PM Modi Karnataka Visit: ಹಿಂದಿನ ಸರ್ಕಾರಗಳ ಬೇಜವಾಬ್ದಾರಿಯಿಂದ ಯಾದಗಿರಿ ಹಿಂದುಳಿದ ಜಿಲ್ಲೆಯೆನಿಸಿಕೊಂಡಿದೆ: ಪ್ರಧಾನಿ ನರೇಂದ್ರ ಮೋದಿ

PM Modi Karnataka Visit: ಹಿಂದಿನ ಸರ್ಕಾರಗಳ ಬೇಜವಾಬ್ದಾರಿಯಿಂದ ಯಾದಗಿರಿ ಹಿಂದುಳಿದ ಜಿಲ್ಲೆಯೆನಿಸಿಕೊಂಡಿದೆ: ಪ್ರಧಾನಿ ನರೇಂದ್ರ ಮೋದಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 19, 2023 | 1:52 PM

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಭಾರತೀಯರಿಗೆ ಮುಂದಿನ 25 ವರ್ಷಗಳು ವಿಕಸನ ಪ್ರಧಾನವಾಗಿರುವ ವರ್ಷಗಳಾಗಲಿವೆ ಎಂದು ಪ್ರಧಾನಿಗಳು ಹೇಳಿದರು.

ಯಾದಗಿರಿ: ಜಿಲ್ಲೆಯ ಕೊಡೇಕಲ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ (development works) ಚಾಲನೆ ನೀಡಿದ ಬಳಿಕ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಯಾದಗಿರಿಯ (Yadgir) ಜಿಲ್ಲೆಯ ಸಾಮರ್ಥ್ಯ ಬೇರೆ ಯಾವುದೇ ಜಿಲ್ಲೆಯ ಸಾಮರ್ಥ್ಯಕ್ಕಿಂತ ಕಡಿಮೆಯಿಲ್ಲ, ಆದರೆ, ಹಿಂದಿನ ಸರ್ಕಾರಗಳ ಪ್ರತಿನಿಧಿಗಳು ಜಿಲ್ಲೆಯ ಅಭಿವೃದ್ಧಿಯೆಡೆ ಕಾಳಜಿ ತೋರದೆ ಬೇಜವ್ದಾರಿಯಿಂದ ವರ್ತಿಸಿದ್ದರಿಂದ ಇದು ಹಿಂದುಳಿದ ರಾಜ್ಯವಾಗಿ ಉಳಿದುಬಿಟ್ಟಿದೆ ಎಂದರು. ಆದರೆ ಈಗ ಸಮಯ ಬದಲಾಗಿದೆ, ಅಭಿವೃದ್ಧಿಯನ್ನೇ ಮೂಲಮಂತ್ರವನ್ನಾಗಿಟ್ಟುಕೊಂಡಿರುವ ಸರ್ಕಾರ ಅಧಿಕಾರದಲ್ಲಿದೆ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ಭಾರತೀಯರಿಗೆ ಮುಂದಿನ 25 ವರ್ಷಗಳು ವಿಕಸನ ಪ್ರಧಾನವಾಗಿರುವ ವರ್ಷಗಳಾಗಲಿವೆ ಎಂದು ಪ್ರಧಾನಿಗಳು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ