ಕುಮಾರಸ್ವಾಮಿ ಬಗ್ಗೆ ಸಂವೇದನೆರಹಿತ ಕಾಮೆಂಟ್ ಮಾಡುವ ಅವಿವೇಕಿ ಇಕ್ಬಾಲ್ ಹುಸ್ಸೇನ್ ಬಾಬರ್ ಸಂತತಿಯವನು: ಮುನಿರತ್ನ ನಾಯ್ಡು

|

Updated on: Mar 14, 2024 | 10:30 AM

ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಒಬ್ಬ ಗಣ್ಯವ್ಯಕ್ತಿಯನ್ನು ಕುರಿತು ರಾಮನಗರ ಶಾಸಕ ಸಂವೇದನೆರಹಿತ ಕಾಮೆಂಟ್ ಮಾಡುತ್ತಾನೆ. ರಾಜ್ಯದ ಎಲ್ಲ 7 ಕೋಟಿ ಕನ್ನಡಿಗರು ಕುಮಾರಸ್ವಾಮಿ ಚೆನ್ನಾಗಿರಲಿ ಅನ್ನುತ್ತಿದ್ದರೆ ತಿಳಿವಳಿಕೆ ಇಲ್ಲದ ಅಜ್ಞಾನಿಯಂತೆ ಮಾತಾಡುವ ಇಕ್ಬಾಲ್ ಹುಸ್ಸೇನ್ ಗೆ ರಾಮನಗರದ ಜನತೆಯೇ ಪಾಠ ಕಲಿಸಬೇಕಿದೆ ಎಂದು ಮುನಿರತ್ನ ಹೇಳಿದರು.

ಬೆಂಗಳೂರು: ನಿನ್ನೆ ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಗ್ಗೆ ಹಗುರವಾಗಿ ಮಾತಾಡಿದ್ದ ರಾಮನಗರದ ಶಾಸಕ ಇಕ್ಬಾಲ್ ಹುಸ್ಸೇನ್ (Iqbal Hussain) ಅವರನ್ನು ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು (Munirathna Naidu) ಅವರು ಮಾನವೀಯತೆ ಇಲ್ಲದ ಬಾಬರ್ ಸಂತತಿಯವನು ಎಂದು ಜರಿದಿದ್ದಾರೆ. ಕುಮಾರಸ್ವಾಮಿಯವರು ತಮ್ಮ ಅನಾರೋಗ್ಯ-ಎರಡು ಆಪರೇಶನ್ ಗಳು ಈಗಾಗಲೇ ಆಗಿದ್ದು ಇನ್ನೊಂದು ಆಗಬೇಕಿರುವ ಬಗ್ಗೆ ಬೇಸರ ಮತ್ತು ನೋವಿನಲ್ಲಿ ಮಾತಾಡಿದರೆ ಇಕ್ಬಾಲ್ ಹುಸ್ಸೇನ್ ಗಂಡಸ್ತನದ ಬಗ್ಗೆ ಮಾತಾಡುತ್ತಾನೆ. ಕಟುಕರು ಸಹ ಕುಮಾರಸ್ವಾಮಿಯವರ ಉತ್ತಮ ಆರೋಗ್ಯಕ್ಕಾಗಿ ಹಾರೈಸುತ್ತಿದ್ದರೆ ಇಕ್ಬಾಲ್ ವಿವೇಕಹೀನನಂತೆ ಮಾತಾಡುತ್ತಾನೆ. ಮಾಜಿ ಪ್ರಧಾನ ಮಂತ್ರಿಯ ಮಗ ಮತ್ತು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಒಬ್ಬ ಗಣ್ಯವ್ಯಕ್ತಿಯನ್ನು ಕುರಿತು ರಾಮನಗರ ಶಾಸಕ ಸಂವೇದನೆರಹಿತ ಕಾಮೆಂಟ್ ಮಾಡುತ್ತಾನೆ. ರಾಜ್ಯದ ಎಲ್ಲ 7 ಕೋಟಿ ಕನ್ನಡಿಗರು ಕುಮಾರಸ್ವಾಮಿ ಚೆನ್ನಾಗಿರಲಿ ಅನ್ನುತ್ತಿದ್ದರೆ ತಿಳಿವಳಿಕೆ ಇಲ್ಲದ ಅಜ್ಞಾನಿಯಂತೆ ಮಾತಾಡುವ ಇಕ್ಬಾಲ್ ಹುಸ್ಸೇನ್ ಗೆ ರಾಮನಗರದ ಜನತೆಯೇ ಪಾಠ ಕಲಿಸಬೇಕಿದೆ ಎಂದು ಮುನಿರತ್ನ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದಾಗ ಡಿಕೆ ಸಹೋದರು ಕಿರಾತಕರಾಗಿರಲಿಲ್ಲವೇ? ಇಕ್ಬಾಲ್ ಹುಸ್ಸೇನ್, ಶಾಸಕ

Follow us on