ಕುಮಾರಸ್ವಾಮಿ ಸುಖಾಸುಮ್ಮನೆ ಆರೋಪ ಮಾಡುವ ಬದಲು ಪ್ರಜ್ವಲ್ ನನ್ನು ವಾಪಸ್ಸು ಕರೆಸಲಿ: ಗೋಪಾಲಸ್ವಾಮಿ, ಮಾಜಿ ಎಮ್ಮೆಲ್ಸಿ
ಡಿಕೆ ಶಿವಕುಮಾರ್ ಯಾವತ್ತೂ ತನ್ನೊಂದಿಗೆ ದೇವರಾಜೇಗೌಡನ ಬಗ್ಗೆ ಮಾತಾಡಿಲ್ಲ, ಅವರು ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತಿರುವ ನಾಯಕನಾಗಿದ್ದಾರೆ ಇಂಥ ವಿಷಯಗಳಿಗೆಲ್ಲ ತಲೆಕೆಡಿಸಿಕೊಳ್ಳಲ್ಲ, ಎಸ್ಐಟಿ ಅಧಿಕಾರಿಗಳು ದೇವರಾಜೇಗೌಡನ ಮಾತನ್ನು ಯಾಕೆ ನಂಬುತ್ತಾರೋ ಗೊತ್ತಿಲ್ಲ, ಒಂದು ಪಕ್ಷ ತಾನು ₹ 5 ಕೋಟಿ ಪಡೆದಿದ್ದರೆ, ಹೀಗೆ ಮಾಧ್ಯಮಗಳ ಮುಂದೆ ಮಾತಾಡುತ್ತಿರಲಿಲ್ಲ ಎಂದು ಹೇಳಿದರು.
ಹಾಸನ: ಮಾಜಿ ವಿಧಾನ ಪರಿಷತ್ ಸದಸ್ಯ ಎಂಎ ಗೋಪಾಲಸ್ವಾಮಿ (MA Gopala Swamy) ಇಂದು ಹಾಸನದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಟಿ ನಡೆಸಿದ ಬಳಿಕ ಹಾಸನದ ಟಿವಿ9 ವರದಿಗಾರನೊಂದಿಗೆ ಪ್ರತ್ಯೇಕವಾಗಿ ಮಾತಾಡಿದರು. ವಕೀಲ ದೇವರಾಜೇಗೌಡ (Devarajegowda) ಮಾಡಿದ ₹ 5 ಕೋಟಿ ಆರೋಪವನ್ನು ಗೋಷ್ಟಿಯಲ್ಲೇ ಅಲ್ಲಗಳೆದ ಗೋಪಾಲಸ್ವಾಮಿ, ಟಿವಿ9 ಒಂದಿಗೆ ಮಾತಾಡುವಾಗ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯನ್ನು (HD Kumaraswamy) ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕುಮಾರಸ್ವಾಮಿ ಬೇರೆಯವರ ಮೇಲೆ ಗೂಬೆ ಕೂರಿಸುವುದು, ಟೀಕೆ ಮಾಡುವುದನ್ನು ಬಿಟ್ಟು ಪ್ರಜ್ವಲ್ ನನ್ನು ವಾಪಸ್ಸು ಕರೆಸುವ ಕೆಲಸ ಮಾಡಲಿ, ಅವನೆಲಿದ್ದಾನೆ ಅಂತ ಕುಮಾರಸ್ವಾಮಿಗೆ ಚೆನ್ನಾಗಿ ಗೊತ್ತಿದೆ, ಕೇಂದ್ರದ ನಾಯಕರ ಜೊತೆ ದೋಸ್ತಿಯೂ ಇದೆ, ಕರೆಸಲಿ ಪ್ರಜ್ವಲ್ ನನ್ನು. ಎಂದು ಗೋಪಾಲಸ್ವಾಮಿ ಹೇಳಿದರು. ಮುಂದುವರಿದು ಮಾತಾಡಿದ ಅವರು, ಡಿಕೆ ಶಿವಕುಮಾರ್ ಯಾವತ್ತೂ ತನ್ನೊಂದಿಗೆ ದೇವರಾಜೇಗೌಡನ ಬಗ್ಗೆ ಮಾತಾಡಿಲ್ಲ, ಅವರು ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತಿರುವ ನಾಯಕನಾಗಿದ್ದಾರೆ ಇಂಥ ವಿಷಯಗಳಿಗೆಲ್ಲ ತಲೆಕೆಡಿಸಿಕೊಳ್ಳಲ್ಲ, ಎಸ್ಐಟಿ ಅಧಿಕಾರಿಗಳು ದೇವರಾಜೇಗೌಡನ ಮಾತನ್ನು ಯಾಕೆ ನಂಬುತ್ತಾರೋ ಗೊತ್ತಿಲ್ಲ, ಒಂದು ಪಕ್ಷ ತಾನು ₹ 5 ಕೋಟಿ ಪಡೆದಿದ್ದರೆ, ಹೀಗೆ ಮಾಧ್ಯಮಗಳ ಮುಂದೆ ಮಾತಾಡುತ್ತಿರಲಿಲ್ಲ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪ್ರಜ್ವಲ್ ವಿದೇಶದಲ್ಲಿ ತಲೆಮರೆಸಿಕೊಳ್ಳುವ ಬದಲು ಎಸ್ಐಟಿ ಮುಂದೆ ಹಾಜರಾಗೋದು ಸೂಕ್ತ: ನಿಖಿಲ್ ಕುಮಾರಸ್ವಾಮಿ