KKR vs RR: ಅರ್ಧಶತಕದಂಚಿನಲ್ಲಿ ಎಡವಿದ ವೈಭವ್ ಸೂರ್ಯವಂಶಿ

Updated on: Apr 19, 2026 | 4:55 PM

Vaibhav Suryavanshi batting: ಐಪಿಎಲ್ 2026ರ 28ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಉತ್ತಮ ಆರಂಭ ಪಡೆಯಿತು. ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 81 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು. ವೈಭವ್ ಸೂರ್ಯವಂಶಿ ಕೇವಲ 28 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‌ಗಳ ಸಹಿತ 46 ರನ್ ಗಳಿಸಿ ಮಿಂಚಿದರು. ಅವರ ಆಕ್ರಮಣಕಾರಿ ಬ್ಯಾಟಿಂಗ್ ರಾಯಲ್ಸ್ ತಂಡಕ್ಕೆ ಬಲ ನೀಡಿತು.

ಐಪಿಎಲ್ 2026 ರ 28ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್​ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್ ತಂಡಕ್ಕೆ ಎಂದಿನಂತೆ ಇಬ್ಬರು ಯುವ ಸ್ಫೋಟಕ ಬ್ಯಾಟರ್​ಗಳಾದ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಒದಗಿಸಿಕೊಟ್ಟರು. ಇವರಿಬ್ಬರು ಮೊದಲ ವಿಕೆಟ್​ಗೆ 8.4 ಓವರ್​ಗಳಲ್ಲಿ 81 ರನ್​​ಗಳ ಜೊತೆಯಾಟ ನೀಡಿದರು.

ಇಬ್ಬರಿಗೂ ಮುಕ್ತವಾಗಿ ಬ್ಯಾಟ್ ಬೀಸಲು ಕೆಕೆಆರ್ ಬೌಲರ್​ಗಳು ಅವಕಾಶ ನೀಡದಿದ್ದರೂ, ಕಳಪೆ ಬೌಲಿಂಗ್​ ಅನ್ನು ಸರಿಯಾಗಿ ದಂಡಿಸಿದರು. ಅದರಲ್ಲೂ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ್ದ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲೂ ಮತ್ತೊಂದು ಅರ್ಧಶತಕದತ್ತ ದಾಪುಗಾಲಿಡುತ್ತದ್ದರು. ಆದರೆ ವರುಣ್ ಚಕ್ರವರ್ತಿ ಬೌಲಿಂಗ್​ನಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ವೈಭವ್ ರಮಣ್​ದೀಪ್​ಗೆ ಕ್ಯಾಚಿತ್ತು ಔಟಾದರು. ತಮ್ಮ ಇನ್ನಿಂಗ್ಸ್​ನಲ್ಲಿ 28 ಎಸೆತಗಳನ್ನು ಎದುರಿಸಿದ ವೈಭವ್ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 46 ರನ್ ಬಾರಿಸಿ ಔಟಾದರು.

Follow Us