ಲಕ್ಷ್ಮಣ ಸವದಿ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುತ್ತೇವೆ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭರವಸೆ

ಬೆಳಗಾವಿಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಡೆದ ಪಶುವೈದ್ಯಕೀಯ ಮಹಾವಿದ್ಯಾಲಯ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಲಕ್ಷ್ಮಣ ಸವದಿ ಅವರನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹಾಡಿಹೊಗಳಿದರು.

ಲಕ್ಷ್ಮಣ ಸವದಿ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುತ್ತೇವೆ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭರವಸೆ
ಲಕ್ಷ್ಮಣ ಸವದಿ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: Rakesh Nayak Manchi

Updated on: Aug 11, 2023 | 4:58 PM

ಚಿಕ್ಕೋಡಿ, ಆಗಸ್ಟ್ 11: ಬೆಳಗಾವಿಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಡೆದ ಪಶುವೈದ್ಯಕೀಯ ಮಹಾವಿದ್ಯಾಲಯ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶಾಸಕ ಲಕ್ಷ್ಮಣ ಸವದಿ (Laxman Savadi) ಅವರನ್ನು ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (D.K.Shivakumar) ಹಾಡಿಹೊಗಳಿದರು. ಅಲ್ಲದೆ, ಸವದಿ ಮುಂದಿಟ್ಟ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಿದ್ದರಾಮಯ್ಯ, ಲಕ್ಷ್ಮಣ ಸವದಿ ಕಾಂಗ್ರೆಸ್​ಗೆ ಬಂದ ಮೇಲೆ ನಮ್ಮ ಪಕ್ಷಕ್ಕೆ ಶಕ್ತಿ ಬಂದಿದೆ. ಲಕ್ಷ್ಮಣ ಸವದಿ ಬಿಜೆಪಿಯಲ್ಲಿದ್ದಾಗಲೂ ನನಗೆ ಒಳ್ಳೆಯ ಸ್ನೇಹಿತರು. ಬೇರೆ ಕೆಲಸ ಇದ್ದರೂ ಅಥಣಿಗೆ ಬಂದು ಕಾಮಗಾರಿಗಳಿಗೆ ಚಾಲನೆ ನೀಡಿದೆ. ಲಕ್ಷ್ಮಣ ಸವದಿಯಿಂದ ಕೆಲವು ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸಿದ್ದೇವೆ. ಶಾಸಕ ಲಕ್ಷ್ಮಣ ಸವದಿಗೆ ಕಾಂಗ್ರೆಸ್ ಪರವಾಗಿ ಧನ್ಯವಾದ ಹೇಳುತ್ತೇನೆ ಎಂದರು.

ಶಾಸಕ, ಡಿಸಿಎಂ, ‌ಮಂತ್ರಿಯಾಗಿ ಸವದಿ ಸಾಕಷ್ಟು ಕೆಲಸ ಮಾಡಿದ್ದಾರೆ. ಲಕ್ಷ್ಮಣ ಸವದಿ ನಮ್ಮ ಮುಂದೆ ಇಟ್ಟ ಎಲ್ಲ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುತ್ತೇವೆ ಎಂದ ಸಿದ್ದರಾಮಯ್ಯ, ಇವತ್ತು ಅಥಣಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ್ದೇವೆ. ಈ ಕಾರ್ಯಕ್ರಮಕ್ಕೆ ಕಳೆದ ತಿಂಗಳೇ ಆಹ್ವಾನ ನೀಡಿದ್ದರು. ಹೀಗಾಗಿ ನನ್ನ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಉದ್ಘಾಟನೆ ಮಾಡಲು ಸವದಿ, ಡಿಸಿಎಂ ಬರಲೇಬೇಕು ಎಂದರು.

ಇದನ್ನೂ ಓದಿ: ಆತ ನ್ಯಾಯವಾಗಿದ್ದರೆ ಯಾಕೆ ಜೈಲಿಗೆ ಹೋಗುತ್ತಿದ್ದ?: ಡಿಕೆ ಶಿವಕುಮಾರ್ ವಿರುದ್ಧ ರಾಯಚೂರು ಗುತ್ತಿಗೆದಾರರ ಆಕ್ರೋಶ

ಸವದಿ ಕೆಲಸ ನೋಡಿ ನನಗೆ ಆಶ್ಚರ್ಯ ಆಯಿತು, ಯಾವುದೇ ಒಬ್ಬ ಜನಪ್ರತಿನಿಧಿ ಆರಿಸಿ ಕಳಿಸಿದ ಜನರಿಗೆ ಆರ್ಥಿಕ ಸಾಮಾಜಿಕವಾಗಿ ಬದಲಾವಣೆ ತರಬೇಕು, ಮೂಲಸೌಕರ್ಯ, ಬಡವರಿಗೆ ಅನೇಕ ಕಾರ್ಯಕ್ರಮ ಜನಪ್ರತಿನಿಧಿಗಳು ತರಬೇಕು ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಲಕ್ಷ್ಮಣ್ ಸವದಿ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದರು.

ನಮ್ಮದು ನುಡಿದಂತೆ ನಡೆಯುವ ಸರ್ಕಾರ

ನಮ್ಮದು ನುಡಿದಂತೆ ನಡೆಯುವ ಸರ್ಕಾರ. ನಾನು ಬಹಳ ಆತ್ಮವಿಶ್ವಾಸದಿಂದ ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. 2013 ರಿಂದ 2018 ರಲ್ಲಿ ನಾವು ನೀಡಿದ ಎಲ್ಲ ಭರವಸೆ ಈಡೇರಿಸಿದ್ದೇವೆ. ಈಗಲೂ ಸಹ ನಾವು ಅನೇಕ ಭರವಸೆ ಕೊಟ್ಟಿದ್ದು ಐದು ಗ್ಯಾರಂಟಿ ಕೊಟ್ಟಿದ್ದೇನೆ. ಮೊದಲನೇ ಬಜೆಟ್​ನಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಇದ್ದ 76 ಕಾರ್ಯಕ್ರಮ ಜಾರಿ ಮಾಡಲಾಗುವುದು. ಐದು ಗ್ಯಾರಂಟಿ ಜಾರಿಗೆ ತೀರ್ಮಾನ, ಈಗಾಗಲೇ ಮೂರು ಗ್ಯಾರಂಟಿಗೆ ಚಾಲನೆ ಕೊಟ್ಟಾಗಿದೆ. ಯುವನಿಧಿ ಯೋಜನೆಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಜಾರಿ ಮಾಡಲು ತೀರ್ಮಾನ ಮಾಡಿದ್ದೇವೆ ಎಂದರು.

ಅಶ್ವಾರೂಢ ಬಸವೇಶ್ವರ ಪ್ರತಿಮೆ ಇಂದು ಲೋಕಾರ್ಪಣೆ ಮಾಡಿದೆ. ಅವರು ಸ್ನೇಹಿತರು, ಸಂಘಟನೆ ಜೊತೆಗೂಡಿ ಮೂರ್ತಿ ಮಾಡಿದ್ದಾರೆ. ನಮ್ಮ ಸರ್ಕಾರ ಬಸವಾದಿ ಶರಣರ ಅನುಯಾಯಿ ಸರ್ಕಾರ ಅಂತಾ ಹೆಮ್ಮೆಯಿಂದ ಹೇಳುವೆ. ರಾಜಕೀಯಕ್ಕಾಗಿ ಈ ಮಾತು ಹೇಳುತ್ತಿಲ್ಲ, ಬಸವಾದಿ ಶರಣರು ನುಡಿದಂತೆ ನಡೆದವರು, ಜಿಡ್ಡುಗಟ್ಟಿದ ಸಾಮಾಜಿಕ ವ್ಯವಸ್ಥೆ ಬದಲಾವಣೆಗೆ ಜೀವನದುದ್ದಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ನನಗೆ ಅತ್ಯಂತ ಪ್ರಿಯವಾದ ಸಮಾಜ ಸುಧಾರಕ ಬಸವಣ್ಣ. ಹೀಗಾಗಿ ಬಸವ ಜಯಂತಿಯಂದೇ ಪ್ರಮಾಣವಚನ ಸ್ವೀಕರಿಸಿದೆ ಎಂದರು.

ಕಣ್ಣು ತೆರೆಸಿದ ಸವದಿ: ಡಿಕೆಶಿ

ನಾವೆಲ್ಲ ಮೆಡಿಕಲ್ ಕಾಲೇಜು ಬೇಕು ಅಂತ ನಾವು ಬಡಿದಾಡುತ್ತಿದ್ದೆವೆ. ಆದರೆ ಲಕ್ಷ್ಮಣ ಸವದಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಪಶು ಆಸ್ಪತ್ರೆ ಮಾಡಿ ನನ್ನ ಕಣ್ಣನ್ನೂ ಸಹ ತೆರೆಸಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು. ನಿಮ್ಮ ಋಣವನ್ನು ತೀರಿಸಬೇಕು ನೀರಾವರಿ ಯೋಜನೆ ಮಾಡಬೇಕು ಅಂತ ಸವದಿ ಮನವಿ ಮಾಡಿದ್ದಾರೆ. ನಮ್ಮ ಭಾಗದಲ್ಲಿ ಆಗದ ಕೆಲಸವನ್ನು ನೀವು ಈ ಗಡಿಯಲ್ಲಿ ಮಾಡಿದ್ದಿರಿ ಎಂದರು.

ಬಿಜೆಪಿಯಲ್ಲಿ ಸವದಿಗೆ ದೊಡ್ಡ ಭವಿಷ್ಯವಿದ್ದರೂ ತಮ್ಮನ್ನೆಲ್ಲ ವಿಶ್ವಾಸಕ್ಕೆ ತಗೆದುಕೊಂಡು ಕಾಂಗ್ರೇಸ್ ಪಕ್ಷಕ್ಕೆ ಸೇರಿದ್ದಾರೆ. 138 ಶಾಸಕರು ಇರುವ ಪಕ್ಷದಲ್ಲಿ ನೀವಿದ್ದೀರಿ, ನೀವು ಚಿಂತೆ ಮಾಡಬೇಡಿ, ನಿಮ್ಮ ಎಲ್ಲಾ ಬೇಡಿಕೆಗಳನ್ನು ಮಾಡಿಕೊಡುತ್ತೇನೆ ಎಂದು ಡಿಸಿಎಂ ಭರವಸೆ ನೀಡಿದರು.

200 ಯೂನಿಟ್ ಗೃಹಜ್ಯೋತಿ, ಗೃಹ ಲಕ್ಷ್ಮೀ ಯೋಜನೆ ಜಾರಿ ಮಾಡಿದ್ದೇವೆ, ಬಿಜೆಪಿಯವರು ಇಂತಹ ಯೋಜನೆ ಮಾಡಿದ್ದಾರಾ ಎಂದು ಪ್ರಶ್ನಿಸಿದ ಡಿಸಿಎಂ, ಇಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾತ್ರ ಮಾಡಿದೆ. ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದೇವೆ. ಈ ಜಿಲ್ಲೆಗೆ ರಾಜಕೀಯ ಹೊಸ ರೂಪ ಕೊಡಲು ಫೌಂಡೇಷನ್ ರೆಡಿ ಮಾಡುತ್ತಿದ್ದೇವೆ. ನಿಮ್ಮ ಜತೆಗೆ ನಮ್ಮ ಸರ್ಕಾರ ಇದೆ ಎಂದರು.

ನನಗೂ ಈ ಉದ್ಘಾಟನೆ ಕಾರ್ಯಕ್ರಮಕ್ಕೂ ಸಂಬಂಧ ಇಲ್ಲ, ನನ್ನನ್ನು ಯಾಕೆ ಆಹ್ವಾನಿಸುತ್ತೀರಿ ಅಂತ ಸವದಿನಾ ಕೇಳಿದ್ದೆ. ನಾನು ಸಾಮಾನ್ಯವಾಗಿ ಪೇಟ, ಟೋಪಿ ಹಾಕಿಕೊಳ್ಳಲು ಹೋಗಲ್ಲ. ಅವರ ಭಾಷಣ ಕೇಳಿದರೆ ಹಾರ ಟೋಪಿ ಭಾರ ಆಯ್ತು. ಅವರು ಕೇಳುತ್ತಿರುವ ಯೋಜನೆಗಳು ಹಾಗಿವೆ. ಅವರಿಗಾಗಿ ಕೇಳಿಲ್ಲ, ಕ್ಷೇತ್ರದ ಜನರ ಬದುಕು ಹಸನಾಗಬೇಕು, ಜನರು ಚಿನ್ನದ ತಟ್ಟೆಯಲ್ಲಿ ಉನ್ನಬೇಕು ಅಂತಾ ಕೇಳಿದ್ದಾರೆ ಎಂದರು.

ಲಕ್ಷ್ಮಣ್ ಸವದಿ ಬಹಳ ಹಿರಿಯ ನಾಯಕರು. ಲಕ್ಷ್ಮಣ್ ಸವದಿ ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ಮಾಡಿದ್ದರು. 70 ಸಾವಿರಕ್ಕೂ ಹೆಚ್ಚು ಅಂತರದಿಂದ ಅವರನ್ನ ಗೆಲ್ಲಿಸಿ ಬಿಜೆಪಿಗೆ ರಾಜ್ಯಕ್ಕೆ ಸಂದೇಶ ನೀಡಿದ್ದೀರಿ. ಬಹಳ ದೊಡ್ಡ ತೀರ್ಮಾನ ಸೂಕ್ತ ಸಮಯದಲ್ಲಿ ತೆಗೆದುಕೊಂಡರು. ಮನುಷ್ಯ ಋಣವನ್ನು ತೀರಿಸಬೇಕಾದರೆ ದೇವರು, ಗುರು, ತಂದೆ ತಾಯಿ, ಸಮಾಜದ ಋಣ ತೀರಿಸಬೇಕು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು