ಕುಮಾರಸ್ವಾಮಿ ಪ್ಯಾಂಟ್​ ಒಳಗೆ ಖಾಡಿ ಚಡ್ಡಿ ಇದೆ ಎಂಬ ಜಮೀರ್​ ಹೇಳಿಕೆಗೆ ಸಾರಾ ಮಹೇಶ್​ ತಿರುಗೇಟು

ಕುಮಾರಸ್ವಾಮಿ ಪ್ಯಾಂಟ್​ ಒಳಗೆ ಖಾಡಿ ಚಡ್ಡಿ ಇದೆ ಎಂಬ ಜಮೀರ್​ ಹೇಳಿಕೆಗೆ ಸಾರಾ ಮಹೇಶ್​ ತಿರುಗೇಟು

ವಿವೇಕ ಬಿರಾದಾರ
|

Updated on:Aug 06, 2024 | 12:10 PM

ಎನ್​ಡಿಎ ನಾಯಕರ ಮೈಸೂರು ಚಲೋಗೆ ಟಕ್ಕರ್​ ಕೊಡಲು ಕಾಂಗ್ರೆಸ್​ ಜನಾಂದಲೋನ ಕಾರ್ಯಕ್ರಮ ಮಾಡುತ್ತಿದೆ. ಈ ಕಾರ್ಯಕ್ರಮದಲ್ಲಿ ಸಚಿವ ಜಮೀರ್​ ಅಹ್ಮದ್​ ಖಾನ್​​ ಕೇಂದ್ರ ಸಚಿವ ಹೆಚ್​​ ಡಿ ಕುಮಾರಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಇದಕ್ಕ ಸಾರಾ ಮಹೇಶ ತಿರುಗೇಟು ನೀಡಿದ್ದಾರೆ.

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರ ಪ್ಯಾಂಟ್​ ಒಳಗೆ ಖಾಕಿ ಚಡ್ಡಿ ಇದೆ ಎಂದು ಸಚಿವ ಜಮೀರ್​ ಅಹ್ಮದ್​ ಲಘುವಾಗಿ ಮಾತನಾಡಿದ್ದರು. ಜನಾಂದೋಲನ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತ, ಕುಮಾರಸ್ವಾಮಿ ಪ್ಯಾಂಟ್​ ಓಳಗೆ ಬಿಜೆಪಿಯ ಗಟ್ಟಿ ಖಾಕಿ ಚಡ್ಡಿ ಇದೆ ಎಂದು ಹೇಳಿದ್ದರು. ಇದಕ್ಕೆ ಜೆಡಿಎಸ್​ ನಾಯಕ ಸಾರಾ ಮಹೇಶ್​ ಪ್ರತಿಕ್ರಿಯಿಸಿದ್ದು, ಸಚಿವ ಜಮೀರ್​ ಅಹ್ಮದ್​ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ದರಿದ್ರ ನಾರಾಯಣ ಹರಿ ಅಂತ 2006ರಲ್ಲಿ ಚಂದ ಎತ್ತಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ನಿಮ್ಮನ್ನು ಶಾಸಕರನ್ನಾಗಿ ಮಾಡಿದರು. ಲಘುವಾಗಿ ಮಾತನಾಡುವುದು ಸರಿ ಅಲ್ಲ. ಇದೆಲ್ಲವನ್ನು ನೋಡಿ ರಾಜಕಾರಣವನ್ನು ಜನ ಕೆಟ್ಟಾಗಿ ನೋಡುತ್ತಿದ್ದಾರೆ. ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ, ಸಿದ್ದರಾಮಯ್ಯ ಅವರೆ ಅಧಿಕಾರಕ್ಕಾಗಿ ಆತ್ಮಸಾಕ್ಷಿ ವಿರುದ್ಧ ನಡೆದುಕೊಳ್ಳಬೇಡಿ. ತಪ್ಪು ಮಾಡಿದವರನ್ನು ಕಂಬಿ ಹಿಂದೆ ಹಾಕಿ ಎಂದು ಒತ್ತಾಯಿಸಿದರು.

ಲೋಕಸಭೆ ಚುನಾವಣೆ ಹೊತ್ತಿನಲ್ಲೂ ಚಡ್ಡಿ ವಿಚಾರ ಪ್ರಸ್ತಾಪ

ಲೋಕಸಭೆ ಚುನಾವಣೆ ವೇಳೆ ಬಿಜೆಪಿ-ಜೆಡಿಎಸ್​ ಮೈತ್ರಿ ಕುರಿತು ಮಾತನಾಡಿದ್ದ ಜಮೀರ್​​ ಅಹ್ಮದ್​​, ಕುಮಾರಸ್ವಾಮಿ ಪ್ಯಾಂಟ್​ ಒಳಗೆ ಚಡ್ಡಿ ಇದೆ ಎಂದು ಅವರು ರುಜುವಾತು ಮಾಡಿದರು ಎಂದು ಲಘವಾಗಿ ಮಾತನಾಡಿದ್ದರು.

ಇದನ್ನೂ ಓದಿ: ಶಾಸಕರನ್ನೆಲ್ಲ ತೋಳಗಳಂತೆ ಹಣ ಕೀಳಲು ಬಿಟ್ಟಿದ್ದಾರೆ, ಆಯಕಟ್ಟಿನ ಪೋಸ್ಟಿಂಗ್​ಗೆ ಕೊಡಬೇಕು ಕೋಟಿ: ಭಾಸ್ಕರ್ ರಾವ್ ಆರೋಪ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

 

Published on: Aug 06, 2024 12:10 PM