Recovery agents in danger: ಮುಖ್ಯಮಂತ್ರಿಯವರೇ, ಸಾಲಮನ್ನಾಗೆ ಸಂಬಂಧಿಸಿದ ಗೊಂದಲ ಬೇಗ ದೂರಮಾಡಿ!
ಸಾಲ ಪಡೆದಿರುವ ಮಹಿಳೆಯರು ಅದನ್ನು ಸಿದ್ದರಾಮಯ್ಯ ಮನ್ನಾ ಮಾಡಿದ್ದಾರೆ ಎಂದು ಸಾಲ ವಸೂಲಾತಿಗೆ ಬರುವ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲಾರಂಭಿಸಿದ್ದಾರೆ.
ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅತ್ಯಂತ ಜರೂರಾಗಿ ನೋಡಬೇಕಾದ ವಿಡಿಯೋ ಇದು. ಚುನಾವಣೆಗೆ ಮುನ್ನ ಮಹಿಳೆಯರರು ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಂದ (self help groups) ಪಡೆದಿರುವ ಸಾಲ ಮಾಡುವ ಭರವಸೆ ನೀಡಿದ್ದರು. ಅವರು ನೀಡಿದ ಭರವಸೆಗೆ ಕೆಲ ಕಂಡೀಷನ್ ಗಳಿದ್ದವು. ಆದರೆ ರಾಜ್ಯದ ವಿವಿಧ ಭಾಗಗಳಲ್ಲಿ ಸಾಲ ಮೈಕ್ರೋ ಹಣಕಾಸು ಸಂಸ್ಥೆಗಳಿಂದ (micro finance firms) ಸಾಲ ಪಡೆದಿರುವ ಮಹಿಳೆಯರು ಅದನ್ನು ಸಿದ್ದರಾಮಯ್ಯ ಮನ್ನಾ ಮಾಡಿದ್ದಾರೆ ಎಂದು ಸಾಲ ವಸೂಲಾತಿಗೆ ಬರುವಸಿಬ್ಬಂದಿಯ ಮೇಲೆ ಹಲ್ಲೆ ಮಾಡಲಾರಂಭಿಸಿದ್ದಾರೆ. ನೀವಿಲ್ಲಿ ನೋಡುತ್ತಿರೋದು ಜಿಲ್ಲೆಯ ಮುಳುಬಾಗಿಲು ತಾಲ್ಲೂಕಿನಲ್ಲಿರುವ ಬೈರಕೂರು ಗ್ರಾಮದಲ್ಲಿ ನಡೆದ ದೃಶ್ಯ. ಮಹಿಳೆಯರು ಸಿಬ್ಬಂದಿಯನ್ನು ಎಳೆದಾಡುತ್ತಿದ್ದಾರೆ ಮತ್ತು ಅವರನ್ನು ಕಟ್ಟಿಹಾಕುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಲಮನ್ನಾಗೆ ಸಂಬಂಧಿಸಿದ ಗೊಂದಲವನ್ನು ಕೂಡಲೇ ದೂರಮಾಡದಿದ್ದರೆ, ವಸೂಲಾತಿಗೆ ಹೋಗುವವರಿಗೆ ಅಪಾಯ ತಪ್ಪಿದ್ದಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ