ಹೊಟ್ಟೆ ಕಿಚ್ಚು ಪಟ್ಟರೆ ಸಂಬಂಧ ಹಾಳಾಗುತ್ತಾ? ಕೆಲ ಸಲಹೆ ಇಲ್ಲಿದೆ

| Updated By: sandhya thejappa

Updated on: Jun 02, 2022 | 8:38 AM

ತಾನೂ ಕೂಡಾ ಅವರಂತೆ ಹೊಸ ಮನೆ ಕಟ್ಟಬೇಕು, ಹೊಸ ಕಾರು ಖರೀದಿಸಬೇಕು ಅಂತ ಪಣ ತೊಡಬೇಕು. ಹೊಟ್ಟೆ ಕಿಚ್ಚು ಪಟ್ಟಾಗ ಬೇರೆಯವರ ಬಳಿ ತಮ್ಮವರ ಬಗ್ಗೆಯೇ ಮಾತನಾಡುವ ಗುಣ ಹಲವರಿಗಿದೆ. ಆದರೆ ಇದು ತಪ್ಪು.

ಮನುಷ್ಯ ಅಂದ ಮೇಲೆ ಹೊಟ್ಟೆ ಕಿಚ್ಚು (Jealous) ಇದ್ದೇ ಇರುತ್ತದೆ. ಆದರೆ ಅದು ಜಾಸ್ತಿ ಆದರೆ ಸಂಬಂಧಗಳು (Relationship) ಹಾಳಾಗುತ್ತದೆ. ಇನ್ನು ಈ ಹೊಟ್ಟೆ ಕಿಚ್ಚು ವಿಚ್ಛೇದಕ್ಕೂ ಕಾರಣವಾಗಬಹುದು. ಗಂಡನಿಗೆ ಹೆಂಡತಿ ಮೇಲೆ ಅಥವಾ ಹೆಂಡತಿಗೆ ಗಂಡನ ಮೇಲೆ ಹೊಟ್ಟೆ ಕಿಚ್ಚು ಪಟ್ಟು ಎಷ್ಟೋ ಸಂಬಂಧಗಳು ಹಾಳಾಗಿವೆ. ಹೊಸ ಮನೆ, ಹೊಸ ವಾಹನಗಳು ಖರೀದಿಸಿದಾಗ ಒಡಹುಟ್ಟಿದವರೇ ಹೊಟ್ಟೆ ಕಿಚ್ಚು ಪಟ್ಟರೇ, ಆ ಸಂಬಂಧಗಳಿಗೆ ಬೆಲೆ ಇರಲ್ಲ. ತಾನೂ ಕೂಡಾ ಅವರಂತೆ ಹೊಸ ಮನೆ ಕಟ್ಟಬೇಕು, ಹೊಸ ಕಾರು ಖರೀದಿಸಬೇಕು ಅಂತ ಪಣ ತೊಡಬೇಕು. ಹೊಟ್ಟೆ ಕಿಚ್ಚು ಪಟ್ಟಾಗ ಬೇರೆಯವರ ಬಳಿ ತಮ್ಮವರ ಬಗ್ಗೆಯೇ ಮಾತನಾಡುವ ಗುಣ ಹಲವರಿಗಿದೆ. ಆದರೆ ಇದು ತಪ್ಪು. ಅದರ ಬದಲು ನಿಮ್ಮವರ ಬಗ್ಗೆ ಬೇರೆಯವರ ಬಳ ಹೊಗಳಿ ಮಾತನಾಡಿ. ನಿಮಗೂ ಸಮಧಾನವಾಗುತ್ತದೆ. ಜೊತೆಗೆ ಸಂಬಂಧ ಗಟ್ಟಿಯಾಗಿರುತ್ತದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ