Loading video

ಜನಗಣತಿ ಮರುಸಮೀಕ್ಷೆ ಮಾಡುವ ಅನಿವಾರ್ಯತೆ ಇದೆ, ಹಾಗಾಗಿ ಮಾಡಲೇಬೇಕು: ಸತೀಶ್ ಜಾರಕಿಹೊಳಿ, ಸಚಿವ

Updated on: Jun 12, 2025 | 2:56 PM

ಜಾತಿಗಣತಿ ಮಾಡಿಸಲು ಸರ್ಕಾರ ಸುಮಾರು ₹200 ಕೋಟಿ ಖರ್ಚು ಮಾಡಿದೆಯಲ್ಲ, ಅದು ನೀರಲ್ಲಿ ಹೋಮ ಮಾಡಿದಂತೆಯೇ? ಅಂತ ಕೇಳಿದರೂ ಸತೀಶ್ ಬಳಿ ಉತ್ತರವಿಲ್ಲ. ಕೊನೆಗೆ ಅವರು ಮರುಸಮೀಕ್ಷೆ ಮಾಡಿಸಿದರೆ ಅದರಲ್ಲೇನೂ ತಪ್ಪಿಲ್ಲ, ಸಮೀಕ್ಷೆಯ ಬಗ್ಗೆ ಜನರಲ್ಲಿ ಗೊಂದಲಗಳಿವೆ, ಅಂಕಿ-ಅಂಶಗಳು ಬದಲಾಗಿರುವ ಕಾರಣ ಜನರ ಗೊಂದಲ ದೂರವಾಗೋದು ಬಹಳ ಮುಖ್ಯ ಎಂದು ಸಚಿವ ಹೇಳಿದರು.

ಬೆಂಗಳೂರು, ಜೂನ್ 12: ಜಾತಿಗಣತಿ ಸರಿಯಾಗಿಲ್ಲ ಅಂತ ಬಲ್ಲವರು, ಸಂಘಸಂಸ್ಥೆಗಳು, ತಿಳಿದವರು ಮಠಮಾನ್ಯಗಳು ಹೇಳಿದರೂ ಸೊಪ್ಪು ಹಾಕದ ಸಿದ್ದರಾಮಯ್ಯ ಸರ್ಕಾರ (Siddaramaiah government) ಎಐಸಿಸಿ ಮರುಸರ್ವೇ ಮಾಡಲು ಹೇಳಿದ್ದಕ್ಕೆ ಒಪ್ಪಿಗೆ ನೀಡಿತೇ ಎಂದು ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಸಮಂಜಸ ಉತ್ತರ ನೀಡಲಿಲ್ಲ. ಸರ್ಕಾರ ಮಾಡಿಸಲಿರುವುದು ಮರುಸಮೀಕ್ಷೆ ಅಲ್ಲವೆಂದು ಹೇಳುವ ಅವರು, ಸಮುದಾಯಗಳ ಅಭಿಪ್ರಾಯ ಸಂಗ್ರಹಿಸಲು ಸರಕಾರದ ಪ್ರತಿನಿಧಿಗಳೆಲ್ಲ ಓಡಾಡುತ್ತಿದ್ದಾರೆ, ಎಐಸಿಸಿ ಕೂಡ ತನ್ನ ಪ್ರಯತ್ನ ಮಾಡುತ್ತಿದೆ, ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕೆಂದು ತಾನು ಮತ್ತು ಉಳಿದ ಸಚಿವರು ಕೂಡ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದರು ಎಂದು ಸತೀಶ್ ಹೇಳಿದರು.

ಇದನ್ನೂ ಓದಿ:   ಅಧಿಕಾರ ಶಾಶ್ವತ ಅಲ್ಲ, ಚಕ್ರ ತಿರುಗುತ್ತಲೇ ಇರತ್ತೆ: ರಾಮನಗರ ಹೆಸರು ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಮಾರ್ಮಿಕ ಹೇಳಿಕೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ