ಜಮಖಂಡಿ: ಊರಿಗೆ ಬಂದ ಕೈ ಶಾಸಕನಿಗೆ ನಡೆಯಿತು ಅಭಿಮಾನಿಗಳಿಂದ  ಹಾಲಿನ ಅಭಿಷೇಕ

ಜಮಖಂಡಿ: ಊರಿಗೆ ಬಂದ ಕೈ ಶಾಸಕನಿಗೆ ನಡೆಯಿತು ಅಭಿಮಾನಿಗಳಿಂದ ಹಾಲಿನ ಅಭಿಷೇಕ

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 14, 2023 | 10:15 PM

ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಪಾದಯಾತ್ರೆ ಕೈಗೊಂಡಿರುವ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಹಾಗೂ ಅವರ ಸಹೋದರ ಬಸವರಾಜ ನ್ಯಾಮಗೌಡ ಅವರಿಗೆ ಇಂದು(ಫೆ.14) ಅವರ ಅಭಿಮಾನಿಗಳು ಆಲಗೂರ ಗ್ರಾಮದಲ್ಲಿ ಕ್ಷೀರಾಭಿಷೇಕ ಮಾಡಿದ್ದಾರೆ.

ಬಾಗಲಕೋಟೆ: ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಹಾಗೂ ಅವರ ಸಹೋದರ ಬಸವರಾಜ ನ್ಯಾಮಗೌಡ ಅವರಿಗೆ ಇಂದು(ಫೆ.14) ಅವರ ಅಭಿಮಾನಿಗಳು ಆಲಗೂರ ಗ್ರಾಮದಲ್ಲಿ ಕ್ಷೀರಾಭಿಷೇಕ ಮಾಡಿದ್ದಾರೆ. ಕೆಲವು ದಿನಗಳಿಂದ ಕ್ಷೇತ್ರದ ಪ್ರತಿ ಗ್ರಾಮ ಗ್ರಾಮದಲ್ಲೂ ಪಾದಯಾತ್ರೆ ಕೈಗೊಂಡಿರುವ ಶಾಸಕರು, ತಾವು ಮಾಡಿರುವ ಅಭಿವೃದ್ದಿ ಕಾರ್ಯ ಜೊತೆಗೆ ಬಿಜೆಪಿ ಸರ್ಕಾರದ ವೈಪಲ್ಯಗಳನ್ನು ಜನರಿಗೆ ತಲುಪಿಸುತ್ತಾ ಇದ್ದಾರೆ. ಈ ವೇಳೆ ಇಂದು ಆಲಗೂರಗೆ ಪಾದಯಾತ್ರೆ ಹೋಗಿದ್ದ ಸಮಯದಲ್ಲಿ ಶಾಸಕರಿಗೆ ಹಾಗೂ ಅವರ ಸಹೋದರನಿಗೆ ಹಾಲಿನ‌ ಅಭಿಷೇಕ ಮಾಡಿದ್ದಾರೆ. ಬಳಿಕ ಹೂಮಳೆಗರೆದ ಅಭಿಮಾನಿಗಳ ವಿಡಿಯೋ ಇದೀಗ ಫುಲ್​ ವೈರಲ್​ ಆಗಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ