ರೇವಣ್ಣ ಜಾಮೀನು ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಾಧ್ಯತೆ: ಸರ್ಕಾರದಿಂದ ಪ್ರಾಸಿಕ್ಯೂಟರ್ ನೇಮಕ
ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣಗೆ 42ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಕೆ.ಆರ್.ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ರೇವಣ್ಣ ಜಾಮೀನು ರದ್ದು ಕೋರಿ ಎಸ್ಐಟಿಯಿಂದ ಹೈಕೋರ್ಟ್ಗೆ ಅರ್ಜಿ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಸ್ಪಿಪಿಯಾಗಿ ರವಿವರ್ಮ ಕುಮಾರ್ ನೇಮಕ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು, ಮೇ 20: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣಗೆ (HD Revanna) 42ನೇ ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆ ಮೂಲಕ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ. ಆದರೆ ಕೆ.ಆರ್.ನಗರದ ಮಹಿಳೆಯ ಅಪಹರಣ ಪ್ರಕರಣಲ್ಲಿ ರೇವಣ್ಣ ಜಾಮೀನು ರದ್ದು ಕೋರಿ ಹೈಕೋರ್ಟ್ಗೆ (High Court) ಎಸ್ಐಟಿಯಿಂದ ಅರ್ಜಿ ಸಲ್ಲಿಸುವ ಸಾಧ್ಯತೆ ಹಿನ್ನಲೆ ಹೈಕೋರ್ಟ್ನಲ್ಲಿ ಸರ್ಕಾರದ ಪರ ವಾದಿಸಲು ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಆಗಿ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಪ್ರಜ್ವಲ್ ಮತ್ತು ಹೆಚ್ಡಿ ರೇವಣ್ಣ ಆರೋಪಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ, ಕೆ.ಆರ್.ನಗರ, ಹೊಳೆನರಸೀಪುರದಲ್ಲಿ ಎಫ್ಐಆರ್ ದಾಖಲಾಗಿದೆ. ಈವರೆಗೆ ಮೂವರನ್ನು ಎಸ್ಪಿಪಿಯಾಗಿ ನೇಮಿಸಿದ್ದ ಸರ್ಕಾರ, ಇದೀಗ ಹೈಕೋರ್ಟ್ನಲ್ಲಿ ವಾದಿಸಲೆಂದೇ ಪ್ರೊ. ರವಿವರ್ಮ ಕುಮಾರ್ ನೇಮಿಸಲಾಗಿದೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಪ್ರಕರಣ: ಮಾಜಿ ಸಚಿವ ಹೆಚ್ಡಿ ರೇವಣ್ಣಗೆ ಜಾಮೀನು ಮಂಜೂರು
ಕಿಡ್ನಾಪ್ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದಿದ್ದ ರೇವಣ್ಣಗೆ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಕೇಸ್ ಸಂಕಷ್ಟ ತಂದೊಡ್ಡಿತ್ತು. ಈ ಕೇಸ್ನಲ್ಲಿ ಎ1 ಆರೋಪಿ ಆಗಿರೋ ರೇವಣ್ಣ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ನಿನ್ನೆ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ಮಾಡಬಹುದೇ ಇಲ್ವೆ ಅನ್ನೋ ಬಗ್ಗೆ ವಾದ ಪ್ರತಿವಾದ ನಡೆದಿತ್ತು.
ಇದನ್ನೂ ಓದಿ: ನನ್ನ ಹಾಗೂ ದೇವೇಗೌಡರ ಮೇಲೆ ಗೌರವ ಇದ್ರೆ 48 ಗಂಟೆಗಳಲ್ಲಿ ಬಂದು ಶರಣಾಗು: ಪ್ರಜ್ವಲ್ಗೆ ಕುಮಾರಸ್ವಾಮಿ ಮನವಿ
ವಾದ ಪ್ರತಿವಾದ ಆಲಿಸಿದ ಜಡ್ಜ್ ಜೆ.ಪ್ರೀತ್ ಜಾಮೀನು ಅರ್ಜಿಯ ಸ್ವೀಕಾರಾರ್ಹತೆ ಬಗ್ಗೆ ಮೇ 20ರಂದು ಆದೇಶ ಕಾಯ್ದಿರಿಸಿದ್ದರು. ಅಲ್ಲಿವರೆಗೂ ರೇವಣ್ಣಗೆ ಮಧ್ಯಂತರ ಜಾಮೀನು ಇತ್ತು. ಹೀಗಿದ್ರೂ. ರೇವಣ್ಣಗೆ ಸಂಕಷ್ಟ ತಪ್ಪಿರಲಿಲ್ಲ. ಇನ್ನು ಇದಕ್ಕು ಮುನ್ನ ವಿಧಾನಸೌಧಕ್ಕೆ ಆಗಮಿಸಿದ್ದ ರೇವಣ್ಣ, ನಾನೇನೂ ಮಾತಡಲ್ಲ, ಕೈ ಮುಗಿಯುತ್ತೇನೆ ಬಿಟ್ಟು ಬಿಡಿ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.