Loading video

ಹಾಲಿ ಸರ್ವೋಚ್ಚ ಇಲ್ಲವೇ ಉಚ್ಚ ನ್ಯಾಯಾಲಯದ ನ್ಯಾಯಾಧೀಶರೊಬ್ಬರ ನಿಗ್ರಾಣಿಯಲ್ಲಿ ಎಸ್ಐಟಿ ತನಿಖೆ ನಡೆಸಲಿ: ಸಿಟಿ ರವಿ

Updated on: May 11, 2024 | 1:04 PM

ಕರಣದಲ್ಲಿ ಅನುಮಾನದ ಮುಳ್ಳು ಕಾಂಗ್ರೆಸ್ ಕಡೆ ವಾಲುತ್ತಿರುವುದರಿಂದ ಮತ್ತು ಇದರ ರಾಜಕೀಯ ದುರ್ಲಾಭ ಪಡೆಯುವ ಹುನ್ನಾರ ಮೊದಲ ದಿನದಿಂದಲೇ ನಡೆಯುತ್ತಿರುವುದರಿಂದ ತನಿಖೆಯನ್ನು ಹಾಲಿ ಸುಪ್ರೀಮ್ ಕೋರ್ಟ್ ಇಲ್ಲವೇ ಹೈಕೋರ್ಟ್ ನ್ಯಾಯಾಧೀಶರೊಬ್ಬರ ನಿಗ್ರಾಣಿಯಲ್ಲಿ ಎಸಐಟಿ ನಡೆಸಲಿ ಎಂದು ರವಿ ಹೇಳಿದರು.

ಬೆಂಗಳೂರು: ಪೊಲೀಸರ ವಶದಲ್ಲಿರುವ ವಕೀಲ ಮತ್ತು ಬಿಜೆಪಿ ಮುಖಂಡ ಡಿ ದೇವರಾಜೇಗೌಡ ಪೆನ್ ಡ್ರೈವ್ ಗಳ ಬಗ್ಗೆ ಮೂಲ ಮಾಹಿತಿಯನ್ನು ಬಹಿರಂಗಗೊಳಿಸಿದರೆ ಸರ್ಕಾರಕ್ಕೆ ಸಂಚಕಾರ ಎಂದು ಹೇಳಿರುವುದರಿಂದ ಸಿದ್ದರಾಮಯ್ಯ ಸರ್ಕಾರಕ್ಕೆ (Siddaramaiah government) ಭೀತಿಯುಂಟಾಗಿದೆ ಎಂದು ಹಿರಿಯ ಬಿಜೆಪಿ ನಾಯಕ ಸಿಟಿ ರವಿ (CT Ravi) ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಮತ್ತು ಡಿಕೆ ಶಿವಕುಮಾರ್ (DK Shivakumar) ನಿರ್ದೋಷಿಗಳು ಅಂತ ಹೇಳಿದ್ದಾರೆ, ಅದರೆ ಪ್ರಕರಣದಲ್ಲಿ ಅನುಮಾನದ ಮುಳ್ಳು ಕಾಂಗ್ರೆಸ್ ಕಡೆ ವಾಲುತ್ತಿರುವುದರಿಂದ ಮತ್ತು ಇದರ ರಾಜಕೀಯ ದುರ್ಲಾಭ ಪಡೆಯುವ ಹುನ್ನಾರ ಮೊದಲ ದಿನದಿಂದಲೇ ನಡೆಯುತ್ತಿರುವುದರಿಂದ ತನಿಖೆಯನ್ನು ಹಾಲಿ ಸುಪ್ರೀಮ್ ಕೋರ್ಟ್ ಇಲ್ಲವೇ ಹೈಕೋರ್ಟ್ ನ್ಯಾಯಾಧೀಶರೊಬ್ಬರ ನಿಗ್ರಾಣಿಯಲ್ಲಿ ಎಸಐಟಿ ನಡೆಸಲಿ ಎಂದು ರವಿ ಹೇಳಿದರು. ತಪ್ಪು ಯಾರೇ ಮಾಡಿರಲಿ, ಅವರಿಗೆ ಶಿಕ್ಷೆಯಾಗಬೇಕು ಆದರೆ ಸಿದ್ದರಾಮಯ್ಯ ಅವರು ಪ್ರಾಮಾಣಿಕವಾದ ಹೇಳಿಕೆಗಳನ್ನು ನೀಡಿದ್ದೇಯಾದರೆ, ತಾನು ಹೇಳಿದಂತೆ ಹಾಲಿ ನ್ಯಾಯಾಧೀಶರೊಬ್ಬರ ಉಸ್ತುವಾರಿಯಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆಯಾಗಲಿ ಎಂದು ರವಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಈಗ ನಡೆಯುತ್ತಿರುವುದು ಲೋಕಸಭಾ ಚುನಾವಣೆ ಅಂತ ಸಿಎಂ ಸಿದ್ದರಾಮಯ್ಯ ಮರೆತಂತಿದೆ: ಸಿಟಿ ರವಿ