ಮಳೆಯಲ್ಲಿ ನೆನೆದುಕೊಂಡು ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ

Updated on: Jun 17, 2025 | 4:40 PM

ನಿಖಿಲ್ ಕುಮಾರಸ್ವಾಮಿಯನ್ನು ಪಕ್ಷದ ರಾಜ್ಯಾಧ್ಯಕ್ಷನ ಸ್ಥಾನಕ್ಕೇರಿಸಲು ಇನ್ನೂ ಕಾಲ ಪಕ್ವವಾಗಿಲ್ಲ ಅಂತ ಜನರ ಪ್ರತಿಕ್ರಿಯೆ ನೋಡಿ ಅರ್ಥಮಾಡಿಕೊಳ್ಳಬಹುದು. ವೇದಿಕೆಯ ಮುಂಭಾಗದಲ್ಲಿ ಸಾವಿರಾರು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆಯಾದರೂ, ಜನ ಮಾತ್ರ ಬಹಳ ಕಮ್ಮಿ, ಕುರ್ಚಿಗಳೆಲ್ಲ ಖಾಲಿ ಖಾಲಿ. ಮಳೆಯ ಕಾರಣ ಜನ ಬಂದಿರಲಿಕ್ಕಿಲ್ಲ ಅಂದುಕೊಳ್ಳುವ ಅವಕಾಶವಿದೆಯಾದರೂ ಅದ್ಯಾಕೋ ಸರಿಯೆನಿಸುವುದಿಲ್ಲ.

ತುಮಕೂರು, ಜೂನ್ 17: ಹಾಗೆ ನೋಡಿದರೆ ಕಳೆದ ತಿಂಗಳಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ನಿಖಿಲ್ ಕುಮಾರಸ್ವಾಮಿಯ ಪಟ್ಟಾಭಿಷೇಕ (coronation) ನಡೆಯಬೇಕಿತ್ತು. ಹಾಲಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವ ಅರೋಗ್ಯ ಸರಿಯಿರದ ಕಾರಣ ಪಟ್ಟಾಭಿಷೇಕ ಕಾರ್ಯಕ್ರಮ ಮುಂದೂಡಲ್ಪಟ್ಟಿರಬಹುದು. ಇವತ್ತು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವು ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿತ್ತು. ನಿಖಿಲ್ ಕಾರ್ಯಕ್ರಮಕ್ಕೆ ಮಳೆಯಲ್ಲಿ ನೆನೆದುಕೊಂಡೇ ಬಂದರು. ವೇದಿಕೆಗೆ ಆಗಮಿಸುವ ಮೊದಲು ನಿಖಿಲ್ ಕುಮಾರಸ್ವಾಮಿಯ ಮೆರವಣಿಗೆಯೂ ನಡೆಯಿತು. ವೇದಿಕೆಯ ಮೇಲೆ ಹೆಚ್ಚು ಯುವ ಕಾರ್ಯಕರ್ತರು ನೆರೆದಿದ್ದರು.

ಇದನ್ನೂ ಓದಿ:  ಬೆಂಗಳೂರಿನ ಸುರಕ್ಷಿತ ಸ್ಥಳದಲ್ಲಿ ಸುಭದ್ರ ಮನೆಕಟ್ಟಿಕೊಂಡವರು ಮಳೆ ಇನ್ನೂ ಸುರಿಯಲಿ ಎನ್ನುತ್ತಾರೆ: ನಿಖಿಲ್ ಕುಮಾರಸ್ವಾಮಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ