ಟಿವಿ9 ‘ನವನಕ್ಷತ್ರ ಸನ್ಮಾನ’ ಪ್ರಶಸ್ತಿ ಪಡೆದ ಇಸ್ರೋ ವಿಜ್ಞಾನಿ ರೂಪಾ ಸಾಧನೆಗಳೇನು? ಇಲ್ಲಿದೆ ವಿವರ
ಪ್ರಥಮ ಪ್ರಯತ್ನದಲ್ಲೇ ಮಂಗಳ ಗ್ರಹಕ್ಕೆ ಉಪಗ್ರಹ ರವಾನಿಸಿದ ಜಗತ್ತಿನ ಏಕೈಕ ರಾಷ್ಟ್ರ ಎನ್ನುವ ಹಿರಿಮೆಗೆ ಭಾರತ ಪಾತ್ರವಾಗಿತ್ತು. ಈ ಸಾಧನೆಗೆ ಕಾರಣವಾದ ಇಸ್ರೋ ವಿಜ್ಞಾನಿಗಳಲ್ಲಿ ಕರುನಾಡಿನ ಹೆಮ್ಮೆಯ ಮಗಳು ರೂಪಾ ಎಂ.ವಿ. ಸಹ ಒಬ್ಬರು.
ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ 9 ಜನರನ್ನು ಟಿವಿ9 ಕನ್ನಡ ವಾಹಿನಿ ಸನ್ಮಾನಿಸಿದೆ. ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿಗಳನ್ನು ಇತ್ತೀಚೆಗೆ ನೀಡಲಾಯಿತು. ಪ್ರಶಸ್ತಿ ಪುರಸ್ಕೃತರಲ್ಲಿ ಇಸ್ರೋ ವಿಜ್ಞಾನಿ ರೂಪಾ ಎಂ.ವಿ. ಕೂಡ ಪ್ರಮುಖರು. ಈ ಕುರಿತು ಅವರು ಮಾತನಾಡಿದ್ದಾರೆ. ‘ಇಸ್ರೋದಲ್ಲಿ ಮಹಿಳೆಯರು ಮತ್ತು ಪುರುಷರು ಒಟ್ಟಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ. ತುಂಬ ಚೆನ್ನಾಗಿ ಟೀಮ್ ವರ್ಕ್ ಮಾಡ್ತಾ ಇದ್ದೇವೆ’ ಎಂದು ಹೇಳಿದ ರೂಪಾ ಅವರು ಇಸ್ರೋದಲ್ಲಿ ತಮ್ಮ ಕಾರ್ಯವೈಖರಿ ಹೇಗಿದೆ ಎಂಬುದನ್ನು ವಿವರಿಸಿದರು. ‘ಟಿವಿ9 ಕನ್ನಡ’ ಸುದ್ದಿ ವಾಹಿನಿಯ 15ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ‘ನವನಕ್ಷತ್ರ ಸನ್ಮಾನ 2021’ ಪ್ರಶಸ್ತಿಗಳನ್ನು ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಚಿವ ಸುಧಾಕರ್, ರವಿಚಂದ್ರನ್, ಶಿವರಾಜ್ಕುಮಾರ್, ಸಂಗೀತ ನಿರ್ದೇಶಕ ರಘು ದೀಕ್ಷಿತ್, ಚರಣ್ ರಾಜ್, ಮಾಜಿ ಲೋಕಾಯುಕ್ತಾ ಸಂತೋಷ್ ಹೆಗ್ಡೆ ಸೇರಿದಂತೆ ಅನೇಕರು ಸಾಕ್ಷಿಯಾದರು.
ಇದನ್ನೂ ಓದಿ:
‘ಕನ್ನಡಿಗರ ಹೆಮ್ಮೆಯ ಚಾನೆಲ್ ಟಿವಿ9’: ನವನಕ್ಷತ್ರ ಸನ್ಮಾನ ಕಾರ್ಯಕ್ರಮಕ್ಕೆ ಸಂತೋಷ್ ಹೆಗ್ಡೆ ಮೆಚ್ಚುಗೆ
‘ಪತ್ರಿಕೋದ್ಯಮಕ್ಕೆ ದೊಡ್ಡ ಶಕ್ತಿ ಇದೆ’; ಟಿವಿ9 ‘ನವನಕ್ಷತ್ರ ಸನ್ಮಾನ 2021’ ಕಾರ್ಯಕ್ರಮದಲ್ಲಿ ರಶ್ಮಿಕಾ ಮಾತು