ಕೊರೊನಾ ಹೆಮ್ಮಾರಿಗೆ ಐಪಿಎಲ್‌ 2021 ಬಲಿ, ಈ ವರ್ಷದ ಟೂರ್ನಿ ಮಧ್ಯದಲ್ಲಿಯೇ ರದ್ದು

ಐಪಿಎಲ್​ 2021 ಸರಣಿ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದೆ. ಒಬ್ಬರಾದ ಮೇಲೊಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವ ಕಾರಣ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದ್ದು, ಈ ಬಾರಿಯ ಸರಣಿ ಅರ್ಧಕ್ಕೆ ಮೊಟಕುಗೊಂಡಂತಾಗಿದೆ.

  • TV9 Web Team
  • Published On - 17:04 PM, 4 May 2021

ಐಪಿಎಲ್​ 2021 ಸರಣಿ ಕೊರೊನಾ ಕಾರಣದಿಂದ ಸ್ಥಗಿತಗೊಂಡಿದೆ. ಒಬ್ಬರಾದ ಮೇಲೊಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಳ್ಳುತ್ತಿರುವ ಕಾರಣ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದ್ದು, ಈ ಬಾರಿಯ ಸರಣಿ ಅರ್ಧಕ್ಕೆ ಮೊಟಕುಗೊಂಡಂತಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಬಿಸಿಸಿಐ, ಕೊರೊನಾ ಉಲ್ಬಣಿಸುತ್ತಿರುವ ಕಾರಣದಿಂದ ಸರಣಿಯನ್ನು ನಿಲ್ಲಿಸುವ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿದೆ. ನಿನ್ನೆ (ಮಾರ್ಚ್​ 3) ಆರ್​ಸಿಬಿ ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ಪಂದ್ಯ ಆರಂಭವಾಗಬೇಕಿದ್ದ ಕೆಲ ಸಮಯದ ಮುಂಚಿತವಾಗಿ ಕೆಕೆಆರ್​ ತಂಡದ ವರುಣ್​ ಚಕ್ರವರ್ತಿಗೆ ಹಾಗೂ ಸಂದೀಪ್ ವಾರಿಯರ್​ಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿರುವುದು ವರದಿಯಾಗಿತ್ತು. ಈ ಕಾರಣದಿಂದಾಗಿ ನಿನ್ನೆಯ ಪಂದ್ಯವನ್ನೂ ಮುಂದೂಡಲಾಗಿತ್ತು.

(Ipl 2021 Corona Stumps Ipl 2021 As Bcci Forced To Suspend For This Season Due To Pandemic)