ಹುಬ್ಬಳ್ಳಿಯಲ್ಲಿ ಮನೆ ಮುಂದೆ ನಿಲ್ಲಿಸಿದ ನೀರಿನ ಟ್ಯಾಂಕರ್ ಕದ್ದ ಕಿಲಾಡಿಗಳು; ಖದೀಮರ ಕೈ ಚಳಕ ಸಿಸಿಕ್ಯಾಮೆರಾದಲ್ಲಿ ಸೆರೆ
ಬೇಸಿಗೆ ಶುರುವಾಗುವ ಮೂದಲೇ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಇದರ ಮಧ್ಯೆ ಹುಬ್ಬಳ್ಳಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ನೀರಿನ ಟ್ಯಾಂಕರ್ನ್ನು ಕಳ್ಳತನ ಮಾಡಿದ್ದಾರೆ. ಖದೀಮರ ಕೈ ಚಳಕ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುಮಾರು ಎರಡು ಲಕ್ಷ ಮೌಲ್ಯದ ನೀರಿನ ಟ್ಯಾಂಕರ್ ಇದಾಗಿದ್ದು, ಜಮೀನಿಗೆ ನೀರು ಹಾಯಿಸಲು ಇಟ್ಟುಕೊಂಡಿದ್ದರು.
ಧಾರವಾಡ, ಫೆ.18: ಬೇಸಿಗೆ ಶುರುವಾಗುವುದರೊಳಗೆ ರಾಜ್ಯದಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಜೊತೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಬೆಲೆಯನ್ನು ಏರಿಸಲಾಗಿದೆ. ಈ ಮಧ್ಯೆ ಹುಬ್ಬಳ್ಳಿ(hubballi) ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ಮನೆ ಮುಂದೆ ನಿಲ್ಲಿಸಿದ ನೀರಿನ ಟ್ಯಾಂಕರ್ನ್ನು ಖದೀಮರ ಕಳ್ಳತನ ಮಾಡಿದ್ದಾರೆ. ಗ್ರಾಮದ ರೈತ ಶಿವಲಿಂಗಪ್ಪ ರೇವಣಕರ ಎಂಬುವವರಿಗೆ ಸೇರಿದ ಸುಮಾರು ಎರಡು ಲಕ್ಷ ಮೌಲ್ಯದ ನೀರಿನ ಟ್ಯಾಂಕರ್ ಇದಾಗಿದ್ದು, ಜಮೀನಿಗೆ ನೀರು ಹಾಯಿಸಲು ಇಟ್ಟುಕೊಂಡಿದ್ದರು.
ಖದೀಮರ ಕೈ ಚಳಕ ಸಿಸಿಕ್ಯಾಮೆರಾದಲ್ಲಿ ಸೆರೆ
ಇನ್ನು ನೀರಿನ ಟ್ಯಾಂಕರ್ ಕಳ್ಳತನ ಮಾಡಿಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರಯಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಟ್ಯಾಂಕರ್ನ್ನು ಟ್ರ್ಯಾಕ್ಟರ್ನಿಂದ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ರೈತ ಶಿವಲಿಂಗಪ್ಪ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಕಳ್ಳತನ ಮಾಡಿದಾಗ ಈತನ ವಯಸ್ಸು ಕೇವಲ 20 ವರ್ಷ, ಈಗ 80ನೇ ವಯಸ್ಸಿನಲ್ಲಿ ಬೀದರ್ ಪೊಲೀಸರಿಗೆ ಸಿಕ್ಕಿಬಿದ್ದ!
ಮೈಸೂರು ಜಿಲ್ಲೆಯಲ್ಲಿ ಬೋನಿಗೆ ಬಿದ್ದ ಚಿರತೆ
ಮೈಸೂರು: ಮೈಸೂರು ತಾಲ್ಲೂಕು ರಾಮನಹುಂಡಿ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದೆ. ಕಳೆದ ಹಲವು ದಿನಗಳಿಂದ ಗ್ರಾಮದ ಸುತ್ತ ಮುತ್ತ ಚಿರತೆ ಓಡಾಟ ನಡೆಸಿದ್ದು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿತ್ತು. ಈ ಹಿನ್ನಲೆ ರೈತ ನಾಗೇಶ್ ಅವರ ಜಮೀನಿನಲ್ಲಿ ಅರಣ್ಯ ಇಲಾಖೆ ಬೋನು ಇರಿಸಲಾಗಿತ್ತು. ಇದೀಗ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Sun, 18 February 24