AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್​​ಡಿ ದೇವೇಗೌಡರ ಜೀವ ಪಡೆಯಲು ಸರ್ಕಾರ ಸಂಚು ಆರೋಪ: ಕಾಂಗ್ರೆಸ್​ ವಿರುದ್ಧ ಜೆಡಿಎಸ್​ ಕಿಡಿ

ಶಿವರಾಮೇಗೌಡ, ದೇವರಾಜೇಗೌಡ ಮಾತಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದೆ. ಹೆಚ್‌.ಡಿ.ದೇವೇಗೌಡ ಇನ್ನೂ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲವಲ್ಲ. ಅವರನ್ನು ಬಲಿ ಹಾಕೋಕೆ ಸರ್ಕಾರ ತೀರ್ಮಾನ ಮಾಡಿದೆ ಎಂದು ಕೀಳುಮಟ್ಟದ ಅಭಿಪ್ರಾಯವನ್ನು ಶಿವರಾಮೇಗೌಡ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ಕುರಿತಾಗಿ ಟ್ವೀಟ್ ಮಾಡಿರುವ ಜೆಡಿಎಸ್​ ಹೆಚ್​.ಡಿ.ದೇವೇಗೌಡರ ಜೀವ ಪಡೆಯಲು ಕಾಂಗ್ರೆಸ್ ಸರ್ಕಾರ ಸಂಚು ಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ನೇರ ಆರೋಪ ಮಾಡಲಾಗಿದೆ.

ಹೆಚ್​​ಡಿ ದೇವೇಗೌಡರ ಜೀವ ಪಡೆಯಲು ಸರ್ಕಾರ ಸಂಚು ಆರೋಪ: ಕಾಂಗ್ರೆಸ್​ ವಿರುದ್ಧ ಜೆಡಿಎಸ್​ ಕಿಡಿ
ಹೆಚ್​​ಡಿ ದೇವೇಗೌಡರ ಜೀವ ಪಡೆಯಲು ಸರ್ಕಾರ ಸಂಚು ಆರೋಪ: ಕಾಂಗ್ರೆಸ್​ ವಿರುದ್ಧ ಜೆಡಿಎಸ್​ ಕಿಡಿ
Sunil MH
| Edited By: |

Updated on: May 19, 2024 | 10:49 PM

Share

ಬೆಂಗಳೂರು, ಮೇ 19: ಹೊಂಚು ಹಾಕಿ ಸಂಚು ಮಾಡುವ ಕಾಂಗ್ರೆಸ್​ನ ಅಸಲಿ ಮುಖ ಕಳಚಿ ಕೆಳಕ್ಕೆ ಬಿದ್ದಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಹೌದಲ್ಲವೇ ಕಾಂಗ್ರೆಸ್ಸಿಗರೇ? ಸತ್ಯ ನಿಮ್ಮ ಮುಂದೆಯೇ ಇದೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರ (HD Deve Gowda) ಜೀವ ಪಡೆಯಲು ಕಾಂಗ್ರೆಸ್ (Congress) ಸರ್ಕಾರ ಸಂಚು ಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ನೇರ ಆರೋಪ ಮಾಡಿದೆ. ಈ ಕುರಿತಾಗಿ ಟ್ವೀಟ್​ ಮಾಡಿರುವ ಜೆಡಿಎಸ್​, ನಿಮ್ಮ ಅಧ್ಯಕ್ಷರೇ ಪೆನ್ ಡ್ರೈವ್ ಫ್ಯಾಕ್ಟರಿಯ ಒರಿಜಿನಲ್ ಓನರ್. ಸಿಡಿ ಶಿವಕುಮಾರ್ ಗ್ಯಾಂಗ್ ನಡೆಸಿದ ಪೆನ್ ಡ್ರೈವ್ ಹಂಚಿಕೆಯ ಹೇಯ ಕೃತ್ಯದ ಸಂಚುಗಳೇ ಅವೆಲ್ಲಾ. ದೇವರಾಜೇಗೌಡರ ಹೇಳಿಕೆಯ ನಂತರ ಹೊರಬಿದ್ದಿರುವ ಆಡಿಯೋ ಟೇಪುಗಳೇ ಮಹಾಸಂಚಿನ ಮಹಾಕಥೆಯನ್ನು ಬಿಚ್ಚಿಟ್ಟಿವೆ. ಈಗ ಹೇಳಿ, ಯಾರು ಮೆಂಟಲ್ ಎಂದು ಪ್ರಶ್ನಿಸಲಾಗಿದೆ.

ನಿಮ್ಮ CD ಶಿವಕುಮಾರ್ ಗ್ಯಾಂಗಿನ ಸಂಚುಗಳು ಹೀಗಿವೆ

  • ಸಂಚು ನಂ.1: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಖ್ಯಾತಿ ತರುವುದು.
  • ಸಂಚು ನಂ.2: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರ ನಾಯಕತ್ವ ಹಾಳು ಮಾಡುವುದು.
  • ಸಂಚು ನಂ.3: ಜೆಡಿಎಸ್​​ ಮತ್ತು ಬಿಜೆಪಿ ಮೈತ್ರಿ ಮುರಿದು ಬೀಳುವಂತೆ ಮಾಡುವುದು.
  • ಸಂಚು ನಂ.4: ಹೆಚ್.ಡಿ.ದೇವೆಗೌಡರ ಜೀವವನ್ನು ಬಲಿ ಪಡೆಯುವುದು.

ಇದನ್ನೂ ಓದಿ: ಪೆನ್​ಡ್ರೈವ್​ ಕೇಸ್: ದೇವೇಗೌಡರ ವಿರುದ್ಧ ಅವಹೇಳನಕಾರಿ ಹೇಳಿಕೆ: ಡಿಕೆಶಿ​, ಶಿವರಾಮೇಗೌಡ ವಿರುದ್ಧ ನಾಳೆ ಜೆಡಿಎಸ್​ ಪ್ರತಿಭಟನೆ

ಈ ಸಂಚು ಜಾರಿಗೆ CDಶಿವಕುಮಾರ್ ಸ್ಲೀಪರ್ ಸೆಲ್​ನ ಟೂಲ್ ಕಿಟ್ ವ್ಯವಹಾರ ಈ ಕೆಳಕಂಡಂತಿದೆ.

  • ಈ ಮಹಾಸಂಚು ಸಾಕಾರಕ್ಕೆ CDಶಿವಕುಮಾರ್ ಹೂಡಲಿದ್ದ ಬಂಡವಾಳ ಬರೋಬ್ಬರಿ 100 ಕೋಟಿ ರೂ.!!
  • ಹೆಚ್.ಡಿ.ಕುಮಾರಸ್ವಾಮಿ ಅವರೇ ಪೆನ್ ಡ್ರೈವ್ ಹಂಚಿದ್ದಾರೆ ಎಂದು ಹೇಳಲು ವಕೀಲ ದೇವರಾಜೇಗೌಡರಿಗೆ 100 ಕೋಟಿ ರೂ. ಆಫರ್!!
  • ಅಡ್ವಾನ್ಸ್ ಆಗಿ 5 ಕೋಟಿ ರೂ. ಹಣವನ್ನು ಬೌರಿಂಗ್ ಕ್ಲಬ್ಬಿನ ಕೊಠಡಿ ಸಂಖ್ಯೆ 110ಕ್ಕೆ ರವಾನೆ.
  • ಅಶ್ಲೀಲ ವಿಡಿಯೋಗಳ ಪೆನ್ ಡ್ರೈವ್ ರೆಡಿ ಮಾಡಿದ್ದೇ CDಶಿವಕುಮಾರ್.
  • ಮೋದಿ, ಕುಮಾರಸ್ವಾಮಿ ಅವರುಗಳ ವಿರುದ್ಧ ಅಪಪ್ರಚಾರ ನಡೆಸಲು, ಇಡೀ ಸಂಚು ಅನುಷ್ಠಾನಕ್ಕೆ ನಾಲ್ವರು ಪ್ರಮುಖ ಸಚಿವರ ಸಮಿತಿ ರಚಿಸಿದ್ದೇ CDಶಿವಕುಮಾರ್.
  • ದೇವೇಗೌಡರನ್ನು ಸಾವಿನ ದವಡೆಗೆ ನೂಕುವುದು ಈ ಸ್ಲೀಪರ್ ಸೆಲ್​ನ ಮಹಾನ್ ಟಾರ್ಗೆಟ್!!

ಇದನ್ನೂ ಓದಿ: ಪೆನ್​ಡ್ರೈವ್​ ಕೇಸ್: ಶಿವರಾಮೇಗೌಡ, ದೇವರಾಜೇಗೌಡ, ಡಿಕೆಶಿ ​ಸೀಕ್ರೆಟ್ ಆಡಿಯೋ​ ವೈರಲ್

ವಕೀಲರಾದ ದೇವೇರಾಜೇಗೌಡರೇ ಸ್ವತಃ ಬಿಚ್ಚಿಟ್ಟ ಈ ಸತ್ಯಗಳು ಹಾಗೂ ಆಡಿಯೋ ಟೇಪುಗಳು ಶತಮಾನದ ಇತಿಹಾಸ ಹೊಂದಿರುವ ಕಾಂಗ್ರೆಸ್​ ಮಾನವನ್ನು ಬೀದಿ ಬೀದಿಯಲ್ಲಿ ಹರಾಜು ಹಾಕಿವೆ. ಕಂಡವರ ಮನೆಯಲ್ಲಿ ಸಾವು ಬಯಸುವ ಕಾಂಗ್ರೆಸ್ಸಿಗೆ ಧಿಕ್ಕಾರ ಎಂದು ವಾಗ್ದಾಳಿ ಮಾಡಿದೆ.

ಜೆಡಿಎಸ್​ ಟ್ವೀಟ್​

ಶಿವರಾಮೇಗೌಡ, ದೇವರಾಜೇಗೌಡ ಮಾತಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆಗಿದೆ. ಹೆಚ್‌.ಡಿ.ದೇವೇಗೌಡ ಇನ್ನೂ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲವಲ್ಲ. ಅವರನ್ನು ಬಲಿ ಹಾಕೋಕೆ ಸರ್ಕಾರ ತೀರ್ಮಾನ ಮಾಡಿದೆ ಎಂದು ಕೀಳುಮಟ್ಟದ ಅಭಿಪ್ರಾಯವನ್ನು ಶಿವರಾಮೇಗೌಡ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.