ಕದನವಿರಾಮದ ನಂತರವೂ ಲೆಬನಾನ್ ಮೇಲೆ ಇಸ್ರೇಲ್ ಭೀಕರ ದಾಳಿ; 300ಕ್ಕೂ ಹೆಚ್ಚು ಜನ ಸಾವು
ಇಸ್ರೇಲ್ ನಡೆಸಿದ ದಾಳಿಯಿಂದ ಲೆಬನಾನ್ನಲ್ಲಿ 300ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸಾವು-ನೋವಿನ ಬಗ್ಗೆ ಲೆಬನಾನ್‌ನ ಆರೋಗ್ಯ ಸಚಿವರು ಹೇಳಿಕೆ ನೀಡಿದ್ದು, ಇಂದು ಒಂದೇ ದಿನ 300ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ, ಹಲವರಿಗೆ ಗಾಯಗಳಾಗಿವೆ ಎಂದಿದ್ದಾರೆ. ಇಂದು ಇಸ್ರೇಲ್ ಅತ್ಯಂತ ಭೀಕರ ಹಾಗೂ ಅತಿ ದೊಡ್ಡ ದಾಳಿ ನಡೆಸಿದೆ. ಇರಾನ್ ಮತ್ತು ಅಮೆರಿಕದ ನಡುವಿನ ಯುದ್ಧಕ್ಕೆ ಕದನ ವಿರಾಮ ಜಾರಿಯಾಗುತ್ತಿದ್ದಂತೆ ಈ ದಾಳಿ ನಡೆದಿದೆ.
ಲೆಬನಾನ್, ಏಪ್ರಿಲ್ 8: ಕದನವಿರಾಮದ ಬಳಿಕವೂ ಲೆಬನಾನ್ ಮೇಲೆ ಇಸ್ರೇಲ್ (Israel) ಸೇನೆ ದಾಳಿ ನಡೆಸಿದೆ. ಇಸ್ರೇಲ್ ವಾಯುದಾಳಿಯಿಂದ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಲೆಬನಾನ್ ಮೇಲಿನ ದಾಳಿ ಹೀಗೆಯೇ ಮುಂದುವರಿಯುತ್ತದೆ ಎಂದು ಇಸ್ರೇಲ್ ಸೇನಾ ಮುಖ್ಯಸ್ಥ ಹೇಳಿದ್ದಾರೆ. ಲೆಬನಾನ್‌ನಲ್ಲಿರುವ ಹಿಜಬೊಲ್ಲಾಹ ಉಗ್ರರ ಸರ್ವನಾಶವಾಗೋವರೆಗೆ ದಾಳಿ ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಕದನ ವಿರಾಮ ಏರ್ಪಟ್ಟರೂ ಲೆಬನಾನ್‌ನ ಮೇಲಿನ ಇಸ್ರೇಲ್ ದಾಳಿಗೆ ಲೆಬನಾನ್ ಸರ್ಕಾರ ಹಾಗೂ ಹಿಜಬೊಲ್ಲಾಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದರೆ, ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಕದನ ವಿರಾಮದಲ್ಲಿ ಲೆಬನಾನ್ ಸೇರಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಲೆಬನಾನ್‌ನಲ್ಲಿರುವ ಹಿಜಬೊಲ್ಲಾಹ ಒಂದು ಉಗ್ರಸಂಘಟನೆಯಾಗಿರುವುದರಿಂದ ಲೆಬನಾನ್ ಕದನ ವಿರಾಮದ ವ್ಯಾಪ್ತಿಯಲ್ಲಿಲ್ಲ ಎಂದಿದ್ದಾರೆ. ಹೀಗಾಗಿ ಇಸ್ರೇಲ್ ಲೆಬನಾನ್‌ನಲ್ಲಿರುವ ಹಿಜಬೊಲ್ಲಾಹ್ ಮೇಲೆ ದಾಳಿ ಮುಂದುವರಿಸುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಉತ್ತರ ಪ್ರದೇಶದಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಪೈಲಟ್ಗೆ ಗಂಭೀರ ಗಾಯ
ಬೆಂಗಳೂರಿಗರ ಬಗ್ಗೆ ಸಚಿವ ಕೃಷ್ಣಭೈರೇಗೌಡರ ಅಂತರಾಳದ ನುಡಿಗಳು
ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು
"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ

