ಇಂದಿರಾ ಗಾಂಧಿ ಆರೆಸ್ಸೆಸ್ ಬ್ಯಾನ್ ಮಾಡಿದ್ದಾಗ ಅವರ ಸರ್ಕಾರವೇ ಬಿದ್ದು ಹೋಗಿತ್ತು: ಪ್ರಲ್ಹಾದ್ ಜೋಶಿ

Updated on: Jul 04, 2025 | 6:11 PM

ಇನ್ನೊಂದು ಬಹು ಮುಖ್ಯ ಸಂಗತಿಯೆಂದರೆ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರಲಿದೆ ಪ್ರಿಯಾಂಕ್ ಖರ್ಗೆ ಹಗಲುಗನಸು ಕಾಣುತ್ತಿದ್ದಾರೆ, ಅದರ ಎಡಪಂಥೀಯ ಧೋರಣೆಯನ್ನು ಜನ ತಿರಸ್ಕರಿಸಿದ್ದಾರೆ, ಪಕ್ಷಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನ ಸಿಕ್ಕರೋದೇ ದೊಡ್ಡ ಸಂಗತಿ, ಮುಂದೆ ಯಾವತ್ತೂ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರೋದಿಲ್ಲ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ಬೆಂಗಳೂರು, ಜುಲೈ 4: ಪ್ರಿಯಾಂಕ್ ಖರ್ಗೆ (Priyank Kharge) ಮತ್ತು ಅವರ ತಂದೆ ಮಲ್ಲ್ಲಿಕಾರ್ಜುನ ಖರ್ಗೆ ಅವರ ನಾಯಕನಾಗಿರುವ ರಾಹುಲ್ ಗಾಂಧಿಯವರ ಅಜ್ಜಿ ಮತ್ತು ಮುತ್ತಾತನಿಂದಲೂ ಆರೆಸ್ಸೆಸ್ ಅನ್ನು ಬ್ಯಾನ್ ಮಾಡೋದು ಸಾಧ್ಯವಾಗಿರಲಿಲ್ಲ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಬ್ಯಾನ್ ಮಾಡಿದಾಗ ಅವರ ಸರ್ಕಾರವೇ ಬಿದ್ದು ಹೋಗಿತ್ತು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಪ್ರಿಯಾಂಕ್ ತಾವು ಓದಿರುವಷ್ಟನ್ನು ಮಾತ್ರ ಹೇಳುತ್ತಾರೆ, ಇಂದಿರಾ ಗಾಂಧಿ ಅವರ ತಂದೆ ಪಂಡಿತ್ ಜವಾಹರಲಾಲ್ ನೆಹರೂ ಆರೆಸ್ಸೆಸ್ ಮೇಲೆ ಬಹಿಷ್ಕಾರ ಹೇರಿದ್ದಾಗ ಒಂದು ಆಯೋಗ ರಚಿಸಲಾಗಿತ್ತು, ವಿಚಾರಣೆ ಸಮಯದಲ್ಲಿ ಸಂಘಟನೆ ವಿರುದ್ಧ ಮಾಡಿದ ಅರೋಪಗಳೆಲ್ಲ ಸುಳ್ಳು ಅಂತ ಸಾಬೀತಾಗಿತ್ತು ಎಂದು ಜೋಶಿ ಹೇಳಿದರು. ಕಾಂಗ್ರೆಸ್ ನಿಂದ ಯಾವತ್ತೂ ಆರೆಸ್ಸೆಸ್ ಬ್ಯಾನ್​ ಮಾಡಲಾಗಲ್ಲ, ಅದು ತನ್ನ ಅಸ್ತಿತ್ವದ 100 ನೇ ವರ್ಷ ಆಚರಿಸುತ್ತಿದೆ ಎಂದು ಕೇಂದ್ರ ಸಚಿವ ಹೇಳಿದರು.

ಇದನ್ನೂ ಓದಿ: ಕುಂಭಮೇಳ ಮತ್ತು ಬೆಂಗಳೂರು ಕಾಲ್ತುಳಿತ ಪ್ರಕರಣಗಳನ್ನು ಹೋಲಿಸುವುದು ಬೌದ್ಧಿಕ ದಿವಾಳಿತನದ ಪ್ರತೀಕ: ಪ್ರಲ್ಹಾದ್ ಜೋಶಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ