ತಮ್ಮ ನಿವಾಸದ ಎದುರು ಜನಜಂಗುಳಿ ತಪ್ಪಿಸಲು ಸಿಎಂ ಸಿದ್ದರಾಮಯ್ಯ ವಾರಕ್ಕೊಮ್ಮೆ ಜನತಾ ದರ್ಶನ ನಡೆಸುವುದು ಒಳಿತು

ಅರುಣ್​ ಕುಮಾರ್​ ಬೆಳ್ಳಿ

Updated on: Jun 16, 2023 | 1:55 PM

ಜನ ವ್ಯವಸ್ಥಿತವಾಗಿ ಸಾಲಾಗಿ ಬಂದು ತಮ್ಮ ದೂರು-ದುಮ್ಮಾನು ಹೇಳಿಕೊಳ್ಳಲು ಸಾಧ್ಯವಾಗುವ ಏರ್ಪಾಟನ್ನು ಮುಖ್ಯಮಂತ್ರಿ ಮಾಡಬೇಕು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಾರಕ್ಕೊಮ್ಮೆ ಜನತಾ ದರ್ಶನ ಕಾರ್ಯಕ್ರಮ ಶುರುಮಾಡುವುದು ಒಳ್ಳೆಯದು ಅಂತ ಈ ವಿಡಿಯೋ ನೋಡಿದರೆ ಅನಿಸುತ್ತೆ. ಅವರಿ ಒಂದು ದಿನ ಅಥವಾ ಅರ್ಧ ದಿನವನ್ನು (half-a-day) ಅದಕ್ಕೆಂದೇ ಮೀಸಲಿಟ್ಟು ಸೂಕ್ತ ವ್ಯವಸ್ಥೆ ಮಾಡಿದರೆ ಮಹಿಳೆಯರು ಜನರ ನೂಕುನುಗ್ಗಲಲ್ಲಿ ಸಿಕ್ಕು ಪರದಾಡುವುದು ತಪ್ಪುತ್ತದೆ. ಒಬ್ಬ ಯುವತಿ (young woman) ತನ್ನ ಅಹವಾಲನ್ನು ಸಿದ್ದರಾಮಯ್ಯಗೆ ತಲುಪಿಸಲು ಪಡುವ ಕಷ್ಟವನ್ನು ನೋಡಿ. ಜನರನ್ನು ತಳ್ಳಾಡಿಕೊಂಡು ಹೇಗೋ ಸಿಎಂ ಕಾರಿನ ಬಳಿ ಬಂದರೆ ಕಾರಿನ ಬಳಿಯಿರುವ ಗಡ್ಡಧಾರಿಯೊಬ್ಬ ಹೆಗಲ ಮೇಲೆ ಕೈ ಹಾಕುತ್ತಾನೆ. ಆವನು ಆಕೆಯ ಸಂಬಂಧಿಯಾಗಿರಲಾರ, ಯಾಕೆಂದರೆ ಅದಕ್ಕೂ ಮೊದಲು ಯುವತಿ ಮುಂದೆ ಬಾರದಂತೆ ಕೈ ಅಡ್ಡ ಹಿಡಿದಿರುತ್ತಾನೆ. ಇಂಥದನ್ನೆಲ್ಲ ತಪ್ಪಿಸಲು ಮತ್ತು ಜನ ವ್ಯವಸ್ಥಿತವಾಗಿ ಸಾಲಾಗಿ ಬಂದು ತಮ್ಮ ದೂರು-ದುಮ್ಮಾನು ಹೇಳಿಕೊಳ್ಳಲು ಸಾಧ್ಯವಾಗುವ ಏರ್ಪಾಟನ್ನು ಮುಖ್ಯಮಂತ್ರಿ ಮಾಡಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.