Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್‌ ಬಂಧನ ಆಗುತ್ತಾ? ವಿದೇಶದಲ್ಲಿದ್ರೆ ಸೇಫಾಗಿರ್ತಾರಾ? ಅರೆಸ್ಟ್ ವಾರಂಟ್‌ ಹಿಂದಿನ ರಹಸ್ಯವೇನು?

ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಆದರೆ, ಪ್ರಜ್ವಲ್ ರೇವಣ್ಣನ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಏಪ್ರಿಲ್ 26ರಂದು ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ವಿದೇಶಕ್ಕೆ ಹಾರಿದ್ದು, ಅಲ್ಲಿಂದಲೇ ಕಣ್ಣಮುಚ್ಚಾಲೆ ಆಟವಾಡುತ್ತಿದ್ದಾರೆ. ಇದೀಗ ಅಂತಿಮವಾಗಿ ಕೋರ್ಟ್ ಅರೆಸ್ಟ್ ವಾರಂಟ್​ ಜಾರಿ ಮಾಡಿದೆ. ಹಾಗಾದ್ರೆ ಭಾರತಕ್ಕೆ ಬಂದ್ರೆ ಮಾತ್ರ ಪ್ರಜ್ವಲ್‌ ಬಂಧನ ಆಗುತ್ತಾ? ವಿದೇಶದಲ್ಲಿದ್ರೆ ಪ್ರಜ್ವಲ್‌ ರೇವಣ್ಣ ಸೇಫಾಗಿರ್ತಾರಾ? ಎಸ್ಐಟಿ ಅರೆಸ್ಟ್ ವಾರಂಟ್‌ ಹಿಂದಿನ ರಹಸ್ಯವೇನು? ಎನ್ನುವ ವಿವರ ಇಲ್ಲಿದೆ.

ಪ್ರಜ್ವಲ್‌ ಬಂಧನ ಆಗುತ್ತಾ? ವಿದೇಶದಲ್ಲಿದ್ರೆ ಸೇಫಾಗಿರ್ತಾರಾ? ಅರೆಸ್ಟ್ ವಾರಂಟ್‌ ಹಿಂದಿನ ರಹಸ್ಯವೇನು?
ಪ್ರಜ್ವಲ್ ರೇವಣ್ಣ
Follow us
Shivaprasad
| Updated By: ರಮೇಶ್ ಬಿ. ಜವಳಗೇರಾ

Updated on: May 19, 2024 | 2:12 PM

ಬೆಂಗಳೂರು/ಹಾಸನ, (ಮೇ 19): ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ (Pen drive) ಮೂಲಕ ವೈರಲ್ ಆದ ಬಳಿಕ ಅವರ ಮೇಲೆ ಲೈಂಗಿಕ ಅತ್ಯಾಚಾರ ಕೇಸ್‌ಗಳು ದಾಖಲಾಗಿವೆ. ಹೊಳೆನರಸೀಪುರದ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಮಾಡುತ್ತಿದ್ದರೂ, ಲೋಕಸಭಾ ಚುನಾವಣೆ ಮತದಾನ ದಿನ ಏ.26ರಂದು ನಾಪತ್ತೆಯಾದ ಸಂಸದ ಪ್ರಜ್ವಲ್ ರೇವಣ್ಣ ಇದುವರೆಗೂ ಪತ್ತೆಯಾಗಿಲ್ಲ. ವಿಚಾರಣೆಗೆ ಹಾಜರಾಗದ ಪ್ರಜ್ವಲ್ ವಿರುದ್ಧ ಈಗ ನ್ಯಾಯಾಲಯವು ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ.

ಅರೆಸ್ಟ್ ವಾರಂಟ್‌ ಹಿಂದಿನ ರಹಸ್ಯವೇನು?

ವಿದೇಶದಲ್ಲಿ ತಲೆಮರೆಸಿಕೊಂಡು ಕಣ್ಣಮುಚ್ಚಾಲೆ ಆಟವಾಡುತ್ತಿರುವ ಪ್ರಜ್ವಲ್​ ರೇವಣ್ಣ ಅವರಿಗೆ ಕೋರ್ಟ್​ ಅರೆಸ್ಟ್ ವಾರಂಟ್ ಜಾರಿ ಮಾಡಿದೆ. ಆದ್ರೆ, ಈ ಅರೆಸ್ಟ್ ವಾರಂಟ್​ನಿಂದ ಪ್ರಜ್ವಲ್​ ರೇವಣ್ಣಗೆ ಏನಾಗಲಿದೆ ಎನ್ನುವುದನ್ನು ನೋಡುವುದಾದರೆ, ಎಸ್‌ಐಟಿ ಮನವಿ ಪುರಸ್ಕರಿಸಿ ನ್ಯಾಯಾಲಯವು ಅರೆಸ್ಟ್‌ ವಾರಂಟ್ ಜಾರಿ ಮಾಡಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಮರಳಿದರಷ್ಟೇ ಬಂಧನ ಮಾಡಬಹುದಾಗಿದೆ.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಕೇಸ್: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅರೆಸ್ಟ್ ವಾರಂಟ್

ಅರೆಸ್ಟ್‌ ವಾರಂಟ್ ಆದೇಶದಿಂದ ಏಕಾಏಕಿ ರೆಡ್‌ ಕಾರ್ನರ್‌ ನೋಟಿಸ್ ಹೊರಡಿಸಲು ಸಾಧ್ಯವಾಗಲ್ಲ. ಒಂದು ವೇಳೆ ರೆಡ್‌ ಕಾರ್ನರ್ ನೋಟಿಸ್‌ ಹೊರಡಿಸಬೇಕು ಅಂದ್ರೆ ಮೊದಲು ಚಾರ್ಜ್‌ಶೀಟ್‌ ಸಲ್ಲಿಸಬೇಕು. ಚಾರ್ಜ್‌ಶೀಟ್‌ ಸಲ್ಲಿಸಿದ್ರೆ ಮಾತ್ರ ರೆಡ್‌ ಕಾರ್ನರ್ ನೋಟಿಸ್‌ ಹೊರಡಿಸಬಹುದು. ಇನ್ನು ವಿದೇಶದಲ್ಲಿದ್ದಾಗ ಈ ವಾರಂಟ್‌ ಮೇಲೆ ಬಂಧಿಸುವಂತಿಲ್ಲ. ಭಾರತದ ಗಡಿಯೊಳಗೆ ಬಂದರೆ ಪ್ರಜ್ವಲ್‌ ರೇವಣ್ಣನನ್ನು ಬಂಧಿಸಬಹುದು ಎಂದು ವಿಶೇಷ ತನಿಖಾ ತಂಡದ(ಎಸ್​ಐಟಿ) ಹಿರಿಯ ಅಧಿಕಾರಿಗಳಿಂದ ಮಾಹಿತಿ ನೀಡಿದ್ದಾರೆ.

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್

ಇನ್ನು ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿ ಈವರೆಗೆ 22 ದಿನಗಳು ಕಳೆದಿವೆ. ಎಸ್‌ಐಟಿ ವತಿಯಿಂದ ಲೈಂಗಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಕೇಸ್‌ ಕುರಿತು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದರೂ ಈವರೆಗೆ ಹಾಜರಾಗಿಲ್ಲ. ಬಲಿಗೆ ನಾನು ವಿದೇಶದಲ್ಲಿದ್ದೇನೆ, ವಿಚಾರಣೆಗೆ ಹಾಜರಾಗಲು ಒಂದು ವಾರಗಳ ಕಾಲಾವಕಾಶ ಕೊಡಿ ಎಂದು ತಮ್ಮ ವಕೀಲರ ಮೂಲಕ ಎಸ್​ಐಟಿಗೆ ಮನವಿ ಮಾಡಿದ್ದರು. ಇದಾದ ನಂತರ, ನಾಲ್ಕೈದು ಬಾರಿ ಭಾರತಕ್ಕೆ ಮರಳಲು ಟಿಕೆಟ್ ಬುಕ್ ಮಾಡಿದ್ದರೂ, ಪುನಃ ಅದನ್ನು ರದ್ದುಗೊಳಿಸಿದ್ದಾರೆ. ಜೊತೆಗೆ, ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆಯಲು ಎಸ್‌ಐಟಿ ಬ್ಲೂ ಕಾರ್ನರ್ ನೋಟೀಸ್ ಹೊರಡಿಸಿದೆ. ಅದಕ್ಕೂ ಪ್ರಜ್ವಲ್ ಕ್ಯಾರೇ ಎಂದಿಲ್ಲ. ಇದೀಗ ಬಂದ ಮಾಹಿತಿ ಪ್ರಕಾರ ಜರ್ಮಿನಿಯಲ್ಲಿದ್ದ ಪ್ರಜ್ವಲ್ ಇದೀಗ ಅಲ್ಲಿಂದ ಲಂಡನ್​ಗೆ ತೆರಳಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ