ರಥದ ಚಕ್ರದಡಿ ಸಿಲುಕಿದ ವ್ಯಕ್ತಿಯ ಮುಖ ಅಪ್ಪಚ್ಚಿ, ಹಚ್ಚೆಯಿಂದ ಗುರುತು ಹಿಡಿದ ಕುಟುಂಬಸ್ಥರು
ಗದಗ ಜಿಲ್ಲೆಯ ರೋಣ(Ron)ದಲ್ಲಿ ನಿನ್ನೆ(ಮೇ.18) ಸಂಜೆ ನಡೆದಿದ್ದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ (Rathotsava)ದ ವೇಳೆ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದ ಘಟನೆಗೆ ಸಂಬಂಧಿಸಿದಂತೆ ಹಚ್ಚೆಯಿಂದ ಇಂದು ಮತ್ತೋರ್ವನ ಗುರುತು ಪತ್ತೆಯಾಗಿದೆ. ಇನ್ನು ಈ ಘಟನೆ ಹಿನ್ನಲೆ ಮೃತ ಕುಟುಂಬದ ಮನೆಗೆ ಶಾಸಕ ಜಿ.ಎಸ್ ಪಾಟೀಲ್ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಗದಗ, ಮೇ.19: ರೋಣ(Ron)ದಲ್ಲಿ ನಿನ್ನೆ(ಮೇ.18) ಸಂಜೆ ನಡೆದಿದ್ದ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ (Rathotsava)ದ ವೇಳೆ ಚಕ್ರಕ್ಕೆ ಸಿಲುಕಿ ಇಬ್ಬರು ಮೃತಪಟ್ಟಿದ್ದ ಘಟನೆಗೆ ಸಂಬಂಧಿಸಿದಂತೆ ಇಂದು ಮತ್ತೋರ್ವನ ಗುರುತು ಪತ್ತೆಯಾಗಿದ್ದು, ಗೊಡಚಪ್ಪ ಬಾರಕೇರ್(32) ಎಂದು ತಿಳಿದುಬಂದಿದೆ. ಹೌದು, ನಿನ್ನೆ ಸಂಜೆ ನಡೆದಿದ್ದ ರಥೋತ್ಸವದಲ್ಲಿ ನೂಕು ನುಗ್ಗಲುಂಟಾಗಿ ಏಕಾಏಕಿ ಚಕ್ರದಡಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದರು. ಅದರಲ್ಲಿ ಓರ್ವ ಮಲ್ಲಪ್ಪ ಲಿಂಗನಗೌಡರ್ (55) ಎನ್ನಲಾಗಿತ್ತು. ಆದರೆ ಮತ್ತೋರ್ವ ಮುಖದ ಮೇಲೆ ರಥದ ಚಕ್ರ ಹರಿದು ಗುರುತು ಸಿಗದಷ್ಟು ಮುಖ ಛಿದ್ರವಾಗಿತ್ತು.
ಹಚ್ಚೆಯಿಂದ ಗೊತ್ತಾಯ್ತು ಮೃತನ ಗುರುತು
ಈ ಹಿನ್ನಲೆ ಆತನ ಗುರುತು ಪತ್ತೆಯಾಗಿರಲಿಲ್ಲ. ಈ ಮಧ್ಯೆ ಜಾತ್ರೆಗೆ ತಡ ರಾತ್ರಿಯಾದ್ರೂ ಮನೆಗೆ ಬಾರದ ಹಿನ್ನೆಲೆ ಗೊಡಚಪ್ಪನ ಕುಟುಂಬದವರು ಹುಡುಕಾಟ ಶುರು ಮಾಡಿದ್ದರು. ಬಳಿಕ ರಥದ ಚಕ್ರಕ್ಕೆ ಸಿಲುಕಿ ಮೃತಪಟ್ಟ ವಿಷಯ ತಿಳಿದು ಇಂದು(ಮೇ.19) ರೋಣ ಪೊಲೀಸರ ಸಹಾಯದಿಂದ ಕುಟುಂಬಸ್ಥರು ಮೃತದೇಹವನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮೃತನ ದೇಹದ ಎದೆ ಹಾಗೂ ಕೈ ಮೇಲಿದ್ದ ಹಚ್ಚೆಯಿಂದಾಗಿ ಗೊಡಚಪ್ಪನ ಗುರುತು ಪತ್ತೆಯಾಗಿದೆ.
ಇದನ್ನೂ ಓದಿ:ಹಾಸನ, ರಾಮನಗರ ಆಯ್ತು ಇದೀಗ ಉತ್ತರ ಕನ್ನಡದಲ್ಲಿ ಹೊಳೆಯಲ್ಲಿ ಮುಳುಗಿ ಇಬ್ಬರು ಸಾವು
ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕರು
ಇನ್ನು ಘಟನೆ ಹಿನ್ನಲೆ ಮೃತ ಕುಟುಂಬದ ಮನೆಗೆ ಶಾಸಕ ಜಿ.ಎಸ್ ಪಾಟೀಲ್ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇಂದು ಮೃತ ಮಲ್ಲನಗೌಡ ಲಿಂಗನಗೌಡರ ಮನೆಗೆ ಆಗಮಿಸಿ, ಮೃತ ಮಲ್ಲನಗೌಡ ಪುತ್ರಿಗೆ ತಮ್ಮ ಸಂಸ್ಥೆಯ ಕಾಲೇಜಿನಲ್ಲಿ ಉಚಿತ ಶಿಕ್ಷಣ ನೀಡುವ ಭರವಸೆ ನೀಡಿದರು. ಜೊತೆಗೆ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಧನ ಸಹಾಯ ಮಾಡಿದರು.
ಶಿರೂರಿನಲ್ಲಿ ವಿದ್ಯುತ್ ತಂತಿ ತುಳಿದು ವ್ಯಕ್ತಿ ದುರ್ಮರಣ
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು ವ್ಯಕ್ತಯೊಬ್ಬ ಸಾವನ್ನಪ್ಪಿದ್ದಾನೆ. ಇರ್ಷಾದ್(56) ಮೃತ ರ್ದುದೈವಿ. ಗಾಳಿ ಮಳೆಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಈ ಘಟನೆ ನಡೆದಿದೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ