ಜಮೀರ್ ಬಗ್ಗೆ ಮಾತಾಡೋದು ಕೆಸರಲ್ಲಿ ಕಲ್ಲೆಸೆದು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ನಾಯಕ

|

Updated on: Oct 02, 2023 | 5:39 PM

ಅವರಿಗೆ ನನ್ನ ಉಸಾಬರಿ ಯಾಕೆ? ನನ್ನ ಬಗ್ಗೆ ಚರ್ಚೆ ಮಾಡಿದರೆ ಏನು ಸಿಗುತ್ತದೆ? ಅಥವಾ ನಾನು ಅವರ ಬಗ್ಗೆ ಮಾತಾಡಿದ್ರೆ ನನಗೆ ಸಿಗುವ ಭಾಗ್ಯವಾದರೂ ಏನು? ಪಾಪ, ಈಗ ಅವರು ಮಂತ್ರಿಗಳಾಗಿದ್ದಾರೆ, ತಮ್ಮ ಕೆಲಸದ ಮೇಲೆ ಗಮನ ಹರಿಸಲಿ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ (BZ Zameer Ahmed Khan) ಮತ್ತು ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಡುವೆ ಚಡ್ಡಿ ಜಗಳ ಶುರುವಾಗಿದೆ. ಜಮೀರ್ ಅಹ್ಮದ್, ಇಂದು ಕೆಪಿಸಿಸಿ ಕಚೇರಿಯಲ್ಲಿ (KPCC Office) ಕುಮಾರಸ್ವಾಮಿ ಬಗ್ಗೆ ಮಾತಾಡುತ್ತಾ ಅವರು ಸೆಕ್ಯುಲರ್ ಅಂತ ಗೊತ್ತಿತ್ತು, ಈಗ ಪ್ಯಾಂಟ್ ನೊಳಗೆ ಚಡ್ಡಿ ಧರಿಸುವ ಮೂಲಕ ಅದನ್ನು ಪ್ರೂವ್ ಮಾಡಿದ್ದಾರೆ ಅಂತ ಹೇಳಿದ್ದನ್ನು ಕುಮಾರಸ್ವಾಮಿಗೆ ತಿಳಿಸಿದಾಗ, ಅವರ ಬಗ್ಗೆ ಮಾತಾಡೋದು ಅಂದರೆ ಕೆಸರಲ್ಲಿ ಕಲ್ಲೆಸೆದು ಅದನ್ನು ಮುಖಕ್ಕೆ ಎರಚಿಕೊಂಡಂತೆ ಎಂದು ಹೇಳಿದರು. ಮುಂದುವರಿದು ಮಾತಾಡಿದ ಕುಮಾರಸ್ವಾಮಿ, ಅವರಿಗೆ ನನ್ನ ಉಸಾಬರಿ ಯಾಕೆ? ನನ್ನ ಬಗ್ಗೆ ಚರ್ಚೆ ಮಾಡಿದರೆ ಏನು ಸಿಗುತ್ತದೆ? ಅಥವಾ ನಾನು ಅವರ ಬಗ್ಗೆ ಮಾತಾಡಿದ್ರೆ ನನಗೆ ಸಿಗುವ ಭಾಗ್ಯವಾದರೂ ಏನು? ಪಾಪ, ಈಗ ಅವರು ಮಂತ್ರಿಗಳಾಗಿದ್ದಾರೆ, ತಮ್ಮ ಕೆಲಸದ ಮೇಲೆ ಗಮನ ಹರಿಸಲಿ ಎಂದು ಹೇಳಿದರು. ಜಮೀರ್ ಅಹ್ಮದ್ ಮಾಡಿದ ಕಾಮೆಂಟ್ ಗೆ ಕುಮಾರಸ್ವಾಮಿ ಉಗ್ರವಾಗಿ ಟೀಕಿಸುತ್ತಾರೆ ಅಂತ ಮಾಧ್ಯಮ ಪ್ರತಿನಿಧಿಗಳು ಅಂದುಕೊಂಡಿದ್ದು ಹುಸಿ ಹೋಯಿತು ಮತ್ತು ಸಾಫ್ಟ್ ಆಗಿ ಮಾತಾಡಿದ್ದು ಆಶ್ಚರ್ಯವೂ ಹುಟ್ಟಿಸಿತು.

ಮತ್ತಷ್ಟು ವಿಡಿಯೋ ಸುದ್ದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ