‘ಸುಪ್ರೀಂಕೋರ್ಟ್ ಸೂಚಿಸಿದ ಸ್ಥಳದಲ್ಲಿ ರಾಮ ಮಂದಿರ ಕಟ್ಟಿಲ್ಲ’: ವಿವಾದದ ಬೆನ್ನಲ್ಲೇ ಸಂತೋಷ್ ಲಾಡ್ ಸ್ಪಷ್ಟನೆ
ಸುಪ್ರೀಂಕೋರ್ಟ್ ಸೂಚಿಸಿದ ಸ್ಥಳದಲ್ಲಿ ರಾಮ ಮಂದಿರ ಕಟ್ಟಿಲ್ಲವೆಂದು ತಮ್ಮ ಹೇಳಿಕೆಗೆ ವಿವಾದ ಸೃಷ್ಟಿಯಾಗುತ್ತಲೇ ಸಚಿವ ಸಂತೋಷ್ ಲಾಡ್ ಸ್ಪಷ್ಟನೆ ನೀಡಿದ್ದು, ಅಯೋಧ್ಯೆಯ ಶ್ರೀರಾಮಮಂದಿರದ ಜಾಗ ಸರಿಯಿಲ್ಲ ಅಂತಾ ಹೇಳಿಲ್ಲ. ಸುಪ್ರೀಂಕೋರ್ಟ್ ಕೊಟ್ಟಿರುವ ಜಾಗಕ್ಕಿಂತ ಹೆಚ್ಚುವರಿ ಜಾಗದಲ್ಲಿ ಕಟ್ಟಿದ್ದಾರೆ. ಜಾಗದ ವಿಚಾರದಲ್ಲಿ ಅವ್ಯವಹಾರ ಆಗಿದೆ. ನಾನು ಜನರಲ್ ಆಗಿ ಕಾಮೆಂಟ್ ಮಾಡಿದ್ದೀನಿ ಎಂದು ಹೇಳಿದ್ದಾರೆ.
ಹುಬ್ಬಳ್ಳಿ, ಫೆಬ್ರವರಿ 18: ರಾಮ ಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ ಆದರೆ ಸುಪ್ರೀಂಕೋರ್ಟ್ ಸೂಚಿಸಿದ ಜಾಗದಲ್ಲಿ ಮಂದಿರ ಕಟ್ಟಿಲ್ಲ ಎಂಬ ತಮ್ಮ ಹೇಳಿಕೆ ವಿವಾದ ಸೃಷ್ಟಿಯಾಗುತ್ತಲೇ ಸಚಿವ ಸಂತೋಷ್ ಲಾಡ್ (Santosh Lad) ಯೂಟರ್ನ್ ಹೊಡೆದಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಜಾಗ ಸರಿ ಇಲ್ಲ ಎಂದು ಹೇಳಿರುವುದಲ್ಲ. ಸುಪ್ರೀಂ ಕೋರ್ಟ್ ಏನು ಜಾಗ ಕೊಟ್ಟಿತ್ತೋ, ಅದಕ್ಕಿಂತ ಹೆಚ್ಚಿನ ಜಾಗದಲ್ಲಿ ಕಟ್ಟಿದಾರೆ ಎಂದು ಹೇಳಿದ್ದೇನೆ. ನಾನು ಜನರಲ್ ಆಗಿ ಕಾಮೆಂಟ್ ಮಾಡಿದೀನಿ. ಸುಪ್ರೀಂ ಕೋರ್ಟ್ ಕೊಟ್ಟಿರುವ ಜಾಗಕ್ಕಿಂತ ಹೆಚ್ಚಿಗೆ ಕಟ್ಟಿದ್ದಾರೆ. ಜಾಗದ ವಹಿವಾಟದಲ್ಲಿ ಅವ್ಯವಹಾರ ಆಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ದೇವರ ಭಕ್ತರಿಗೆ ಬಡತನ ಇಲ್ವಾ?
ರಾಮನ ವಿಷಯ ಮಾತಾಡಿದರೆ ಇವರಿಗೇನು ತೊಂದರೆ. ರಾಮ ಮಂದಿರ ಕಟ್ಟಬಾರದ ಎಂದು ಅಲ್ಲ. 40 ಪರ್ಸೆಂಟ್ ಕಟ್ಟಿರುವ ರಾಮ ಮಂದಿರ ಉದ್ಘಾಟನೆ ಮಾಡಿದ್ದಾರೆ. ಶಂಕರಾಚಾರ್ಯರು ಕೂಡ ಉದ್ಘಾಟನೆಗೆ ಬಂದಿಲ್ಲ. ಹೊರಗಡೆ ಏನ ಚರ್ಚೆ ಆಗುತ್ತಿದೆ ಎನ್ನುವುದು ಗೊತ್ತಿಲ್ಲ. ರಾಮ ಮಂದಿರ ಕಟ್ಟಿರುವ ಕಾರಣಕ್ಕೆ ಬಡವರಿಗೆ ಅನಕೂಲ ಆಗತ್ತೆ ಅಂತಾ ಏನ ಕಂಡಿಲ್ಲ. ಎಲ್ಲರೂ ದೇವರು ಭಕ್ತರು, ದೇವರ ಭಕ್ತರಿಗೆ ಬಡತನ ಇಲ್ವಾ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಸುಪ್ರೀಂ ಸೂಚಿಸಿದ ಸ್ಥಳದಲ್ಲಿ ರಾಮಮಂದಿರ ಕಟ್ಟಿಲ್ಲ: ಸಂತೋಷ್ ಲಾಡ್ ಹೇಳಿಕೆಗೆ ಈಶ್ವರಪ್ಪ ತಿರುಗೇಟು
ಇವರು ಮುಂದಿರ ಕಟ್ಟಿ ವೋಟ್ ಕೇಳುತ್ತಿದ್ದಾರೆ. ಪ್ರಪಂಚದಲ್ಲಿ ಬಡತನ ಇದೆ. ಸೂರ್ಯ, ಚಂದ್ರ ಇರುವವರೆಗೂ ಬಡತನ ಇರತ್ತೆ. ಇವರ ಹತ್ತು ವರ್ಷದಲ್ಲಿ ಬಡತನ ಹೇಗೆ ನಿರ್ಮೂಲನೆ ಆಯ್ತು ಎಂದು ಹೇಳುತ್ತಿಲ್ಲ. ಆದರೆ ರಾಮಮಂದಿರ ಕಟ್ಟಿರುವ ಬಗ್ಗೆ ಮಾತಾಡುತ್ತಿದ್ದಾರೆ. ಆ ಉದ್ದೇಶಕ್ಕೆ ನಾನು ಹೇಳದೆ. ರಾಮನ ಬಗ್ಗೆ ಮಾತಾಡಿದರೆ ಸಮಸ್ಯೆ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಹಿಂದುತ್ವ ಬಗ್ಗೆ ಮಾತನಾಡುವ ಎಲ್ಲರೂ ಅಂಬೇಡ್ಕರ್ ಫೋಟೋ ಹಾಕಬೇಕು
ಹಿಂದೂ ಕೋಡಿಫಿಕೇಶನ್ ಬಿಲ್ ತಂದಿದ್ದು ಅಂಬೇಡ್ಕರ್. ಪ್ರತಿಯೊಬ್ಬ ಹಿಂದೂ ಅಂಬೇಡ್ಕರ್ ಫೋಟೋ ಹಾಕಬೇಕು. ಹಿಂದುತ್ವದ ಬಗ್ಗೆ ಮಾತನಾಡುವ ಎಲ್ಲರೂ ಅಂಬೇಡ್ಕರ್ ಫೋಟೋ ಹಾಕಬೇಕು. ಜೊತೆ ಜೊತೆಗೆ ನೆಹರು ಅವರ ಫೊಟೋ ಕೂಡ ಹಾಕಬೇಕು. ಹಿಂದೂ ಕೋಡ್ ಬಿಲ್ ಮೊದಲ ಪಾರ್ಲಿಮೆಂಟ್ ನಲ್ಲಿ ಪಾಸ್ ಆಗಲ್ಲ. ಆಗ ಅಂಬೇಡ್ಕರ್ ರಾಜೀನಾಮೆ ಕೊಡುತ್ತಾರೆ. ನೆಹರು ಅವರು ನಾಲ್ಕು ಹಂತದಲ್ಲಿ ಹಿಂದೂ ಕೋಡ್ ಬಿಲ್ ಪಾಸ್ ಮಾಡುತ್ತಾರೆ. ಇವರೇದೇನು ಕ್ರೆಡಿಟ್ ಇದೆ. ನೆಹರು ಪಾತ್ರ ಇದೆ ಅನ್ನೋದು ನಮ್ಮ ವಾದ, ಇವರ ಕ್ರೆಡಿಟ್ ಏನೂ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ನಿರ್ಮಾಣದಿಂದ ಬಡತನ ನಿರ್ಮೂಲನೆ ಆಗಲ್ಲ: ಸಂತೋಷ್ ಲಾಡ್
ನಮಗೆ ಭೂಮಿ ಸಿಗುತ್ತಿದ್ದರೆ ಬಾಬಾ ಸಾಹೇಬ್ ಅಂಬೇಡ್ಕರ್ ಕಾರಣ. ಯಾವ ಹಿಂದೂ ಸಂಘಟನೆಗಳು ಅಲ್ಲ. ರಾಮನ ಹೆಸರು ಹೇಳಿ ಹಿಂದೂ ಅಂತ ಮಾತಾಡಿದರೆ ಹಿಂದೂ ಆಗಲ್ಲ. ಕಾನೂನು ಯಾರ ತಂದರೂ ಅವರ ಪರವಾಗಿ ಮಾತನಾಡಬೇಕು. ರಾಮಸೇತು ವಿಚಾರವಾಗಿ ಪಾರ್ಲಿಮೆಂಟ್ನಲ್ಲಿ ಏನೂ ಉತ್ತರ ಕೊಟ್ಟಿದ್ದಾರೆ. ರಾಮ ಬಿಜೆಪಿ ಅವರಿಗೆ ಕಾಂಟ್ಯಾಕ್ಟ್ ಇದೆಯಾ? ನಮಗೂ ರಾಮನ ಬಗ್ಗೆ ಗೌರವ ಇದೆ. ರಾಮ ಮುಸ್ಲಿಂರಿಗೂ ಬೇಕು, ಶಿಖ್ರಿಗೂ ಬೇಕು. ಎಲ್ಲರಿಗೂ ಬೇಕು. ನಮಗೆ ದುರ್ಗಮ್ಮ ಬೇಕು, ಪಾಂಡುರಂಗ ಬೇಕು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.