ಧಾರ್ಮಿಕ ಆಚರಣೆಗಳ ಬಗ್ಗೆ ಹಗುರವಾಗಿ ಮಾತಾಡುವುದು ಕಾಂಗ್ರೆಸ್ ಸಂಸ್ಕೃತಿಯಲ್ಲಿ ಮೇಳೈಸಿದೆ: ಕುಮಾರಸ್ವಾಮಿ

ಧಾರ್ಮಿಕ ಆಚರಣೆಗಳ ಬಗ್ಗೆ ಹಗುರವಾಗಿ ಮಾತಾಡುವುದು ಕಾಂಗ್ರೆಸ್ ಸಂಸ್ಕೃತಿಯಲ್ಲಿ ಮೇಳೈಸಿದೆ: ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 29, 2025 | 7:02 PM

ಕಾಂಗ್ರೆಸ್ ಪಕ್ಷ ಮೊನ್ನೆಯಷ್ಟೇ ಬೆಳಗಾವಿಯಲ್ಲಿ ಮಹಾತ್ಮಾ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷತೆ ವಹಿಸಿಕೊಂಡ ಶತಮಾನೋತ್ಸವವನ್ನು ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಅಂತ ಅಚರಿಸಿತು, ಗಾಂಧಿ ಸ್ಮರಣೆ ಮಾಡಿದ ಕಾಂಗ್ರೆಸ್ ನಾಯಕರಲ್ಲಿ ಆ ಮಹಾನುಭಾವನ ಬಗ್ಗೆ ಗೌರವ, ಆದರ, ಪೂಜ್ಯಭಾವನೆ ಇದ್ದಿದ್ದರೆ ಮಲ್ಲಿಕಾರ್ಜುನ ಖರ್ಗೆ ಅಂಥ ಪದಗಳನ್ನು ಬಳಸುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮೈಸೂರು: ಮಲ್ಲಿಕಾರ್ಜುನ ಖರ್ಗೆ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದುಕೊಂಡು ಕುಂಭಸ್ನಾನದ ಬಗ್ಗೆ ಲಘುವಾಗಿ ಮಾತಾಡಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಪ್ರತಿಯೊಂದು ಕುಟುಂಬಕ್ಕೆ ತನ್ನದೇ ಆದ ಧಾರ್ಮಿಕ ನಂಬುಗೆ ಆಚರಣೆಗಳಿರುತ್ತವೆ, ಕೆಲವರು ಧಾರ್ಮಿಕ ಆಚರಣೆಗಳನ್ನು ನಂಬುತ್ತಾರೆ ಕೆಲವರು ಅವುಗಳ ಬಗ್ಗೆ ಲಘುವಾಗಿ ಮಾತಾಡುತ್ತಾರೆ, ಧಾರ್ಮಿಕ ಆಚರಣೆಗಳಲ್ಲಿ ಕಾಂಗ್ರೆಸ್ ನಾಯಕರಿಗೆ ನಂಬಿಕೆ ಇಲ್ಲ, ಅದಕ್ಕೆ ಅವರ ಸಂಸ್ಕೃತಿಯೇ ಕಾರಣ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಗುತ್ತಿಗೆದಾರರು ಪತ್ನಿಯರ ಒಡವೆ ಒತ್ತೆಯಿಟ್ಟು ಬೀದಿಗೆ ಬಂದಿದ್ದಾರೆ, ಖರ್ಗೆಯಿಂದ ಉಡಾಫೆ ಮಾತು ಬೇಡ: ಕುಮಾರಸ್ವಾಮಿ