ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಅಗ್ನಿ ಅವಗಢದ ತನಿಖೆ ಮೂರು ಆಯಾಮಗಳಲ್ಲಿ ನಡೆಯಲಿದೆ: ಡಿಕೆ ಶಿವಕುಮಾರ್, ಡಿಸಿಎಮ್

|

Updated on: Aug 12, 2023 | 10:59 AM

ಬೆಂಕಿ ಹೊತ್ತಿಕೊಂಡಾಗ ಅಲ್ಲಿ ಸಿಬ್ಬಂದಿ ವರ್ಗದ ಇಬ್ಬರು ಸ್ಥಳದಲ್ಲಿದ್ದರೂ ಲಭ್ಯವಿದ್ದ ಫೈರ್ ಎಕ್ಸ್​ಟಿಂಗ್ವಿಷರ್ ನೆರವಿನಿಂದ ನಂದಿಸುವ ಪ್ರಯತ್ನ ಮಾಡದೆ ಅಲ್ಲಿಂದ ಪಲಾಯನಗೈದಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ಕಳೆದ ರಾತ್ರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕೇಂದ್ರ ಕಚೇರಿಯಲ್ಲಿ ನಡೆದ ಅಗ್ನಿ ಅವಗಢದ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿವರಣೆ ನೀಡಿದ್ದಾರೆ. ಬಿಬಿಎಂಪಿ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಬೆಂಕಿ ಹೊತ್ತಿಕೊಂಡಾಗ ಅಲ್ಲಿ ಸಿಬ್ಬಂದಿ ವರ್ಗದ ಇಬ್ಬರು ಸ್ಥಳದಲ್ಲಿದ್ದರೂ ಲಭ್ಯವಿದ್ದ ಫೈರ್ ಎಕ್ಸ್ ಟಿಂಗ್ವಿಷರ್ (Fire Extinguisher) ನೆರವಿನಿಂದ ನಂದಿಸುವ ಪ್ರಯತ್ನ ಮಾಡದೆ ಅಲ್ಲಿಂದ ಪಲಾಯನಗೈದಿದ್ದಾರೆ, ಪೊಲೀಸರು ಅವರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಕೂರಿಸಿದ್ದಾರೆ ಎಂದು ಹೇಳಿದರು. ಅಗ್ನಿ ಆಕಸ್ಮಿಕದ ಘಟನೆಯನ್ನು ಮೂರು ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು, ಒಂದ ಇಲಾಖಾ ತನಿಖೆ, ಎರಡನೇಯದ್ದು ಪೊಲೀಸ್ ತನಿಖೆ ಮತ್ತು ಎಲೆಕ್ಟ್ರಿಕಲ್ ಇನ್ ಸ್ಪೆಕ್ಟೋರೇಟ್ (electrical inspectorate) ಅಂತ ಒಂದು ವಿಭಾಗವಿದ್ದು, ಅದರ ಅಧಿಕಾರಿಗಳು ಸಹ ತನಿಖೆ ನಡೆಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on