ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ನೇತೃತ್ವದಲ್ಲಿ ನಡೆಯುತ್ತಿರವ ಪಂಚರತ್ನ ಯಾತ್ರೆ ಹೋದಲೆಲ್ಲ ವಿಶೇಷವಾದ ಉಡುಗೊರೆ ಮತ್ತು ಮಾಲೆಗಳನ್ನು ಹಾಕುವ ಮುಖಾಂತರ ಗಮನಸೆಳೆಯುತ್ತಿದೆ. ಅದೇ ರೀತಿಯಾಗಿ ಇಂದು (ಮಾ.14) ಜಿಲ್ಲೆಯ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ (Arsikere Assembly Constituency) ಪಂಚರತ್ನ ಯಾತ್ರೆ (Pancharatna Yatra) ನಡೆದಿದೆ. ಈ ವೇಳೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ರೈತರು ಹಾಗೂ ಜೆಡಿಎಸ್ ಕಾರ್ಯಕರ್ತರು ಕುಮಾರಸ್ವಾಮಿಯವರಿಗೆ ದುಬಾರಿ ಬೆಲೆಯ ಗಿಫ್ಟ್ ನೀಡಿದ್ದಾರೆ. ಹೌದು 2 ಲಕ್ಷ ರೂ. ಬೆಲೆಯ ಜೋಡೆತ್ತುಗಳನ್ನು ಗಂಡಸಿ ಹೋಬಳಿಯ ರೈತರು ಕಾಣಿಕೆಯಾಗಿ ನೀಡಿದ್ದು, ಎತ್ತುಗಳನ್ನು ಕುಮಾರಸ್ವಾಮಿ ಅವರ ಬಿಡದಿ ತೋಟಕ್ಕೆ ಸ್ಥಳಾಂತರ ಮಾಡಿದ್ದಾರೆ.