ರಾಮ ಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗಲ್ಲ; ಸಚಿವ ಸಂತೋಷ್ ಲಾಡ್ ಹೇಳಿಕೆಗೆ ಜಗದೀಶ್ ಶೆಟ್ಟರ್ ಕೌಂಟರ್
ರಾಮ ಮಂದಿರ ನಿರ್ಮಾಣ ಮಾಡುಗುವವುದಕ್ಕೆ ಕಾಂಗ್ರೆಸ್ಗೆ ಸಾಧ್ಯ ಆಗಲಿಲ್ಲ. ನಮ್ಮ ಪ್ರಣಾಳಿಕೆಯಲ್ಲಿ ರಾಮ ಮಂದಿರ ಕಟ್ಟತೀವಿ ಎನ್ನುವುದು ಇತ್ತು. ಇದೀಗ ರಾಮ ಮಂದಿರ ಆಗಿದೆ ಎಂದರು. ‘ರಾಮ ಮಂದಿರ ಕಟ್ಟಡ ನಿರ್ಮಾಣ ಆಗುವ ಜಾಗದಲ್ಲಿ ಆಗಿಲ್ಲ ಎಂಬ ಸಂತೋಷ್ ಲಾಡ್ ಹೇಳಿಕೆ, ‘ಜಾಗ ಸರಿ ಇಲ್ಲ ಅಂದ್ರೆ ನೀವು ಕೋರ್ಟ್ಗೆ ಹೋಗಬೇಕಿತ್ತು ಎಂದು ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ, ಫೆ.20: ರಾಮ ಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗಲ್ಲ ಎಂಬ ಸಚಿವ ಸಂತೋಷ್ ಲಾಡ್ (Santosh Lad) ಹೇಳಿಕೆಗೆ ಜಗದೀಶ್ ಶೆಟ್ಟರ್(Jagadish Shettar) ಸಖತ್ ಕೌಂಟರ್ ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ 70 ವರ್ಷ ಆಡಳಿತ ಮಾಡಿದೆ. ಅವಾಗ ಯಾರನ್ನು ಹುಚ್ಚರನ್ನಮಾಡಿದೆ ಎಲ್ಲರಿಗೂ ಗೊತ್ತಿದೆ. ಸ್ವಾತಂತ್ರ್ಯ ಕೊಡಿಸಿದ್ದೇವೆ ಅಂದುಕೊಂಡೆ 70 ವರ್ಷ ಆಡಳಿತ ಮಾಡಿದೆ. ಗರಿಭೀ ಹಠಾವೋ ಎಂದರೂ, ಅವಾಗ ಬಡತನ ನಿರ್ಮೂಲನೆ ಆಯ್ತಾ ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ.
ರಾಮ ಮಂದಿರ ನಿರ್ಮಾಣ ಮಾಡುಗುವವುದಕ್ಕೆ ಕಾಂಗ್ರೆಸ್ಗೆ ಸಾಧ್ಯ ಆಗಲಿಲ್ಲ. ಪ್ರಣಾಳಿಕೆಯಲ್ಲಿ ರಾಮ ಮಂದಿರ ಕಟ್ಟತೀವಿ ಎನ್ನುವುದು ಇತ್ತು. ಇದೀಗ ರಾಮ ಮಂದಿರ ಆಗಿದೆ ಎಂದರು. ಇದೇ ವೇಳೆ ರಾಮ ಮಂದಿರ ಕಟ್ಟಡ ನಿರ್ಮಾಣ ಆಗುವ ಜಾಗದಲ್ಲಿ ಆಗಿಲ್ಲ ಎಂಬ ಹೇಳಿಕೆ, ‘ಜಾಗ ಸರಿ ಇಲ್ಲ ಅಂದ್ರೆ ನೀವು ಕೋರ್ಟ್ಗೆ ಹೋಗಬೇಕಿತ್ತು. ಕಟ್ಟಡ ನಿರ್ಮಾಣವಾ ಸಮಯದಲ್ಲಿ ಏನ್ ಮಾಡ್ತಿದ್ರು. ಸಂತೋಷ್ ಲಾಡ್ಗೆ ಇದೆಲ್ಲ ಅರ್ಥ ಆಗಬೇಕು ಎಂದು ಹೇಳಿದರು.
ರಾಮ ಮಂದಿರ ಬಗ್ಗೆ ಮಾತಾಡಿದ್ರೆ ನಿಮಗೆ ಕಳೆದ ಬಾರಿ ಬಂದಿರುವ ಸೀಟು ಬರಲ್ಲ ಎಂದ ಶೆಟ್ಟರ್, ಚೀನಾ ಅಕ್ರಮಣ ಮಾಡಿದ್ರು, ನಮಗೆ ಹೇಳೋರ ಕೇಳೋರ ಯಾರೂ ಇರಲ್ಲ. ಇವತ್ತು ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲಸಿದೆ. ಮೋದಿ ಅವರು ದೇಶದ ಭದ್ರತೆಗೆ ಮಹತ್ವ ಕೊಟ್ಟಿದ್ದಾರೆ. ಇದನ್ನೆಲ್ಲ ಸಂತೋಷ್ ಲಾಡ್ ಯಾಕೆ ಚರ್ಚೆ ಮಾಡಲ್ಲ. ಸುಮ್ನೆ ವಿಷಯ ಡೈವರ್ಟ್ ಮಾಡ್ತಾರೆ ಎಂದು ಸಂತೋಷ್ ಲಾಡ್ ಕುರಿತು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ