಲದಲ್ಲಿನ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ಮಾಡುವ ಮೂಲಕ (Operation Sindoor) ತಕ್ಕ ಪ್ರತ್ಯುತ್ತರ ನೀಡಿದೆ. ಭಾರತೀಯ ಸೇನೆ ನಡೆಸಿದ ದಾಳಿಗೆ ಪಾಕಿಸ್ತಾನ ಪದರುಗುಟ್ಟಿದೆ. ಭಾರತೀಯ ಸೇನೆ ನಡೆಸಿದ ದಾಳಿ ವಿಚಾರವಾಗಿ, ಪಹೆಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್​ ತಾಯಿ ಸುಮತಿಯವರು ಮಾತನಾಡಿ, “ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ಪ್ರಧಾನಿ ಮೋದಿಯವರು ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡಿದ್ದಾರೆ. ಎಲ್ಲದಕ್ಕೂ ಸೂಕ್ತ ಸಮಯ ಬಂದೇ ಬರುತ್ತೆ. ನಾವು ಕಾಯಬೇಕು. ನಮ್ಮನ್ನು ಬಿಟ್ಟು ಹೋಗಿರುವ ಮಂಜುನಾಥ್ ಮತ್ತೆ ಬರಲ್ಲ. ಆದರೆ, ನಮ್ಮ ಕುಟುಂಬಕ್ಕೆ ಶಾಂತಿ ಸಿಕ್ಕಿದೆ. ದುಃಖದಲ್ಲಿದ್ದರೂ ಇಂದೊಂದು ಸಂತೋಷದ ಸಂಗತಿ” ಎಂದರು.

Published on: May 07, 2025 02:30 PM