Loading video

IPL 2025: ಧೋನಿಯ ಮಿಂಚಿನ ಸ್ಟಂಪಿಂಗ್; 0.14 ಸೆಕೆಂಡ್​ನಲ್ಲಿ ಸಾಲ್ಟ್ ಆಟ ಅಂತ್ಯ! ವಿಡಿಯೋ

|

Updated on: Mar 28, 2025 | 8:27 PM

MS Dhoni's Lightning-Fast Stumping: 43 ವರ್ಷದ ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟ್ ಕೀಪಿಂಗ್ ಕೌಶಲ್ಯ ಇನ್ನೂ ಅದ್ಭುತವಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ಸೂರ್ಯಕುಮಾರ್ ಯಾದವ್ ಅವರನ್ನು 0.12 ಸೆಕೆಂಡ್‌ಗಳಲ್ಲಿ ಸ್ಟಂಪ್ ಮಾಡಿದ್ದ ಧೋನಿ ಈಗ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಫಿಲ್ ಸಾಲ್ಟ್ ಅವರನ್ನೂ ಅದೇ ರೀತಿ ಸ್ಟಂಪ್ ಮಾಡಿದ್ದಾರೆ. ಧೋನಿಯ ವೇಗಕ್ಕೆ ಫಿಲ್ ಸಾಲ್ಟ್ ಪೆವಿಲಿಯನ್ ಸೇರಿದ್ದಾರೆ.

ಮಹೇಂದ್ರ ಸಿಂಗ್ ಧೋನಿಗೆ 43 ವರ್ಷ ವಯಸ್ಸಾಗಿರಬಹುದು ಆದರೆ ಅವರ ವಿಕೆಟ್ ಕೀಪಿಂಗ್ ಕೌಶಲ್ಯ ಇನ್ನು ಪಕ್ವವಾಗುತ್ತಲೇ ಇದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು 0.12 ಸೆಕೆಂಡ್​ನಲ್ಲಿ ಅದ್ಭುತವಾಗಿ ಸ್ಟಂಪ್ ಮಾಡಿದ್ದ ಧೋನಿ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವೂ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಚೆಪಾಕ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಆರ್‌ಸಿಬಿ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಅವರನ್ನು ಧೋನಿ ಅದ್ಭುತ ರೀತಿಯಲ್ಲಿ ಸ್ಟಂಪ್ ಮಾಡಿದರು. 5ನೇ ಓವರ್‌ನ ಕೊನೆಯ ಎಸೆತದಲ್ಲಿ ಸಾಲ್ಟ್‌ರ ವಿಕೆಟ್ ಪತನವಾಯಿತು. ಅಂತಿಮವಾಗಿ ಸಾಲ್ಟ್ 16 ಎಸೆತಗಳಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 32 ರನ್ ಕೆಲಹಾಕಿ ಪೆವಿಲಿಯನ್ ಸೇರಿಕೊಂಡರು.