ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಬಾಗಲಕೋಟೆಯ ಮಾಜಿ ಯೋಧರು ಪಾಕಿಸ್ತಾನದ ಮೇಲೆ ನಡೆದ ಆಪರೇಷನ್ ಸಿಂಧೂರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಪಾಕ್ ಉಗ್ರರನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಅಲ್ಲದೆ, ಎಲ್ಲಾ ಭಾರತೀಯರಿಗೆ ಸೇನಾ ಮಾದರಿ ತರಬೇತಿ ನೀಡುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈಗಲೂ ನಾವು ಯುದ್ದಕ್ಕೆ ಸಿದ್ದ ಎಂದು ಹೇಳಿದ್ದಾರೆ.
ಬಾಗಲಕೋಟೆ, ಮೇ 07: ಪಾಕ್ ಮೇಲೆ ಭಾರತದಿಂದ ಆಪರೇಷನ್ ಸಿಂಧೂರ್ ಅಸ್ತ್ರ ಪ್ರಯೋಗಿಸಲಾಗಿದೆ. ಆ ಮೂಲಕ ಪಹಲ್ಗಾಮ್ (Pahalgam) ಉಗ್ರರ ದಾಳಿ ಪ್ರತೀಕಾರ ತೀರಿಸಿಕೊಳ್ಳಲಾಗಿದೆ. ಸದ್ಯ ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿದ್ದು, ಇತ್ತ ಜಿಲ್ಲೆಯಲ್ಲಿ ಮಾಜಿ ಯೋಧರಿಂದ ಭಾರತ ಸರಕಾರ ಹಾಗೂ ಸೇನೆಗೆ ಅಭಿನಂದನೆ ಸಲ್ಲಿಸಲಾಗಿದೆ. ಇಂತಹ ಅವಕಾಶಕ್ಕಾಗಿ ನಾವು ಕಾಯುತ್ತಿದ್ದೆವು. ಇದೊಂದು ಖುಷಿಯ ವಿಚಾರ. ಈಗಲೂ ನಾವೆಲ್ಲಾ ಯುದ್ದಕ್ಕೆ ಸಿದ್ದ. ಯಾವುದೇ ಕ್ಷಣದಲ್ಲಿ ನಮಗೆ ಬುಲಾವ್ ಬರಲಿ, ಆಯುಧ ಹಿಡಿದು ಯುದ್ದಕ್ಕೆ ನಾವು ಸಿದ್ದ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
New Year 2026 Live: ಬ್ರಿಗೇಡ್ ರಸ್ತೆಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!

