ನನ್ನ ಹಾಗೂ ದೇವೇಗೌಡರ ಮೇಲೆ ಗೌರವ ಇದ್ರೆ 48 ಗಂಟೆಗಳಲ್ಲಿ ಬಂದು ಶರಣಾಗು: ಪ್ರಜ್ವಲ್​ಗೆ ಕುಮಾರಸ್ವಾಮಿ ಮನವಿ

ಬೆಂಗಳೂರಿನ ಜೆಡಿಎಸ್ ಕಛೇರಿಯ ಜೆಪಿ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ, ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಎಲ್ಲರೂ ಅಸಹ್ಯ ಪಡುವ ಪ್ರಕರಣ. ನನ್ನ ಹಾಗೂ ಹೆಚ್​ಡಿ ದೇವೇಗೌಡರ ಮೇಲೆ ಗೌರವ ಇದ್ದರೆ ನಾನು ಕೈಮುಗಿದು ಮನವಿ ಮಾಡ್ತೇನೆ 24-48 ಗಂಟೆಯಲ್ಲಿ ಶರಣಾಗು ಎಂದು ಪ್ರಜ್ವಲ್​ಗೆ ಮನವಿ ಮಾಡಿದ್ದಾರೆ.

ನನ್ನ ಹಾಗೂ ದೇವೇಗೌಡರ ಮೇಲೆ ಗೌರವ ಇದ್ರೆ 48 ಗಂಟೆಗಳಲ್ಲಿ ಬಂದು ಶರಣಾಗು: ಪ್ರಜ್ವಲ್​ಗೆ ಕುಮಾರಸ್ವಾಮಿ ಮನವಿ
ನನ್ನ, ದೇವೆಗೌಡರ ಮೇಲೆ ಗೌರವ ಇದ್ರೆ 48 ಗಂಟೆಗಳಲ್ಲಿ ಬಂದು ಶರಣಾಗು: ಪ್ರಜ್ವಲ್​ಗೆ ಕುಮಾರಸ್ವಾಮಿ ಮನವಿ
Follow us
Sunil MH
| Updated By: ಗಂಗಾಧರ​ ಬ. ಸಾಬೋಜಿ

Updated on:May 20, 2024 | 3:23 PM

ಬೆಂಗಳೂರು, ಮೇ 20: ನನ್ನ ಹಾಗೂ ಹೆಚ್​ಡಿ ದೇವೇಗೌಡರ ಮೇಲೆ ಗೌರವ ಇದ್ದರೆ ಕೈಮುಗಿದು ಮನವಿ ಮಾಡ್ತೇನೆ 24 ಇಲ್ಲಾ 48 ಗಂಟೆಯಲ್ಲಿ ಶರಣಾಗು ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ (HD Kumaraswamy) ಸಂಸದ ಪ್ರಜ್ವಲ್​ ರೇವಣ್ಣಗೆ (Prajwal Revanna) ಮನವಿ ಮಾಡಿದ್ದಾರೆ. ನಗರದ ಜೆಡಿಎಸ್ ಕಛೇರಿಯ ಜೆಪಿ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನೆಲದ ಕಾನೂನು ಇದೆ, ಯಾಕೆ ಹೆದರಬೇಕು. ಎಷ್ಟು ದಿನ ಕಳ್ಳ ಪೊಲೀಸ್ ಆಟ. ವಿದೇಶದಿಂದ ಬಂದು ತನಿಖೆಗೆ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.

ಪ್ರಜ್ವಲ್ ಎಲ್ಲೆ ಇದ್ದರೂ ಸರೆಂಡರ್ ಆಗಲು ಹೇಳಿ: ದೇವೇಗೌಡರಿಗೆ ಮನವಿ ಮಾಡಿದ ಕುಮಾರಸ್ವಾಮಿ

ಪದ್ಮನಾಭ ನಗರಕ್ಕೆ ನಾನು ಪ್ರಜ್ವಲ್​​ನನ್ನು ಬಿಡಿಸಲು ತಂದೆ ಜೊತೆ ಮಾತನಾಡಲು ಹೋಗಿಲ್ಲ. ತಂದೆ- ತಾಯಿ ಅವರ ಆರೋಗ್ಯ ವಿಚಾರಿಸಲು ಮತ್ತು ಧೈರ್ಯ ಹೇಳಲು ಹೊಗುತ್ತೇನೆ. ನಾನು ತಂದೆಗೆ ಮನವಿ ಮಾಡಿದ್ದೇನೆ. ಪ್ರಜ್ವಲ್ ಎಲ್ಲೆ ಇದ್ದರೂ ಬಂದು ಸರೆಂಡರ್ ಆಗಲು ಮಾನವಿ ಮಾಡಲು ಹೇಳಿದ್ದೇನೆ ಎಂದರು.

ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಇದು ಎಲ್ಲರೂ ತಲೆತಗ್ಗಿಸುವ ಪ್ರಕರಣ. ಹಾಗಾಗಿ ನಾನು ಸಾರ್ವಜನಿಕವಾಗಿ ಮತ್ತೊಮ್ಮೆ ಕ್ಷಮೆ ಕೋರುತ್ತೇನೆ. ಎಲ್ಲರೂ ಅಸಹ್ಯ ಪಡುವ ಪ್ರಕರಣ ಇದು. ಈ ಕೇಸ್​​ನಲ್ಲಿ ನನ್ನ ಹಾಗೂ ದೇವೇಗೌಡರನ್ನ ತಾಳೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹೆಚ್​​ಡಿ ದೇವೇಗೌಡರ ಜೀವ ಪಡೆಯಲು ಸರ್ಕಾರ ಸಂಚು ಆರೋಪ: ಕಾಂಗ್ರೆಸ್​ ವಿರುದ್ಧ ಜೆಡಿಎಸ್​ ಕಿಡಿ

ನಿನ್ನೆ ಆಡಿಯೋ ಬಂತಲ್ಲ. ಈಗ ಕಾಂಗ್ರೆಸ್ ನಾಯಕರು ಯಾಕೆ ಮಾತನಾಡುತ್ತಿಲ್ಲ. ಕುಮಾರಸ್ವಾಮಿ ಪೇನ್ ಡ್ರೈವ್ ಹೊಟ್ಟಿದ್ದು ಅಂತ ಹೇಳು ಅಂತಿರಾ. ಈ ಸರ್ಕಾರ 376 ಸರ್ಕಾರ. ಯಾರು ನಿಮ್ಮ ವಿರುದ್ಧ ಮಾತನಾಡುತ್ತಾರೆ ಅವರಿಗೆ 376 ಹಾಕಿಸುತ್ತಾರೆ. ದೇವರಾಜ್‌ ಗೌಡ ಬಗ್ಗೆ ನಾನು ವಕಾಲತ್ತು ವಹಿಸಲ್ಲ ಸತ್ಯಾಂಶ ಹೇಳುತ್ತೇನೆ ಎಂದಿದ್ದಾರೆ.

ಕೇಸ್ ಹಾಕಿಸಲು ಯಾರ ಬಳಿ ದೂರು ನೀಡಿಸಿದ್ರಿ ಟಿವಿಯಲ್ಲಿ ಸ್ಟೋರಿ ಬಿಲ್ಡಪ್ ಮಾಡಿದ್ರಿ ಎಲ್ಲಾ ಗೊತ್ತು. ನನಗೆ ದೌರ್ಜನ್ಯ ಆಗಿದೆ ಎಂದು ದೇವರಾಜೇಗೌಡ ವಿರುದ್ದ ದೂರು ನೀಡಿಸಿದ್ರಿ. ಯಾಕೆ ನೀವು ಹೊಳೆನರಸೀಪುರದಲ್ಲಿ ದೂರು ಕೊಡಲಿಲ್ಲ. ಬೆಂಗಳೂರಿಗೆ ಬಂದು ಯಾಕೆ ದೂರು ನೀಡಿಸಿದ್ರಿ. ಅದಕ್ಕೆ ಎಷ್ಟು ಹಣ ಕೊಟ್ರಿ. ಬೆಂಗಳೂರಿನಲ್ಲಿ ಟೈಪ್ ಆಗಿದ್ದ ಲೆಟರ್ ಅನ್ನ ಹೊಳೆನರಸೀಪುರ ಠಾಣೆಗೆ ಕಳಿಸಿದ್ದಾರಾ ಹೇಳಿ ಸಿಡಿ ಶಿವು ಎಂದು ಕಿಡಿಕಾರಿದ್ದಾರೆ.

ವಿಡಿಯೋ ಮಾಡಿರುವ ಕರ್ತೃ ಯಾರಿದ್ದಾರೆ ಕರೆಸಿ ಗಲ್ಲಿಗೆ ಹಾಕಿ

ನಾನು ಸಿಎಂ ಇದ್ದಾಗ ಬೆಂಗಳೂರು ಕಮಿಷನರ್ ಮಾಡಲಿಲ್ಲ ಎಂದು ನಮ್ಮ ಕುಟುಂಬದ ಮೇಲೆ ಅಲೋಕ್ ಮೋಹನ್ ದ್ವೇಷ ಮಾಡುತ್ತಿದ್ದಿರಾ? ನಾನು ಈಗಲೂ ಹೇಳುತ್ತಿದ್ದೇನೆ ವಿಡಿಯೋ ಮಾಡಿರುವ ಕರ್ತೃ ಯಾರಿದ್ದಾರೆ ಕರೆಸಿ ಗಲ್ಲಿಗೆ ಹಾಕಿ ಎಂದು ಹೇಳಿದ್ದಾರೆ.

ದೇವರಾಜೇಗೌಡ ಆಡಿಯೋದಲ್ಲಿ ಯಾರು ಮತನಾಡಿದ್ದು, ಸದಾಶಿವ ನಗರಕ್ಕೆ ಯಾರನ್ನ ಭೇಟಿ ಮಾಡಲು ಹೇಳಿದ್ದರು. ಆಡಿಯೋದಲ್ಲಿ ಶಿವಕುಮಾರ್ ಹೇಳಿದ್ದಾರೆ ಕುಮಾರಸ್ವಾಮಿ ಹೆಸರು ಹೇಳಿ ಅಂದಿದ್ದಿರಾ ಸಿಡಿ ಶಿವು.

ಇದನ್ನೂ ಓದಿ: ಪೆನ್​ಡ್ರೈವ್​ ಕೇಸ್: ಶಿವರಾಮೇಗೌಡ, ದೇವರಾಜೇಗೌಡ, ಡಿಕೆಶಿ ​ಸೀಕ್ರೆಟ್ ಆಡಿಯೋ​ ವೈರಲ್

ಶಿವಕುಮಾರ್ ನೀವು ತಿಹಾರ್ ಜೈಲಿನಲ್ಲಿ ಇದ್ದಾಗ ನಾನು ನಿಮ್ಮ ತಾಯಿ ಭೇಟಿ ಮಾಡಿ ಸಾಂತ್ವನ ಹೇಳಿದೆ. ನಿಮ್ಮನ್ನು ಕೂಡ ತಿಹಾರ್ ಜೈಲಿನಲ್ಲಿ ಭೇಟಿ ಮಾಡಿ ನಾಲ್ಕು ದಿನಗಳಲ್ಲಿ ನೀವು ಬಿಡುಗಡೆ ಆದ್ರಿ. ಈಗ ನೀವು ಏನು ಮಾಡುತ್ತಿದ್ದೀರಿ. ಸಿದ್ದರಾಮಯ್ಯ ಅವರು ನಮ್ಮ ಪಕ್ಷದಲ್ಲಿ ಇದ್ದಾಗ ನಮ್ಮ ತಾಯಿ ಕೈಯಿಂದ ಅನ್ನ ತಿಂದಿದ್ದಿರಾ. ತಾಯಿಯ ನೋವು ಏನು ಅಂತ ಗೊತ್ತಿದೆ.

ಸಿಎಂ ಸಿದ್ದರಾಮಯ್ಯ ಅವರೆ ತನಿಖೆ ಎಲ್ಲಿಂದ ಆರಂಭ ಆಗಬೇಕು ಅಂತ ಹೇಳಿ. ಕಾರ್ತಿಕ್ ಯಾರು ಎಂದು ಗೊತ್ತಿಲ್ಲ. ಪ್ರಜ್ವಲ್, ಕಾರ್ತಿಕ್ ಏನ್​ ಮಾಡಿಕೊಂಡರು ಅಂತ ನನಗೆ ಏನು ಗೊತ್ತಿದ್ದೆ. ನಿಮ್ಮ ಸರ್ಕಾರದಲ್ಲಿ ಈ ರೀತಿ ಅಗುತ್ತಿದೆ. ಹಾಸನದಲ್ಲಿ ರಜೆ ಹಾಕಲು ಹಿಂಜರಿಕೆ ಮಾಡುತ್ತಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:18 pm, Mon, 20 May 24

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್