ಬೆಳಗಾವಿ ಚೆನ್ನಮ್ಮ ಸರ್ಕಲ್‌ನಲ್ಲಿ ಶೆಟ್ಟರ್ ಫ್ಯಾಮಿಲಿ ಸಖತ್‌ ಡ್ಯಾನ್ಸ್

|

Updated on: Jun 04, 2024 | 10:22 PM

ಜಗದೀಶ್ ಶೆಟ್ಟರ್(Jagadish Shettar) ಗೆಲವು ಹಿನ್ನೆಲೆ ಬೆಳಗಾವಿ(Belagavi) ಚನ್ನಮ್ಮ ವೃತ್ತದ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಈ ವೇಳೆ ಚೆನ್ನಮ್ಮ ವೃತ್ತದಲ್ಲಿ ಜಗದೀಶ್ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್, ಪುತ್ರ, ಸೊಸೆ ಮತ್ತು ಕುಟುಂಬಸ್ಥರು ಕುಣಿದು ಸಂಭ್ರಮಿಸಿದರು.

ಬೆಳಗಾವಿ, ಜೂ.04: ಜಗದೀಶ್ ಶೆಟ್ಟರ್(Jagadish Shettar) ಗೆಲವು ಹಿನ್ನೆಲೆ ಬೆಳಗಾವಿ(Belagavi) ಚನ್ನಮ್ಮ ವೃತ್ತದ ಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಸಂಭ್ರಮಾಚರಣೆ ಮನೆ ಮಾಡಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಿದರು. ಈ ವೇಳೆ ಚೆನ್ನಮ್ಮ ವೃತ್ತದಲ್ಲಿ ಜಗದೀಶ್ ಶೆಟ್ಟರ್ ಪತ್ನಿ ಶಿಲ್ಪಾ ಶೆಟ್ಟರ್, ಪುತ್ರ, ಸೊಸೆ ಮತ್ತು ಕುಟುಂಬಸ್ಥರು ಕುಣಿದು ಸಂಭ್ರಮಿಸಿದರು. ಶೆಟ್ಟರ್ ಕುಟುಂಬಸ್ಥರಿಗೆ ಕಾರ್ಯಕರ್ತರು ಹಾಗೂ ಬೆಂಬಲಿಗರು ಸಾಥ್ ನೀಡಿದರು. ಇನ್ನು ಗೆದ್ದ ಬಳಿಕ ಮಾತನಾಡಿದ್ದ ಶೆಟ್ಟರ್​, ‘ನಾನು ಹೊರಗಿನವರು ಅನ್ನುತ್ತಿದ್ದವರಿಗೆ ಮತದಾರರೇ ಉತ್ತರ ನೀಡಿದ್ದಾರೆ. ಬೆಳಗಾವಿಗೆ, ನನಗೆ ನಂಟಿದೆ ಅನೋದನ್ನ ನಾನು ಪದೇ ಪದೇ ಹೇಳಿದ್ದೇನೆ. ಬೆಳಗಾವಿ ಜನತೆಗೆ ಚಿರಋಣಿಯಾಗಿದ್ದೇನೆ.

ಹುಬ್ಬಳ್ಳಿ ಜನತೆಗಿಂತ ಬೆಳಗಾವಿ ಜನರು ದೊಡ್ಡ ಪ್ರೀತಿ ತೋರಿಸಿದ್ದು, ಒಂದು ಲಕ್ಷದ ಎಪ್ಪತ್ತು ಸಾವಿರ ಮತಗಳ ಅಂತರದಿಂದ ಗೆಲುವಾಗಿದೆ. ಜಿಲ್ಲೆಯ ಪ್ರಮುಖರ ಜತೆ ಸಭೆ ಮಾಡಿ ಬೆಳಗಾವಿ ಅಭಿವೃದ್ಧಿ ಮಾಡ್ತೇನೆ. ಮಂಗಲಾ ಅಂಗಡಿ ತಂದಿರುವ ಯೋಜನೆಯನ್ನ ಕಂಪ್ಲೀಟ್ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ. ಮಂತ್ರಿ ಆಗೋದು ನನ್ನ ಕೈಲಿಲ್ಲ, ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸ್ತೇನೆ . ‘ಕೈ’​ಗೆ ಇಷ್ಟು ಸೀಟ್​ ಬಂದಿದ್ದೆ ದೊಡ್ಡದು, ನಾಳೆಯಿಂದ ಕಿತ್ತಾಟ ಆರಂಭವಾಗಲಿದೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on