ಜೆಡಿ(ಎಸ್) ಶಾಸಕ ರೇವಣ್ಣ ಈ ಬಾರಿ ಕೂಗಾಡಲು ಆರಿಸಿಕೊಂಡಿದ್ದು ಪ್ರತಿಭಟನೆಗೆ ಕುಳಿತ ಅಂಗನವಾಡಿ ಕಾರ್ಯಕರ್ತೆಯರನ್ನು!
ಮಕ್ಕಳ ಅಭಿವೃದ್ಧಿ ಯೋಜನೆ ಕಚೇರಿ ಎದುರುಗಡೆ ವರ್ಗಾವಣೆ ಮತ್ತು ಮುಂಬಡ್ತಿ ಆಗ್ರಹಿಸಿ ಪ್ರತಿಭಟನೆಗೆ ಕುಳಿತ ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಅವರು ಕೂಗಾಡಿದ್ದು ಈ ವಿಡಿಯೋನಲ್ಲಿದೆ.
ಹಾಸನ: ತಮ್ಮ ಕ್ಷೇತ್ರದ ಪೊಲೀಸರು ಮತ್ತು ಅಧಿಕಾರಿಗಳ ವಿರುದ್ಧ ಜೆಡಿ(ಎಸ್) ಶಾಸಕ ಹೆಚ್ ಡಿ ರೇವಣ್ಣ (HD Revanna) ತರಾಟೆಗೆ ತೆಗೆದುಕೊಳ್ಳುವುದು, ಸಾರ್ವಜನಿಕವಾಗಿ (publicly) ನಿಂದಿಸುವುದು ಹೊಸದೇನಲ್ಲ. ಅವರ ಕ್ಷೇತ್ರ ಹೊಳೆನರಸೀಪುರದಲ್ಲಿರುವ (Holenarasipura) ಮಕ್ಕಳ ಅಭಿವೃದ್ಧಿ ಯೋಜನೆ ಕಚೇರಿ ಎದುರುಗಡೆ ವರ್ಗಾವಣೆ ಮತ್ತು ಮುಂಬಡ್ತಿ ಆಗ್ರಹಿಸಿ ಪ್ರತಿಭಟನೆಗೆ ಕುಳಿತ ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಅವರು ಕೂಗಾಡಿದ್ದು ಈ ವಿಡಿಯೋನಲ್ಲಿದೆ.