AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ಸಂಪೂರ್ಣ ವಿವರ

ಶ್ರೀಕೃಷ್ಣ ಜನ್ಮಾಷ್ಟಮಿ: ಬೆಂಗಳೂರು ಇಸ್ಕಾನ್ ಕೇಂದ್ರಗಳಲ್ಲಿನ ಮಹೋತ್ಸವದ ಸಂಪೂರ್ಣ ವಿವರ

ಅಕ್ಷತಾ ವರ್ಕಾಡಿ
|

Updated on: Sep 04, 2026 | 10:19 AM

Share

ಇಸ್ಕಾನ್ ಬೆಂಗಳೂರು ಈ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ನಗರದ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಅದ್ದೂರಿಯಾಗಿ ಆಚರಿಸುತ್ತಿದೆ. 2.5 ಲಕ್ಷ ಭಕ್ತಾದಿಗಳು ನಿರೀಕ್ಷಿತರಾಗಿದ್ದು, ವಿಶೇಷ ಅಭಿಷೇಕ, ಮಹಾಪ್ರಸಾದ ಮತ್ತು ಕೋಟಿ ಜಪ ಯಜ್ಞ ಏರ್ಪಡಿಸಲಾಗಿದೆ. ಜನ್ಮಾಷ್ಟಮಿಯ ದಿನದಂದು 100 ಕೋಟಿ ನಾಮ ಜಪ ಪೂರ್ಣಗೊಳಿಸಿ ವಿಶ್ವ ಶಾಂತಿ ಮತ್ತು ನೆಮ್ಮದಿಗಾಗಿ ಕೃಷ್ಣನಿಗೆ ಅರ್ಪಿಸಲಾಗುತ್ತಿದೆ.

ಇಸ್ಕಾನ್ ಬೆಂಗಳೂರು ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಅತೀವ ಭಕ್ತಿ ಮತ್ತು ಸಂಭ್ರಮದಿಂದ ಆಚರಿಸುತ್ತಿದೆ. ಈ ಬಾರಿಯ ಜನ್ಮಾಷ್ಟಮಿ ಆಚರಣೆಗಳು ನಗರದ ನಾಲ್ಕು ಪ್ರಮುಖ ಸ್ಥಳಗಳಲ್ಲಿ ನಡೆಯುತ್ತಿವೆ. ಇವು ರಾಜಾಜಿನಗರದ ಹರೇ ಕೃಷ್ಣ ಗಿರಿ, ವಸಂತಪುರದ ವೈಕುಂಠಗಿರಿ, ವೈಟ್‌ಫೀಲ್ಡ್‌ನಲ್ಲಿರುವ ಹರೇ ಕೃಷ್ಣ ಫೀಲ್ಡ್ಸ್ (ಕೆಟಿಪಿಓ), ಮತ್ತು ಸರ್ಜಾಪುರ ರಸ್ತೆಯಲ್ಲಿರುವ ಇಸ್ಕಾನ್ ಕೇಂದ್ರಗಳು. ಇಸ್ಕಾನ್ ಬೆಂಗಳೂರಿನ ಸಂಪರ್ಕಾಧಿಕಾರಿ ಮಹೋತ್ಸಾಹ ಚೈತನ್ಯ ದಾಸರು ಈ ಕುರಿತು ಮಾಹಿತಿ ನೀಡಿದ್ದಾರೆ. ಜನ್ಮಾಷ್ಟಮಿಯ ವಿಶೇಷವಾಗಿ, ಶ್ರೀ ರಾಧಾಕೃಷ್ಣಚಂದ್ರರ ಮೂರ್ತಿಗಳಿಗೆ ದಿನದಲ್ಲಿ ನಾಲ್ಕು ಬಾರಿ ವಿಶೇಷ ಅಭಿಷೇಕ ನಡೆಸಲಾಗುತ್ತಿದೆ. ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿ, 11 ಗಂಟೆ, ಸಂಜೆ 5 ಗಂಟೆ, ಮತ್ತು ರಾತ್ರಿ 9:30 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಕೃಷ್ಣನ ಜನನದ ಸಮಯದವರೆಗೆ ಈ ಆಚರಣೆಗಳು ಮುಂದುವರಿಯುತ್ತವೆ. ಮಧ್ಯರಾತ್ರಿ 12 ಗಂಟೆಗೆ ಮಹಾಮಂಗಳಾರತಿ ನಡೆಯಲಿದ್ದು, ಇದರೊಂದಿಗೆ ಜನ್ಮಾಷ್ಟಮಿ ಸಂಭ್ರಮ ಸಂಪನ್ನಗೊಳ್ಳಲಿದೆ.

 

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us